ಪೊಲೀಸ್
NCIB: Traffic ಪೊಲೀಸ್ ವಿನಾಕಾರಣ ದಾಖಲೆ ತೋರಿಸಿ ಎಂದು ವಾಹನ ತಡೆಯುವಂತಿಲ್ಲ.

ಟ್ರಾಫಿಕ್ ಪೊಲೀಸರು ವಿನಾಕಾರಣ ವಾಹನ ತಡೆದು ನಿಲ್ಲಿಸುವಂತಿಲ್ಲ.
ಯಾವುದೇ ಕಾನೂನು, ಸಂಚಾರ ನಿಯಮ ಉಲ್ಲಂಘಿಸಿದರೆ ಮಾತ್ರ ಪೊಲೀಸರು ವಾಹನಗಳನ್ನು ತಡೆಯಬೇಕು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ದಾಖಲೆ ತೋರಿಸುವಂತೆ ವಿನಾಕಾರಣ ತಡೆಯುತ್ತಾರೆ ಎಂಬ ಅಪವಾದಗಳು ಪೊಲೀಸರ ಮೇಲಿದೆಈ ಕುರಿತು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ದೂರು ನೀಡಿದ್ದರು.
ಈ ಕುರಿತು ಬೆಂಗಳೂರು ಸಂಚಾರ ಪೊಲೀಸರು ಸ್ಪಷ್ಟನೆ ನೀಡಿದ್ದು, ವಿನಾಕಾರಣ ವಾಹನಗಳನ್ನು ತಡೆಯುವಂತಿಲ್ಲ. ಒಂದು ವೇಳೆ ಆ ರೀತಿ ಮಾಡುವ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ.