ಅಪರಾಧರಾಷ್ಟ್ರಿಯ

VLC media player Ban:ಜನರ ವೈಯಕ್ತಿಕ ಡೇಟಾವನ್ನು ಶೇರ್ ಮಾಡುತ್ತಿದ್ದ ಆರೋಪ : ಈ ಮಿಡಿಯಾ ಸೈಟ್ ಗೆ ಸರ್ಕಾರ ನಿಷೇಧ

ವಿಎಲ್‌ಸಿ ಮೀಡಿಯಾ ಪ್ಲೇಯರ್‌ನ ವೆಬ್‌ಸೈಟ್ ಗೆ ನಿರ್ಬಂಧ ಹೇರಲು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಆದೇಶಿಸಿದೆ. ಮೂಲಗಳ ಪ್ರಕಾರ, ಸಚಿವಾಲಯವು ಈಗಾಗಲೇ ನಿಷೇಧಿಸಿರುವ ಅಪ್ಲಿಕೇಶನ್‌ನ ಸರ್ವರ್‌ನೊಂದಿಗೆ ಸೈಟ್ ಸಂವಹನ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ, ಸರ್ಕಾರ ಈ ಆದೇಶ ಹೊರಡಿಸಿದೆ.

ಅದು ಭಾರತೀಯರ ಸೂ ಕ್ಷ್ಮ ವೈಯಕ್ತಿಕ ಡೇಟಾವನ್ನು ಬೇರೆ ದೇಶಗಳಿಗೆ ವರ್ಗಾಯಿಸುತ್ತಿತ್ತು.

VLC ಮೀಡಿಯಾ ಪ್ಲೇಯರ್ ಅನ್ನು ನಿರ್ವಹಿಸುವ ಸಂಸ್ಥೆಯಾದ VideoLAN ನ ವೆಬ್‌ಸೈಟ್ ಅನ್ನು ನಿರ್ಬಂಧಿಸುವ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯ ವಿನಂತಿಸಿದೆ.

ಆಪ್ ಸ್ಟೋರ್‌ನಲ್ಲಿ ಲಭ್ಯ :VLC ಮೀಡಿಯಾ ಪ್ಲೇಯರ್ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಬಹುದಾದ VideoLAN, videolan.org ನ URL ಅನ್ನು ಫೆಬ್ರವರಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ 69(a) ಅಡಿಯಲ್ಲಿ ದೇಶದಲ್ಲಿ ನಿರ್ಬಂಧಿಸಲಾಗಿತ್ತು.

ಆದರೂ, VLC ಮೀಡಿಯಾ ಪ್ಲೇಯರ್ ಸಾಫ್ಟ್‌ವೇರ್ Google ಮತ್ತು Apple ನ ಆಪ್ ಸ್ಟೋರ್‌ ನಿಂದ ಡೌನ್‌ಲೋಡ್ ಮಾಡಬಹುದಾಗಿತ್ತು.

ಕಂಪನಿಯಿಂದ ನೋಟಿಸ್ ಜಾರಿ : ಯಾವ ಕಾರಣಗಳಿಂದ ಭಾರತದಲ್ಲಿ ಸೈಟ್ ಅನ್ನು ನಿರ್ಬಂಧಿಸಲಾಗುತ್ತಿದೆ ಎಂದು ಕೋರಿ, ಈ ತಿಂಗಳ ಆರಂಭದಲ್ಲಿ, ವೀಡಿಯೊಲ್ಯಾನ್ ಕಂಪನಿಯು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಮತ್ತು ದೂರಸಂಪರ್ಕ ಇಲಾಖೆಗೆ ನೋಟೀಸ್ ಕಳುಹಿಸಿತ್ತು.

ಅದರಲ್ಲಿ URLಬ್ಲಾಕ್ ಮಾಡುವಂತೆ ಆದೇಶಿಸಿರುವ ಆದೇಶ ಪ್ರತಿಯನ್ನು ನೀಡುವಂತೆಯೂ ಕೇಳಿತ್ತು.

MeitYಯ ಉತ್ತರ : ಕಂಪನಿಯ ಈ ನೋಟೀಸ್ ಗೆ ಪ್ರತ್ಯುತ್ತರವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು, ಇಂಟರ್ನೆಲ್ ನೋಟ್ ಸಿದ್ದಪಡಿಸಿದ್ದು, ಅದನ್ನು VideoLAN ನೊಂದಿಗೆ ಹಂಚಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ.

ವೈಯಕ್ತಿಕ ಡೇಟಾ ವರ್ಗ:ಸಚಿವಾಲಯದ ಪ್ರಕಾರ, VideoLAN ನ ವೆಬ್‌ಸೈಟ್ Onmyoji Arena ಎಂಬ ಅಪ್ಲಿಕೇಶನ್‌ನೊಂದಿಗೆ ‘ಸಂವಹನ’ ಮಾಡುತ್ತಿದೆ ಮತ್ತು ಸೈಟ್ ಸಂಗ್ರಹಿಸಿದ ಡೇಟಾವನ್ನು ಈ ಅಪ್ಲಿಕೇಶನ್ ಮೂಲಕ ‘ಬೇರೆ ದೇಶ’ಕ್ಕೆ ವರ್ಗಾಯಿಸಲಾಗಿದೆ. ಪ್ರತ್ಯೇಕ ತಾಂತ್ರಿಕ ಮೌಲ್ಯಮಾಪನ ಸಮಿತಿ ಕೂಡ ಈ ಅಂಶವನ್ನು ದೃಢಪಡಿಸಿದೆ.

ಚೀನೀ-ಲಿಂಕ್‌ಗಳು ಮತ್ತು ಭಾರತಕ್ಕೆ ರಾಷ್ಟ್ರೀಯ ಭದ್ರತೆಯ ಅಪಾಯವನ್ನುಂಟುಮಾಡುತ್ತದೆ ಎಂದು ಆರೋಪಿಸಿ ಫೆಬ್ರವರಿಯಲ್ಲಿ MeitY ನಿಂದ ನಿರ್ಬಂಧಿಸಲು ಆದೇಶಿಸಲಾದ 54 ಅಪ್ಲಿಕೇಶನ್‌ಗಳಲ್ಲಿ Onmyoji Arena ಕೂಡಾ ಒಂದಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button