Uncategorized

SHOCKING NEWS : ವಾಟ್ಸಾಪ್‌ನಲ್ಲಿ ಪ್ರಿಯಕರ ನಂಬರ್ ಬ್ಲಾಕ್ ಮಾಡಿದ್ದಕ್ಕೆ ನೇಣಿಗೆ ಶರಣಾದ ಯುವತಿ

ಮುಂಬೈ : ವಾಟ್ಸಾಪ್‌ನಲ್ಲಿ ತನ್ನ ನಂಬರ್ ಬ್ಲಾಕ್ ಮಾಡಿದಕ್ಕೆ 20 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪನಗರದ ದಹಿಸರ್‌ನಲ್ಲಿ ರೈಲ್ವೆ ಹಳಿಯ ಬದಿಯಲ್ಲಿ ನಡೆದಿದೆ.
ಪ್ರಣಾಲಿ ಲೋಕರೆ ಮೃತ ಯುವತಿ ಎಂದು ಗುರುತಿಸಲಾಗಿದೆ. ಯುವತಿ ಮತ್ತು ಆಕೆಯ 27 ವರ್ಷದ ಯುವಕ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಭಾನುವಾರ ರಾತ್ರಿ ಪರಿಚಯಸ್ಥರ ಮದುವೆಗೆ ತೆರಳಿದ್ದರು. ಇದಾದ ಬಳಿಕ ಯವತಿ ತನ್ನ ಪ್ರೇಮಿಯೊಂದಿಗೆ ರಾತ್ರಿ ಅವನ ಮನೆಯಲ್ಲಿ ಇರಬೇಕೆಂದು ಒತ್ತಾಯಿಸಿದಳು. ಆದರೆ ಯುವಕ ಒಪ್ಪದೆ ಯುವತಿಯನ್ನು ಮನೆಗೆ ಹೋಗುವಂತೆ ಹೇಳಿದ್ದಾನೆ.

ಇದಾದ ನಂತರ ತಾನು ಹೊರಟು ಹೋದೆ ಎಂದ ಯುವತಿ, ತಕ್ಷಣ ತನ್ನ ಗೆಳೆಯನಿಗೆ ಪದೇ ಪದೇ ಕರೆ ಮಾಡಲು ಪ್ರಾರಂಭಿಸಿದ್ದಾಳೆ. ಯುವತಿಯ ಕಿರಿ ಕಿರಿಯಿಂದ ಬೇಸತ್ತು ಯುವಕ, ಯುವತಿಯ ನಂಬರ್ ಅನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದಾನೆ. ಇದರಿಂದ ಕೋಪಗೊಂಡ ಯುವತಿ, ಯುಕ ಮನೆಗೆ ತೆರಳಿ ವಾಟ್ಸಾಪ್‌ನಲ್ಲಿ ತನ್ನ ನಂಬರ್ ಬ್ಲಾಕ್ ಮಾಡಿದ್ದನ್ನು ಪ್ರಶ್ನಿಸಿ ಇಬ್ಬರ ನಡುವೆ ಜಗಳವಾಗಿದೆ.
ಬಳಿಕ ಯುವತಿ, ಯವಕನ ಮನೆಯಲ್ಲಿ ಉಳಿದ್ದಿದ್ದಾಳೆ. ಬೆಳಗ್ಗೆ ಎದ್ದು ನೋಡಿದಾಗ ಆಕೆ ಫ್ಯಾನ್​ಗೆ ವೇಲ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ಯುವಕ ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕಸ್ಕಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button