RSS ಅವು ಮೂಲ ಭಾರತದವರೇ ಅಲ್ಲ ಎಂದ ಸಿದ್ದರಾಮಯ್ಯ.. ಹೌದೌದು ಎಂದ ಖರ್ಗೆ…

NCIB ಬೆಂಗಳೂರು: ಆರ್‌ಎಸ್ಎಸ್ ನವರು ಮೂಲ ಭಾರತದವರಾ..?
ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ನೆಹರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ, ಇವತ್ತಿನ ಪ್ರಧಾನಿಗೆ ನೆಹರು ಹೋಲಿಕೆ ಸರಿಯಲ್ಲ.
ನೆಹರೂ ಎಲ್ಲಿ, ಮೋದಿ ಎಲ್ಲಿ..? ಆಕಾಶ ಭೂಮಿಗಿರುವ ಅಂತರವಿದೆ. ನೆಹರು ಸಾಧನೆ ಅಳಿಸುವ ಕೆಲಸ ಮಾಡ್ತಿದ್ದಾರೆ. ಪಂಚವಾರ್ಷಿಕ ಯೋಜನೆಗಳನ್ನ ತೆಗೆದಿದ್ದಾರೆ. ಅದರ ಜಾಗದಲ್ಲಿ ನೀತಿ ಆಯೋಗ ತಂದಿದ್ದಾರೆ.
ನೀತಿ ಆಯೋಗ ಸರ್ಕಾರದ ಕೈಗೊಂಬೆಯಾಗಿದೆ ಎಂದು ಅವರು ಹೇಳಿದ್ದಾರೆ.ಆರ್‌ಎಸ್ಎಸ್ ನವರು ಮೂಲ ಭಾರತದವರಾ?ಯುವಕರ ದಾರಿ ತಪ್ಪಿಸಿ, ವೈಜ್ಞಾನಿಕತೆಯನ್ನು ದೂರ ಮಾಡಿ ಮೂಡ ನಂಬಿಕೆಗಳಿಗೆ ದಾಸರನ್ನಾಗಿ ಮಾಡೋ ಕೆಲಸ ಮಾಡ್ತಿದ್ದಾರೆ. ಇದಕ್ಕೆ ಉದಾಹರಣೆ ಎಂದರೇ ರೋಹಿತ್ ಚಕ್ರತೀರ್ಥ ಎಂಬಾತನಿಗೆ ಪುಸ್ತಕ ರಚನೆಗೆ ಅವಕಾಶ ಕೊಟ್ಟಿರೋದು. ರೋಹಿತ್ ಚಕ್ರವರ್ತಿ ಅವನು ಹೆಜ್ಜೆವಾರ್ ಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾನೆ. ಅವನ ಕೈಯಲ್ಲಿ ಪಠ್ಯ ಪುಸ್ತಕ ಮಾಡೋಕೆ ಕೊಟ್ಟರೇ ಏನಾಗುತ್ತೆ ಮತ್ತೆ? ಹಳೇದೆಲ್ಲ ಕೆದಕ್ಕಿದ್ದಾರೆ, ಹಾಗಾದರೆ ಇವರು ಮೂಲಭಾರತದವರಾ? ಈ ಆರ್‌ಎಸ್ಎಸ್ ನವರು ಮೂಲ ಭಾರತದವರಾ? ಆರ್ಯರು ಈ ದೇಶದವರಾ? ಏನು ದ್ರಾವಿಡರಾ ಇವರು? ಆರು ನೂರು ವರ್ಷ ಮೊಘಲರು ಬಂದು ಆಳಲು ಯಾರು ಕಾರಣ? ಬ್ರಿಟಿಷರು ಇನ್ನೂರು ವರ್ಷಗಳ ಕಾಲ ಆಳಲು ಯಾರು ಕಾರಣ ಎಂದು ಪ್ರಶ್ನೆ ಮಾಡಿದರು.ನೀವು ಹಿಟ್ಲರ್ ವಂಶದವರು ಅಂತ ಹೇಳಿದ್ದೆ..ಈ ವೇಳೆ ಮಧ್ಯ ಪ್ರವೇಶ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ನಾನು ಪಾರ್ಲಿಮೆಂಟಲ್ಲೇ ಇದನ್ನ ಹೇಳಿದೆ.
ಬಿಜೆಪಿಯವರೆಲ್ಲ ಶಾರೂಖ್ ಖಾನ್ ಹೊರ ದೇಶಕ್ಕೆ ಹೋಗಲಿ ಅಂತಿದ್ರು. ಅದಕ್ಕೇ ನಾನು ಹೇಳಿದೆ ನೀವು ಇಲ್ಲಿಯವರಾ? ನೀವು ಸೆಂಟ್ರಲ್ ಏಷ್ಯಾದಿಂದ ಬಂದವರು.ನೀವು ಹಿಟ್ಲರ್ ವಂಶದವರು ಅಂತ ಹೇಳಿದೆ ಎಂದರು.
ಇದಕ್ಕೆ ಸಮ್ಮತಿ ಸೂಚಿಸಿದ ಸಿದ್ದರಾಮಯ್ಯ ಅವರು, ಯೂ ಹ್ಯಾವ್ ರೈಟ್ಲಿ ಸೆಡ್ ಎಂದರು.ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್, ಬಿ.ಕೆ.ಹರಿಪ್ರಸಾದ್, ಯು.ಟಿ ಖಾದರ್, ಸಲೀಂ ಅಹ್ಮದ್, ಹೆಚ್.ಎಂ.ರೇವಣ್ಣ ಸೇರಿ ಹಲವರು ಮುಖಂಡರು ಭಾಗಿಯಾಗಿದ್ದರು.ಕಳೆದ ಮೂರು ವರ್ಷಗಳಿಂದ ಅಂಕಿ ಅಂಶ ಇಲಾಖೆ ಸರ್ವೆಯನ್ನೇ ಮಾಡ್ತಿಲ್ಲ. ಆರ್‌ಬಿಐ ಅನ್ನ ನಿಷ್ಕ್ರಿಯ ಮಾಡಿದ್ದಾರೆ. ಸರ್ಕಾರದ ಹೇಳಿದಂತೆ ಆರ್‌ಬಿಐ ಕೇಳುತ್ತದೆ. ಸಿಎಜಿ ಕೂಡ ಸರ್ಕಾರ ಹೇಳಿದಂತೆ ಕೇಳಬೇಕಿದೆ. ಯಾವ ಮಾಹಿತಿಗಳೂ ಇವತ್ತು ಸಿಗ್ತಿಲ್ಲ.
ನಮ್ಮ ಆರ್ಥಿಕ ಸೂಚ್ಯಂಕವನ್ನ ತೋರಿಸ್ತಿಲ್ಲ. ಎಲ್ಲವನ್ನೂ ಸಂಪೂರ್ಣ ಮುಚ್ಚಿಹಾಕಿದ್ದಾರೆ. ಸ್ವಾಯತ್ತ ಸಂಸ್ಥೆಗಳನ್ನ ಕತ್ತು ಹಿಸುಕಿ ಕೊಲ್ತಿದ್ದಾರೆ ಎಂದರು ಆರೋಪಿಸಿದರು.