ಉದ್ಯೋಗ

UIDAI Bengaluru Recruitment 2022: ಬೆಂಗಳೂರಿನ ಆಧಾರ್​ ಕೇಂದ್ರದಲ್ಲಿ ಉದ್ಯೋಗವಕಾಶ

ಬೆಂಗಳೂರು (ಆ.13): UIDAI ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಬೆಂಗಳೂರಿನ ಯುಐಡಿಎಐಯಲ್ಲಿ 7 ಸೆಕ್ಷನ್ ಆಫೀಸರ್, ಸಹಾಯಕ ವಿಭಾಗ ಅಧಿಕಾರಿ, ಖಾಸಗಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು 27 ಹುದ್ದೆಗಳು ಖಾಲಿ ಇದ್ದು ಆಫ್​ಲೈನ್ ಮೂಲಕ ಅರ್ಜಿ​ ಸಲ್ಲಿಸಲು ಸೆಪ್ಟೆಂಬರ್​ 26 ಕೊನೆಯ ದಿನವಾಗಿದೆ. ಡೆಪ್ಯೂಟೆಶನ್​ ಆಧಾರದ ಮೇಲೆ ಈ ಹುದ್ದೆಗಳ ಭರ್ತಿ ಮಾಡಲಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಈ ಡೆಪ್ಯೂಟೆಶನ್​ ಆಧಾರದ ಮೇಲೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ನೇಮಕಾತಿ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ. UIDAI ಇತ್ತೀಚೆಗೆ ಖಾಸಗಿ ಕಾರ್ಯದರ್ಶಿ, ಸಹಾಯಕ ವಿಭಾಗ ಅಧಿಕಾರಿ ಮತ್ತು ಇತರ ಉದ್ಯೋಗಗಳಿಗಾಗಿ ಅಧಿಸೂಚನೆಯನ್ನು ನವೀಕರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಯುಐಡಿಎಐನಲ್ಲಿ ಉದ್ಯೋಗಗಳಿಗೆ ಅರ್ಹತೆ ಯಾವುದೇ ಪದವಿ ಪ್ರಮಾಣಪತ್ರದ ಅರ್ಹತೆಯಾಗಿದೆ. ವಯೋಮಿತಿಗಿಂತ ಕಡಿಮೆ ಇರುವ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸುವಂತಿಲ್ಲ. ಬೆಂಗಳೂರಿನಲ್ಲಿ ಖಾಸಗಿ ಕಾರ್ಯದರ್ಶಿ, ಸಹಾಯಕ ಸೆಕ್ಷನ್ ಆಫೀಸರ್ ಮತ್ತು ಇತರೆ ಉದ್ಯೋಗಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.

ಡೆಪ್ಯುಟೇಶನ್ ಅವಧಿಯು 5 ವರ್ಷಗಳು. ಆಧಾರ್ ನೇಮಕಾತಿ ಅಧಿಸೂಚನೆ ಮತ್ತು UIDAI ನೇಮಕಾತಿ ಅರ್ಜಿ ನಮೂನೆ uidai.gov.in ನಲ್ಲಿ ಲಭ್ಯವಿದೆ. ಕರ್ನಾಟಕ ಉದ್ಯೋಗಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳು ತಮ್ಮ ಅರ್ಹತೆಯನ್ನು ಪರಿಶೀಲಿಸಬೇಕು ಅಂದರೆ ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ಅನುಭವ ಮತ್ತು ಇತ್ಯಾದಿ. UIDAI ಆಯ್ಕೆಯು ಪರೀಕ್ಷೆ ಅಥವಾ ಸಂದರ್ಶನವನ್ನು ಆಧರಿಸಿರುತ್ತದೆ ಮತ್ತು ಶಾರ್ಟ್‌ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದೆಹಲಿ, ಭೋಪಾಲ್, ಬೆಂಗಳೂರು ಮತ್ತು ರಾಂಚಿಯಲ್ಲಿ ಕೆಲಸಕ್ಕೆ ನೇಮಿಸಲಾಗುತ್ತದೆ. uidai.gov.in ನೇಮಕಾತಿ, UIDAI ಹೊಸ ಖಾಲಿ ಹುದ್ದೆ, ಮುಂಬರುವ ಸೂಚನೆಗಳು, ಪಠ್ಯಕ್ರಮ, ಉತ್ತರ ಕೀ, ಮೆರಿಟ್ ಪಟ್ಟಿ, ಆಯ್ಕೆ ಪಟ್ಟಿ, ಪ್ರವೇಶ ಕಾರ್ಡ್, ಫಲಿತಾಂಶ, ಮುಂಬರುವ ಕೇಂದ್ರ ಸರ್ಕಾರದ ಉದ್ಯೋಗಗಳ ಅಧಿಸೂಚನೆಗಳು ಮತ್ತು ಇತ್ಯಾದಿಗಳ ಹೆಚ್ಚಿನ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

ಅರ್ಹ ಅಧಿಕಾರಿಗಳು ನಿಯಮಿತವಾಗಿ ಸಮಾನವಾದ ಹುದ್ದೆಗಳನ್ನು ಹೊಂದಿರಬೇಕು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆರಿಸಲಾಗುತ್ತದೆ. ನಿರ್ದೇಶಕರು (ಎಚ್​ಆರ್​​), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಪ್ರಾದೇಶಿಕ ಕಚೇರಿ, 3ನೇ ಮಹಡಿ, ದಕ್ಷಿಣ ಭಾಗ, ಖನಿಜ ಭವನ, ನಂ. 49, ರೇಸ್ ಕೋರ್ಸ್ ರಸ್ತೆ, ಬೆಂಗಳೂರು- 560001.

ಕಾನೂನು ಪದವೀದರರಿಗೆ ಅರ್ಜಿ ಆಹ್ವಾನ: ಬಾಗಲಕೋಟೆ ಜಿಲ್ಲೆಯ ಪ್ರಸ್ತುತ ಸಾಲಿನ ಹಿಂದುಳಿದ ವರ್ಗಗಳ ಕಾನೂನು ಪದವಿಯನ್ನು ಹೊಂದಿದ ಅಭ್ಯರ್ಥಿಗಳಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಭರ್ತಿಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ10 ರಿಂದ ಸೆಪ್ಟಂಬರ್‌ 9 ರೊಳಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಕೊಠಡಿ ಸಂ: 101 ಜಿಲ್ಲಾಡಳಿತ ಭವನ ನವನಗರ ಬಾಗಲಕೋಟೆ ಇಲ್ಲಿ ಸಲ್ಲಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button