
ಉತ್ತರಪ್ರದೇಶದ ಮೀರತ್‌ನಲ್ಲಿ ಸ್ನೇಹಿತರೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಘಟನೆಯ ದೃಶ್ಯಾವಳಿ ಸಮೀಪದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಯುವಕ ಸ್ನೇಹಿತನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಒಮ್ಮೆಲೇ ಕುಸಿದು ಬೀಳುತ್ತಾನೆ.
ಪ್ರಜ್ಞೆ ತಪ್ಪಿ ಬಿದ್ದ ಆತನನ್ನು ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಾಗಲೇ ಆತ ಅಸು ನೀಗಿದ್ದಾನೆ.ಮೀರತ್‌ನ ಕಿದ್ವಾಯಿ ನಗರದ ಅಹ್ಮದ್ ನಗರದಲ್ಲಿ ಡಿಸೆಂಬರ್ 2 ರಂದು ರಾತ್ರಿ ಈ ಅನಾಹುತ ನಡೆದಿದೆ.
ನಾಲ್ವರು ಯುವಕರು ಪರಸ್ಪರ ಮಾತನಾಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಮುಂದೆ ಹೋಗುತ್ತಿರುವಾಗ ಒಬ್ಬ ಯುವಕ ತಲೆಯನ್ನು ಹಿಡಿದುಕೊಂಡು ಕುಸಿದು ಕೆಳಗೆ ಬೀಳುತ್ತಾನೆ.
ಗಂಟಲಲ್ಲಿ ಏನೋ ಸಿಕ್ಕಿ ಹಾಕಿಕೊಂಡಂತೆ ಕೈಯನ್ನು ಕುತ್ತಿಗೆಯನ್ನು ಹಿಡಿದುಕೊಂಡು ಹೊರಳಾಡಿದ್ದಾನೆ. ಕೂಡಲೇ ಸ್ನೇಹಿತರುಏಳಿಸಲು ಪ್ರಯತ್ನ ಮಾಡಿದ್ದಾರೆ.
ಆದರೆ ಆಗಲಿಲ್ಲ. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.