ಮಾರುಕಟ್ಟೆ

SHOCKING : ಅಮೆಜಾನ್‌ನಲ್ಲಿ ಪ್ಲಾಸ್ಟಿಕ್ ಬಕೆಟ್ ಬೆಲೆ ಬರೋಬ್ಬರಿ 25 ಸಾವಿರ : EMI ಮೂಲಕ ಖರೀದಿಗೆ ಲಭ್ಯ!

NCIB : ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ಶಾಂಪಿಂಗ್​ ಪ್ಲಾಟ್​ಫಾರ್ಮ್​ಗಳಿಗೇನು ಕಡಿಮೆಯಿಲ್ಲ. ವಿಶೇಷವಾಗಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿರುತ್ತವೆ.

ಈಗೀನ ದಿನಗಳಲ್ಲಿ ಹೆಚ್ಚಿನ ಜನರು ಶಾಪಿಂಗ್​ ಮಾಲ್​ಗಳಿಗೆ ತೆರಳುವ ಬದಲು ಸುಲಭವಾಗಿ ಆನ್​​ಲೈನ್​​ನಲ್ಲಿ ಸಿಗುವ ವಸ್ತುಗಳನ್ನು ಖರೀದಿಸಲು ಇಚ್ಚಿಸುತ್ತಾರೆ.

ಇ-ಕಾಮರ್ಸ್​​ನ ಸಾಮಾನ್ಯ ಸಮಸ್ಯೆ ಎಂದರೆ ನೆಚ್ಚಿನ ವಸ್ತುಗಳಿಗೆ ಬೇಡಿಕೆ ಹೆಚ್ಚಾದಾಗ, ಸ್ಟಾಕ್ ಖಾಲಿಯಾಗುತ್ತದೆ ಮತ್ತು ಜನರು ಅದಕ್ಕಾಗಿ ಕಾಯಬೇಕಾಗುತ್ತದೆ. ಕೆಲವೊಮ್ಮೆ ಬೇಡಿಕೆ ಹೆಚ್ಚಾದಾಗ ಬೆಲೆಯೂ ಹೆಚ್ಚುತ್ತದೆ. ಆನ್​ಲೈನ್ ಶಾಪಿಂಗ್​​ ಬೆಲೆಯಲ್ಲಿ ಏರಿಳಿತಗಳು ಸಾಮಾನ್ಯವಾಗಿದೆ.

ಆದರೆ ಕೆಲವೊಮ್ಮೆ ಜನರು ಊಹಿಸಲೂ ಸಾಧ್ಯವಾಗದಷ್ಟು ಬೆಲೆ ಹೆಚ್ಚಾಗುತ್ತದೆ.ಆನ್​ಲೈನ್​​ ದೈತ್ಯ ಕಂಪನಿ ಅಮೆಜಾನ್ ಇಂಡಿಯಾದಲ್ಲಿ ಇತ್ತೀಚೆಗೆ ಇದೇ ರೀತಿಯ ಘಟನೆ ನಡೆದಿದೆ. ನೆಟಿಜನ್​ಗಳು ಈಗ ಆನ್​ಲೈನ್​ನಲ್ಲಿ ದುಬಾರಿ ಐಷಾರಾಮಿ ಉತ್ಪನ್ನಗಳನ್ನು ನೋಡುವ ಅಭ್ಯಾಸವನ್ನು ಹೊಂದಿದ್ದು, ಅಮೆಜಾನ್​ನಲ್ಲಿ ಪ್ಲಾಸ್ಟಿಕ್ ಬಕೆಟ್ ಅನ್ನು 25,900 ರೂ.ಗೆ ಮಾರಾಟ ಮಾಡುತ್ತಿರುವ ಬಗ್ಗೆ ಹೇಳಿದ್ದಾರೆ. ಇದನ್ನು ಕಂಡು ಬಹುತೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಅಮೆಜಾನ್​​ ಕೆಂಪು ಬಣ್ಣದ ಬಕೆಟ್ ಅನ್ನು 25,999 ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಬಕೆಟ್​ನ ವಾಸ್ತವಿಕ ಬೆಲೆ 35,900 ರೂ. ಇದನ್ನು ಶೇ. 28 ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ಈ ಬಕೆಟ್ ಖರೀದಿಸಲು ಜನರಿಗೆ ಇಎಂಐ ಆಯ್ಕೆಯನ್ನು ಸಹ ನೀಡಲಾಗುತ್ತಿದೆ. ಬಕೆಟ್​ನ ಸ್ಕ್ರೀನ್​ಶಾಟ್ ಅನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡ ಕೂಡಲೇ, ಕೆಲವು ನೆಟಿಜನ್​ಗಳು ಪಟ್ಟಿಯಲ್ಲಿರುವ ತಾಂತ್ರಿಕ ದೋಷದಿಂದ ಇದು ಸಂಭವಿಸಿದೆ ಎಂದು ತಿಳಿಸಿದ್ದಾರೆ.ಇನ್ನು ಕೆಲವರು ಇಎಂಐನಲ್ಲಿ ಬಕೆಟ್ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದು ತಮಾಷೆ ಮಾಡಿದ್ದಾರೆ. ಆನ್​ಲೈನ್​​ ಫ್ಲಾಟ್​ಫಾರ್ಮ್​ಗಳಲ್ಲಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವ ಯೋಚನೆಯನ್ನು ಹೊಂದಿದೆ. ಆದರೆ ಒಂದು ಪ್ಲಾಸ್ಟಿಕ್ ಬಕೆಟ್ ಬೆಲೆ ಟಿವಿ ಬೆಲೆಗೆ ಏರಿಕೆಯಾಗಿರುವುದು ಬಹುತೇಕರಿಗೆ ಅಚ್ಚರಿ ಎನಿಸಿದೆ.ಪ್ರಸ್ತುತ ಉತ್ಪನ್ನವು ಸ್ಟಾಕ್​​ನಿಂದ ಹೊರಗಿದೆ ಎಂದು ಕೆಲವು ನೆಟಿಜನ್​ಗಳು ಹೇಳಿದ್ದಾರೆ.

ಉತ್ಪನ್ನದ ಬೆಲೆಯನ್ನು ಇದೀಗ ಪುಟದಿಂದ ತೆಗೆದುಹಾಕಲಾಗಿದೆ. ಆದರೆ ನೆಟಿಜನ್​ಗಳು ಟ್ವಿಟರ್​ನಲ್ಲಿ ಅದಕ್ಕೆ ತರಹೇವಾರಿ ಕಮೆಂಟ್​ ಮಾಡುತ್ತಿದ್ದಾರೆ.ಕೆಲ ದಿನಗಳ ಹಿಂದೆ, ಐಷಾರಾಮಿ ಫ್ಯಾಷನ್ ಲೇಬಲ್ ಗುಸ್ಸಿ ಮತ್ತು ಕ್ರೀಡಾ ಉಡುಪುಗಳ ದೈತ್ಯ ಅಡಿಡಾಸ್ ಚೀನಾದಲ್ಲಿ ‘ಸನ್ ಅಂಬ್ರೆಲ್ಲಾ’ ಹೆಸರಿನಲ್ಲಿ ಕೆಲವು ವಿನ್ಯಾಸಗಳನ್ನು ಮಾರಾಟ ಮಾಡಿದ್ದಕ್ಕಾಗಿ ಟೀಕೆಗೆ ಒಳಗಾಗಿದ್ದವು.

ಎರಡೂ ಕಂಪನಿಗಳು ಹೆಚ್ಚು ಟ್ರೋಲ್​ಗೆ ಒಳಗಾಗಿದ್ದವು. ಏಕೆಂದರೆ ಛತ್ರಿಗಳು ಜಲನಿರೋಧಕವಲ್ಲ ಮತ್ತು ಒಂದರ ಬೆಲೆ 11,100 ಯುವಾನ್ ಅಂದರೆ ₹ 1.27 ಲಕ್ಷ ಎಂದು ಹೇಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button