Uncategorized

Rain Update: ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಮೇಲೆ ಉರುಳಿ ಬಿದ್ದ ಮರ; ಇನ್ನು 5 ದಿನಗಳ ಕಾಲ ಅಬ್ಬರಿಸಲಿದ್ದಾನೆ ವರುಣ

ಬೆಂಗಳೂರು: ರಾಜಧಾನಿಯಲ್ಲಿ ಸಂಜೆಯಾದರೆ ಎಡಬಿಡದೆ ಮಳೆ ಸುರಿಯುತ್ತಿದೆ. ನಗರದ ಬಹುತೇಕ ಕಡೆ ಮರಗಳು ಧರೆಗುರುಳುತ್ತಿವೆ. ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜ್ ರಸ್ತೆಯಲ್ಲಿಬಿಎಂಟಿಸಿ ಬಸ್ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ.ಸಂಜೆಯಿಂದಲೇ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಮಳೆಯಿಂದಾಗಿ ನಗರದ ಪಿಇಎಸ್ ಕಾಲೇಜು ಬಳಿ BMTC ಬಸ್ ಮೇಲೆ ಮರ ಬಿದ್ದಿದ್ದು, ಬಸ್ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಮರ ವಾಲಿ ವಿದ್ಯುತ್ ಕಂಬಕ್ಕೆ ಹೊಡೆದು ನಂತರ ಬಸ್ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವ ಪ್ರಯಾಣಿಕರಿಗೂ ಏನು ಸಮಸ್ಯೆ ಆಗಿಲ್ಲ, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆಕೋರಮಂಗಲ,

ಶಾಂತಿನಗರ, ಹೊಸಕೆರೆಹಳ್ಳಿ, ಅಬ್ಬಿಗೆರೆ ಸೇರಿದಂತೆ 15 ಕಡೆ ಮರಗಳು ಧರೆಗೆ ಉರುಳಿದೆ. ನಿತ್ಯ ಸಂಜೆಯಾದ್ರೆ ಮಳೆ ಶುರುವಾಗ್ತಿದ್ದು, ಕೆಲಸ ಮುಗಿಸಿ ಮನೆಗೆ ಬರೋರು ಮಳೆಗೆ ಸಿಲುಕಿ ಪರದಾಡುವಂತಾಗಿದೆ.ಸಂಜೆ 5 ಗಂಟೆಗೆ ಸುಮಾರಿಗೆ ನಡೆದ ಘಟನೆ ನಡೆದಿದ್ದು, ಬೆಂಗಳೂರಲ್ಲಿ ಗಾಳಿ ಸಹಿತ ಮಳೆಗೆ ಇಂದು ನಗರದಲ್ಲಿ 15 ಕಡೆ ಮರಗಳು ಧರೆಗೆ ಉರುಳಿದೆ. ಅದೃಷ್ಟವಶಾತ್ ಎಲ್ಲಿಯೂ ಪ್ರಾಣಾಪಾಯ ಸಂಭವಿಸಿಲ್ಲ. ಎಲ್ಲಾ ಮರಗಳು ತಕ್ಷಣವೇ

ತೆರವುಗೊಳಿಸಲಾಗಿದೆ.ಹೊಸಕೆರೆಹಳ್ಳಿಯಿಂದ ನಾಯಂಡಹಳ್ಳಿ ಕಡೆಗೆ ಹೋಗ್ತಾ ಇದ್ದ ಬಸ್ , ಮಳೆ ಕಡಿಮೆ ಇದ್ದು ಗಾಳಿ ಹೆಚ್ಚಿದ್ದ ಕಾರಣ ಮರ ನೆಲಕ್ಕೆ ಬಿದ್ದಿದೆ, ಬಸ್ನ ಮುಂಭಾಗಕ್ಕೆ ಮರ ಬಿದ್ದಿದ್ದು ಬಸ್ ಮುಂಭಾಗ ಜಖಂಗೊಂಡಿದೆ.ಬಿಸಿಲಿಗೆ ಉತ್ತರ ಭಾರತ ತತ್ತರಿಸುತ್ತಿದ್ದರೆ, ಇತ್ತ ರಾಜ್ಯದಲ್ಲಿ ಮಳೆ ಆರ್ಭಟ

ಮುಂದುವರೆದಿದೆ. ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ಕೂಡ ಸಿಲಿಕಾನ್​ ಸಿಟಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರೆದಿದೆ.ಬಂಗಾಳ ಕೊಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಇನ್ನು 5 ದಿನ ಮಳೆಯಾಗುವ ಸಾಧ್ಯತೆ ಇದೆ. ನಾಳೆಯೂ ನಗರದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು

ಹವಾಮಾನ ಇಲಾಖೆ ತಿಳಿಸಿದೆ.ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ನಾಳೆಯು ಗುಡುಗು ಮಿಂಚಿನ ಮಳೆಯಾಗಲಿದೆ, ಕರಾವಳಿಯಲ್ಲಿ ಇಂದಿನಿಂದ ಮೂರು ದಿನ ಮಳೆಯಾಗಲಿದೆ.

Related Articles

Leave a Reply

Your email address will not be published. Required fields are marked *

Back to top button