ಸಿನಿಮಾ

Radhika Pandit: ಪತ್ನಿ ರಾಧಿಕಾ ಪಂಡಿತ್ ಕೆನ್ನೆಗೆ ಮುತ್ತಿಟ್ಟ ಯಶ್; ಫೋಟೋ ವೈರಲ್

ಕೆಜಿಎಫ್ 2’ ಸಿನಿಮಾ ವಿಶ್ವಾದ್ಯಂತ ಕೋಟಿಕೋಟಿ ಬಾಚಿಕೊಳ್ಳುತ್ತಿದೆ. ಈ ಚಿತ್ರದ ಗೆಲುವನ್ನು ಸಂಭ್ರಮಿಸಲು ಇಡೀ ತಂಡ ಕುಟುಂಬದ ಜತೆ ವೆಕೇಶನ್​ಗೆ ತೆರಳಿದೆ. ಈಗ ರಾಧಿಕಾ ಹೊಸ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.ನಟಿ ರಾಧಿಕಾ ಪಂಡಿತ್ ಅವರು (Radhika Pandit) ಹೆಚ್ಚು ಸಮಯವನ್ನು ಕುಟುಂಬದ ಜತೆಗೆ ಕಳೆಯುತ್ತಿದ್ದಾರೆ. ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಯಶ್ ಅವರು ಇಷ್ಟು ದಿನ ‘ಕೆಜಿಎಫ್​: ಚಾಪ್ಟರ್ 2’ (KGF Chapter 2)ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಈಗ ಸಿನಿಮಾ ತೆರೆಕಂಡು ಹಿಟ್ ಆಗಿದೆ. ಚಿತ್ರದ ಗೆಲುವನ್ನು ಯಶ್ ಸಂಭ್ರಮಿಸುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ವೆಕೇಶನ್​ ಮೂಡ್​ನಲ್ಲಿರುವ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ (Radhika Pandit) ಕೆನ್ನೆಗೆ ಮುತ್ತಿಟ್ಟಿದ್ದಾರೆ. ಅಭಿಮಾನಿಗಳು ಖುಷಿಯಿಂದ ಈ ಫೋಟೋಗೆ ಕಮೆಂಟ್ ಮಾಡುತ್ತಿದ್ದಾರೆ.‘ಕೆಜಿಎಫ್ 2’ ಸಿನಿಮಾ ವಿಶ್ವಾದ್ಯಂತ ಕೋಟಿಕೋಟಿ ಬಾಚಿಕೊಳ್ಳುತ್ತಿದೆ. ಸಿನಿಮಾದ ಕಲೆಕ್ಷನ್ 1000 ಕೋಟಿ ಸಮೀಪಿಸುತ್ತಿದೆ. ಬಾಲಿವುಡ್​ ಒಂದರಲ್ಲೇ ಈ ಸಿನಿಮಾ 329 ಕೋಟಿ ರೂಪಾಯಿ ಗಳಿಸಿರುವುದು ಸಿನಿಮಾದ ಹೆಚ್ಚುಗಾರಿಕೆ. ಈ ಚಿತ್ರದ ಗೆಲುವನ್ನು ಸಂಭ್ರಮಿಸಲು ಇಡೀ ತಂಡ ಕುಟುಂಬದ ಜತೆ ವೆಕೇಶನ್​ಗೆ ತೆರಳಿದೆ. ಇತ್ತೀಚೆಗೆ ಫ್ಯಾಮಿಲಿ ಜತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಪ್ರಶಾಂತ್ ನೀಲ್, ರಾಧಿಕಾ ಪಂಡಿತ್, ಭುವನ್ ಗೌಡ ಹಂಚಿಕೊಂಡಿದ್ದರು. ಈಗ ರಾಧಿಕಾ ಹೊಸ ಫೋಟೋ ಶೇರ್​ ಮಾಡಿಕೊಂಡಿದ್ದಾಯಶಸ್ಸಿನ ಹಾದಿಯಲ್ಲಿ ಯಶ್ ಅವರ ಬೆಂಬಲಕ್ಕೆ ಸದಾ ನಿಂತವರು ರಾಧಿಕಾ. ಶೂಟಿಂಗ್​ಗಾಗಿ ಯಶ್​ ಬೇರೆಬೇರೆ ಕಡೆ ತೆರಳುವ ಸಂದರ್ಭದಲ್ಲಿ ಮಕ್ಕಳ ಆರೈಕೆಯ ಜವಾಬ್ದಾರಿಯನ್ನು ರಾಧಿಕಾ ಅವರೇ ನೋಡಿಕೊಳ್ಳುತ್ತಿದ್ದರು. ನಟನೆಯಿಂದ ಅಂತರ ಕಾಯ್ದುಕೊಂಡಿರುವ ಅವರು, ಫ್ಯಾಮಿಲಿಗೆ ಹೆಚ್ಚು ಸಮುಯ ಮೀಸಲಿಡುತ್ತಿದ್ದಾರೆ. ರಾಧಿಕಾ ನಟನೆಗೆ ಕಂಬ್ಯಾಕ್ ಮಾಡಲಿ ಎಂಬುದು ಅವರ ಅಭಿಮಾನಿಗಳ ಕೋರಿಕೆ. ಆದರೆ, ಈ ಕೋರಿಕೆ ಇಲ್ಲಿವರೆಗೆ ಈಡೇರಲಿಲ್ಲ. ಸದ್ಯ, ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಶೀಘ್ರದಲ್ಲೇ ಉತ್ತರ ಸಿಗುವ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

Back to top button