Viral ಜೀನ್ಸ್ ತೊಟ್ಟು ಯುವತಿ ಕೆನ್ನೆಗೆ ಮುತ್ತಿಕ್ಕುವ ಚಿಂಪಾಂಜಿ

chimpanzee in jeans: ಜೀನ್ಸ್ ತೊಟ್ಟಿರುವ ಚಿಂಪಾಂಜಿಯೊಂದು ಮಹಿಳೆಗೆ ಮುತ್ತಿಕ್ಕುತ್ತಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಯಾವಾಗಲೂ ತೀವ್ರವಾದ ಭಾವನೆಗಳನ್ನು ಪ್ರದರ್ಶಿಸುವುದು ಕೇವಲ ಮನುಷ್ಯ ಮಾತ್ರವಲ್ಲ, ಪ್ರಾಣಿಗಳು ಸಹ ತಮ್ಮ ಮಮತೆಯನ್ನು ವ್ಯಕ್ತಪಡಿಸುತ್ತವೆ.
ಈ ಇತ್ತೀಚಿನ ವೈರಲ್ ವಿಡಿಯೋ ಅದಕ್ಕೆ ಸಾಕ್ಷಿಯಾಗಿದೆ. ಕೆಲಸದ ಒತ್ತಡ ಹೆಚ್ಚಿದ್ದರೆ ಕೊಂಚ ಬಿಡುವು ಮಾಡಿಕೊಂಡು ಈ ವಿಡಿಯೋ ನೋಡಿ. ನಕ್ಕು ನಕ್ಕು ನಿಮಗೆ ಸುಸ್ತಾಗುವುದು ಗ್ಯಾರಂಟಿ.
ಸೌಮ್ಯಾ ಚಂದ್ರಶೇಖರನ್ ಎಂಬ Instagram ಬಳಕೆದಾರರು ಇತ್ತೀಚೆಗೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುವ ಸಫಾರಿ ವರ್ಲ್ಡ್‌ಗೆ ಭೇಟಿ ನೀಡಿದ್ದರು. ಈ ವೇಳೆ ಚಿಂಪಾಂಜಿಯೊಂದಿಗೆ ಫೋಟೋಶೂಟ್ ಮಾಡಿದ್ದಾರೆ. ಅಲ್ಲದೇ ಕಿರು ವಿಡಿಯೋವನ್ನು ಸಹ ಮಾಡಿದ್ದಾರೆ. ಈ ವಿಡಿಯೋ ಇದುವರೆಗೆ 5.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು 255,288 ಲೈಕ್‌ಗಳನ್ನು Instagram ನಲ್ಲಿ 20 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಸ್ವೀಕರಿಸಿದೆ.
ವೈರಲ್ ವಿಡಿಯೋದಲ್ಲಿ, ಸೌಮ್ಯಾ ಸ್ವಿಂಗ್ ಮೇಲೆ ಕುಳಿತಿರುವುದನ್ನು ಮತ್ತು ಚಿಂಪಾಂಜಿ ಅವರ ಪಕ್ಕದಲ್ಲಿ ಜೀನ್ಸ್ ಧರಿಸಿ ನಿಂತಿರುವುದನ್ನು ಕಾಣಬಹುದು. ಚಿಂಪಾಂಜಿ ಸೌಮ್ಯಾ ಹೆಗಲ ಮೇಲೆ ತನ್ನ ಕೈಗಳನ್ನು ಹಾಕಿಕೊಂಡು ಅವರ ಕೆನ್ನೆಗೆ ಮುತ್ತಿಕ್ಕುತ್ತದೆ. ಈ ಮುದ್ದಾದ ವಿಡಿಯೋ ನೆಟ್ಟಿಗರ ಮನಸೆಳೆಯುತ್ತಿದೆ.