ಅಪರಾಧ

NCIB BREAKING NEWS: ಮಾತ್ ಮಾತಲ್ಲೇ ಕುಚೇಷ್ಟೆ ಮಾಡ್ತಾ ಕತ್ತರಿಯಲ್ಲಿ ಎದೆಗೆ ಇರಿದು ಕೊಂದೇ ಬಿಟ್ಟ.!!

ರಬಕವಿ-ಬನಹಟ್ಟಿ (ಬಾಗಲಕೋಟೆ ): ಸಲೂನ್‌ವೊಂದರಲ್ಲಿ ಗೆಳೆಯರೊಂದಿಗೆ ಕೂಡಿ ಕುಳಿತಾಗಿ ಒಬ್ಬರಿಗೊಬ್ಬರು ಮಾತಿನ ಕುಚೇಷ್ಟೆಯಲ್ಲಿ ಕತ್ತರಿಯನ್ನು ಎದೆಗೆ ಇರಿದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ.ಕಬಡ್ಡಿ ಆಟಗಾರ ಸಾಗರ (23) ಮೃತ ದುದೈ೯ವಿಯಾಗಿದ್ದು, ಆರೋಪಿ ಸದಾಶಿವನನ್ನು ಪೊಲೀಸರು ಬಂಧಿಸಿದ್ದಾರೆ.

ಅಂದ ಹಾಗೇ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಸಲೂನ್ ಅಂಗಡಿಯಲ್ಲಿ ಗೆಳೆಯರು ಮಧ್ಯೆ ಕುಚೇಷ್ಠೆ ನಡೆಯುತ್ತಿತ್ತು.ಈ ವೇಳೆ ಕುಚೇಷ್ಠೆ ಅತೀ ರೇಕಕ್ಕೆ ತಿರುಗಿ ಗೆಳೆಯರ ಜೊತೆ ಮಾತಿಗೆ ಮಾತು ಬೆಳೆದು ಸಲೂನ್ ನಲ್ಲಿದ್ದ ಕತ್ತರಿಯಿಂದಲೇ ಸಾಗರ ಸೀನಪ್ಪ ಅವಟಿ ಎದೆಗೆ ಸದಾಶಿವ ಇರಿದಿದ್ದಾನೆ. ಪರಿಣಾಮ ಹೃದಯಭಾಗಕ್ಕೆ ತೀವ್ರ ಗಾಯವಾದ ಹಿನ್ನೆಲೆಯಲ್ಲಿ ಸಾಗರ ಪ್ರಜ್ಞೆ ತಪ್ಪಿ ಬಿದಿದ್ದು, ಆತನನ್ನು ತಕ್ಷಣ ರಬಕವಿ ಬನಹಟ್ಟಿ ಸಕಾ೯ರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾಗರ ಸಾವು ಕಂಡಿದ್ದಾನೆ.ಇನ್ನು ಮೃತ ಸಾಗರ ಉತ್ತಮ ಕಬ್ಬಡ್ಡಿ ಹಾಗು ಕ್ರಿಕೆಟ್ ಆಟಗಾರನಾಗಿದ್ದನು. ಈ ಘಟನೆಯಿಂದ ಇಡೀ ಆಸಂಗಿ ಗ್ರಾಮವು ಮಮ್ಮಲ ಮರಗುವಂತಾಗಿದೆ.ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದ್ದು,ಜಮಖಂಡಿ ಡಿವೈಎಸ್ಪಿ ಪಾಂಡುರಂಗಯ್ಯ, ಸಿಪಿಐ ಜೆ.ಕರುಣೇಶಗೌಡ ಮತ್ತು ಪಿಎಸ್‌ಐ ಸುರೇಶ ಮಂಟೂರ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಒಟ್ಟಾರೆ ಕುಚೇಷ್ಟೆಯಲ್ಲಿ ತೊಡಗುವ ಗೆಳೆಯರಿಗೆ ಈ ಪ್ರಕರಣ ದಿಗ್ಭಮೆಯುಂಟು ಮಾಡಿದ್ದು, ಮಾನಸಿಕ ಸ್ಥಿರತೆ ಕಳೆದುಕೊಂಡಲ್ಲಿ ಇಂತಹ ಪ್ರಸಂಗಗಳು ಜರುಗುತ್ತವೆ ಎನ್ನುವುದಕ್ಕೆ ಸಾಗರ ಸಾವಿನ ಪ್ರಕರಣವೇ ಸಾಕ್ಷಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button