Uncategorized

NEET ಸ್ನಾತಕೋತ್ತರ ಕೋರ್ಸ್‍ನ ಬಾಕಿ ಸೀಟುಗಳ ಭರ್ತಿಗೆ ವಿಶೇಷ CET ಇಲ್ಲ

ಎನ್‍ಇಇಟಿ-ಪಿಜಿ 2021 ರಲ್ಲಿ ಅಖಿಲ ಭಾರತ ಕೋಟಾದ ಅಡಿ ಉಳಿದಿರುವ 1456 ಸೀಟುಗಳಿಗೆ ಮತ್ತೆಎ ಕೌನ್ಸಿಲಿಂಗ್ ನಡೆಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಅನಿರುದ್ಧ ಬೋಸ್ ಅವರ ರಜಾಕಾಲದ ಪೀಠ ಸ್ಪಷ್ಟ ಪಡಿಸಿದೆ.ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯಲ್ಲಿ ಈ ಮೊದಲು ಕೌನ್ಸಿಲಿಂಗ್ ತಪ್ಪಿಸಿಕೊಂಡವರಿಗೆ ವಿಶೇಷ ಕೌನ್ಸಿಲಿಂಗ್ ಮೂಲಕ ಅವಕಾಶ ನೀಡಲು ನಿರಾಕರಿಸಿರುವ ಸರ್ಕಾರ ಮತ್ತು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಸಮಿತಿ ಪ್ರಜ್ಞಾಪೂರ್ವಕವಾಗಿ ನಿರ್ಧಾರ ತೆಗೆದುಕೊಂಡಾಗ, ಅದನ್ನು ಸರ್ವಾಧಿಕಾರಿ ಧೋರಣೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಪೀಠ ಹೇಳಿದೆ.

ಸುಮಾರು ಒಂದು ವರ್ಷದ ಶೈಕ್ಷಣಿಕ ಅವಧಿಯ ನಂತರ ಹಾಗೂ ಎಂಟರಿಂದ ಒಂಬತ್ತು ಸುತ್ತಿನ ಕೌನ್ಸೆಲಿಂಗ್ ಮುಗಿದ ಬಳಿಕ ಕೌನ್ಸಿಲಿಂಗ್ ತಪ್ಪಿಸಿಕೊಂಡ ವಿದ್ಯಾರ್ಥಿಗಳು ಖಾಲಿ ಹುದ್ದೆಗಳಳ ಭರ್ತಿಗೆ ಅವಕಾಶ ನೀಡುವಂತೆ ಪ್ರಾರ್ಥಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.ಅಖಿಲ ಭಾರತ ಕೋಟಾದ ಕೌನ್ಸೆಲಿಂಗ್‍ಗೆ ಒಂದು ಮಿತಿ ಇರಬೇಕು, ಶಿಕ್ಷಣ ಮತ್ತು ಜನರ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದಿಲ್ಲ.

ಸಾಫ್ಟ್‍ವೇರ್‍ನಲ್ಲಿ ಮೇ 7ರಂದು ಕೌನ್ಸಿಲಿಂಗ್ ಮುಕ್ತಾಯಗೊಂಡಿರುವುದಾಗಿ ಪ್ರಕಟಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button