Uncategorized

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ May 16, 2022:

Petrol and Diesel Price on May 16, 2022: ನಿನ್ನೆಗೆ ಹೋಲಿಸಿದರೆ ರಾಜ್ಯದಲ್ಲಿ ಬಹುತೇಕ ಇಂದು ಇಂಧನ ಬೆಲೆಗಳಲ್ಲಿ (Fuel Price) ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು (Bengaluru) ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರಗಳು (Petrol-Diesel Rate) ಅತಿಶಯವಾದ ಏರಿಳಿತಗಳಿಲ್ಲದೆ ಸ್ಥಿರವಾಗಿವೆ.

ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಇಂಧನ ಬೆಲೆ ಸ್ಥಿರವಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಕಚ್ಚಾ ತೈಲದ ಬೆಲೆಯೂ (Crude oil) ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆಯಲ್ಲೂ ಏರಿಳಿತ ನಡೆಯುತ್ತಲೇ ಇದೆ. ಕಳೆದ ಹತ್ತು ದಿನಗಳಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಹತ್ತು ರೂಪಾಯಿಗಿಂತಲೂ ಹೆಚ್ಚಳವಾಗಿರುವುದು ಸುಳ್ಳಲ್ಲ. ಭಾರತದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಕಳೆದ 37 ದಿನಗಳಿಂದ ಇಂಧನ ದರ ಸ್ಥಿರವಾಗಿದೆ. ಮುಂಬೈ ನಗರದಲ್ಲಿ ಪೆಟ್ರೋಲ್ ದರ 120 ರೂ ಪ್ರತಿ ಲೀಟರ್ ದಾಟಿದೆ.

ಬೆಂಗಳೂರಿನಲ್ಲಿ ಎಷ್ಟಿದೆ ಪೆಟ್ರೋಲ್ ರೇಟ್?

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದೂ ಸಹ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.85, ರೂ. 120.51, ರೂ. 115.12 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 100.94, ರೂ. 104.77, ರೂ. 99.83 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 105.41 ಆಗಿದ್ದರೆ ಡೀಸೆಲ್ ದರ ರೂ. 96.67 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ – ರೂ. 111.69 (10 ಪೈಸೆ ಏರಿಕೆ)
ಬೆಂಗಳೂರು – ರೂ. 111.09 (00)
ಬೆಂಗಳೂರು ಗ್ರಾಮಾಂತರ – ರೂ. 111.22 (48 ಪೈಸೆ ಏರಿಕೆ)
ಬೆಳಗಾವಿ – ರೂ. 110.85 (57 ಪೈಸೆ ಏರಿಕೆ)
ಬಳ್ಳಾರಿ – ರೂ. 112.46 ( 57 ಪೈಸೆ ಏರಿಕೆ)
ಬೀದರ್ – ರೂ. 111.63 (30 ಪೈಸೆ ಇಳಿಕೆ)
ವಿಜಯಪುರ – ರೂ. 111.25 (4 ಪೈಸೆ ಏರಿಕೆ)
ಚಾಮರಾಜನಗರ – ರೂ. 111.22 (4 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – ರೂ. 111.54 (2 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 111.63 (53 ಏರಿಕೆ)
ಚಿತ್ರದುರ್ಗ – ರೂ. 112.89 (38 ಪೈಸೆ ಏರಿಕೆ)
ದಕ್ಷಿಣ ಕನ್ನಡ – ರೂ. 111.07 (78 ಪೈಸೆ ಇಳಿಕೆ)
ದಾವಣಗೆರೆ – ರೂ. 113.15 (84 ಪೈಸೆ ಏರಿಕೆ)
ಧಾರವಾಡ – ರೂ. 110.84 (00)
ಗದಗ – ರೂ. 111.50 (42 ಪೈಸೆ ಇಳಿಕೆ)
ಕಲಬುರಗಿ – ರೂ. 110.81 (51 ಪೈಸೆ ಇಳಿಕೆ)
ಹಾಸನ – ರೂ. 111.25 (15 ಪೈಸೆ ಏರಿಕೆ)
ಹಾವೇರಿ – ರೂ. 111.53 (18 ಪೈಸೆ ಇಳಿಕೆ)
ಕೊಡಗು – ರೂ. 112.36 (51 ಪೈಸೆ ಏರಿಕೆ)
ಕೋಲಾರ – ರೂ. 110.96 (7 ಪೈಸೆ ಏರಿಕೆ)
ಕೊಪ್ಪಳ – ರೂ. 112.18 (19 ಪೈಸೆ ಏರಿಕೆ)
ಮಂಡ್ಯ – ರೂ. 111.05 (2 ಪೈಸೆ ಏರಿಕೆ)
ಮೈಸೂರು – ರೂ. 110.61 (18 ಪೈಸೆ ಇಳಿಕೆ)
ರಾಯಚೂರು – ರೂ. 111.54 (95 ಪೈಸೆ ಇಳಿಕೆ)
ರಾಮನಗರ – ರೂ. 111.54 (2 ಪೈಸೆ ಇಳಿಕೆ)
ಶಿವಮೊಗ್ಗ – ರೂ. 112.56 (4 ಪೈಸೆ ಇಳಿಕೆ)
ತುಮಕೂರು – ರೂ. 111.75 (38 ಪೈಸೆ ಇಳಿಕೆ)
ಉಡುಪಿ – ರೂ. 111.54 (6 ಪೈಸೆ ಇಳಿಕೆ)
ಉತ್ತರ ಕನ್ನಡ – ರೂ. 112.94 (36 ಪೈಸೆ ಇಳಿಕೆ)
ಯಾದಗಿರಿ – ರೂ. 111.53 (00)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ – ರೂ. 95.36
ಬೆಂಗಳೂರು – ರೂ. 94.79
ಬೆಂಗಳೂರು ಗ್ರಾಮಾಂತರ – ರೂ. 94.91
ಬೆಳಗಾವಿ – ರೂ. 94.59
ಬಳ್ಳಾರಿ – ರೂ. 95.05
ಬೀದರ್ – ರೂ. 95.08
ವಿಜಯಪುರ – ರೂ. 95.96
ಚಾಮರಾಜನಗರ – ರೂ. 94.90
ಚಿಕ್ಕಬಳ್ಳಾಪುರ – ರೂ. 95.20
ಚಿಕ್ಕಮಗಳೂರು – ರೂ. 96.17
ಚಿತ್ರದುರ್ಗ – ರೂ. 96.28
ದಕ್ಷಿಣ ಕನ್ನಡ – ರೂ. 94.73
ದಾವಣಗೆರೆ – ರೂ. 96.52
ಧಾರವಾಡ – ರೂ. 94.59
ಗದಗ – ರೂ. 95.18
ಕಲಬುರಗಿ – ರೂ. 94.56
ಹಾಸನ – ರೂ. 94.80
ಹಾವೇರಿ – ರೂ. 95.21
ಕೊಡಗು – ರೂ. 95.80
ಕೋಲಾರ – ರೂ. 94. 68
ಕೊಪ್ಪಳ – ರೂ. 95.79
ಮಂಡ್ಯ – ರೂ. 94.75
ಮೈಸೂರು – ರೂ. 94.35
ರಾಯಚೂರು – ರೂ. 94.67
ರಾಮನಗರ – ರೂ. 95.20
ಶಿವಮೊಗ್ಗ – ರೂ. 96.04
ತುಮಕೂರು – ರೂ. 95.39
ಉಡುಪಿ – ರೂ. 94.26
ಉತ್ತರ ಕನ್ನಡ – ರೂ. 96.43
ಯಾದಗಿರಿ – ರೂ. 95.21

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆ ಸುಡುತ್ತಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button