NCIB ಟೈಮ್ಸ್ ನ್ಯೂಸ್ -ಶನಿವಾರ ರಾಶಿ ಭವಿಷ್ಯ-30 ಜುಲೈ

ಸೂರ್ಯೋದಯ: 05:55 ಏ ಎಂ, ಸೂರ್ಯಸ್ತ: 06:50 ಪಿ ಎಂ
ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078,
ಶ್ರಾವಣ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ದಕ್ಷಿಣಾಯಣ
ತಿಥಿ: ಬಿದಿಗೆ 02:59 ಏ ಎಂ,
ನಕ್ಷತ್ರ: ಆಶ್ಲೇಷ 12:13 ಪಿ ಎಂ ವರೆಗೂ , ಮಖಾಯೋಗ: ವ್ಯತೀಪಾತ 07:02 ಪಿ ಎಂ ವರೆಗೂ , ವರಿಯಾನ್
ಕರಣ: ಬಾಲವ 02:13 ಪಿ ಎಂ ವರೆಗೂ , ಕೌಲವ 02:59 ಏ ಎಂ ,
ರಾಹು ಕಾಲ:09:00 ನಿಂದ 10:30 ವರೆಗೂ
ಯಮಗಂಡ01:30 ನಿಂದ 03:00 ವರೆಗೂ
ಗುಳಿಕ ಕಾಲ: 06:00 ನಿಂದ 07:30 ವರೆಗೂ
ಅಮೃತಕಾಲ: 10:27 ಏ ಎಂ ನಿಂದ 12:13 ಪಿ ಎಂ ವರೆಗೂ
ಅಭಿಜಿತ್ ಮುಹುರ್ತ: 11:57 ಏ ಎಂ ನಿಂದ 12:48 ಪಿ ಎಂ ವರೆಗೂ
————————-
ಮೇಷ
ಹೂಡಿಕೆಯಿಂದ ಲಾಭ. ಲಲಿತಕಲೆಗಳಲ್ಲಿ ಆಸಕ್ತಿ ಮೂಡಬಹುದು. ವೃತ್ತಿಯಲ್ಲಿ ಯಶಸ್ಸು. ವಯಸ್ಸಾದವರು ತಮ್ಮ ಆಹಾರದ ಬಗ್ಗೆ ಎಚ್ಚರ ವಹಿಸಬೇಕು.
ವೃಷಭ
ವೃತ್ತಿಯ ಒತ್ತಡಗಳು ದಿನವಿಡೀ ನಿಮ್ಮ ಮನಸ್ಸು ಕೆಡಿಸುತ್ತದೆ. ಕೆಲವು ವಿಚಾರಗಳು ನೀವು ಬಯಸಿದಂತೆ ಸಾಗುವುದಿಲ್ಲ. ಇದರಿಂದ ಅಸಹನೆ ಹೆಚ್ಚು.
ಮಿಥುನ
ಸಣ್ಣ ಗುರಿಗಳನ್ನು ಸಾಧಿಸುತ್ತೀರಿ. ಹಾಗೆಂದು ಕೆಲಸದ ಒತ್ತಡ ಕಡಿಮೆಯಾಗದು. ಬಿಡುವಿನ ವೇಳೆಯನ್ನು ಆಪ್ತರ ಜತೆ ಕಳೆಯಲು ಅವಕಾಶ ದೊರಕಲಿದೆ.
ಕಟಕ
ನಿಮ್ಮ ಸ್ಥಾನಮಾನದ ಕುರಿತಂತೆ ಕೀಳರಿಮೆ ಬೇಡ. ಉನ್ನತ ಸ್ಥಿತಿಗೆ ಏರಲು ನಿಮಗೆ ಕಾಲ ಪಕ್ವವಾಗಿದೆ. ಕೆಲವು ದಿಟ್ಟ ನಿರ್ಧಾರ ತಾಳಲು ಹಿಂಜರಿಯದಿರಿ.
ಸಿಂಹ
ಉದ್ಯೋಗದ ಜಾಗದಲ್ಲಿ ಕೆಲವರಿಂದ ಕಿರುಕುಳ ಎದುರಿಸುವಿರಿ. ಇದು ನಿಮಗೆ ಅಸಹನೆ ಉಂಟು ಮಾಡಬಹುದು. ಮನೆಯ ಪರಿಸರದಲ್ಲಿ ನೆಮ್ಮದಿ ಕಾಣುವಿರಿ.
ಕನ್ಯಾ
ಸಂಸಾರದಲ್ಲಿ ಸಮಸ್ಯೆ ಉಂಟಾದರೂ ಅದು ಅಲ್ಪಕಾಲದ್ದು. ಹೊಂದಾಣಿಕೆಗೆ ಒಗ್ಗಿಸಿಕೊಳ್ಳಿ. ನಿಮ್ಮ ಮಾತು ನಡೆಯ ಬೇಕೆಂಬ ಹಠ ಬಿಡಿ.
ತುಲಾ
ಉದ್ಯೋಗ ಬದಲಾವಣೆಯ ಅವಕಾಶ ಸಿಗುವುದು. ಆರ್ಥಿಕ ಸ್ಥಿತಿ ಸುಧಾರಣೆ. ಕೌಟುಂಬಿಕ ಸಮಸ್ಯೆ ಪರಿಹಾರ. ಒಟ್ಟಿನಲ್ಲಿ ಪೂರಕ ದಿನ.
ವೃಶ್ಚಿಕ
ವೃತ್ತಿಯಲ್ಲೂ ಕುಟುಂಬದಲ್ಲೂ ನಿಮ್ಮ ಜವಾಬ್ದಾರಿ ಹೆಚ್ಚಲಿದೆ. ಅದರಿಂದ ವಿಚಲಿತರಾಗದಿರಿ. ಎಲ್ಲದರ ನಿಭಾವಣೆ ನಿಮ್ಮಿಂದ ಸಾಧ್ಯ.
ಧನು
ನಿಮ್ಮ ಅಭಿಪ್ರಾಯ ಮುಕ್ತವಾಗಿ ವ್ಯಕ್ತಪಡಿಸಲು ಹಿಂಜರಿಕೆ ಬೇಡ. ಅದಕ್ಕೆ ಸೂಕ್ತ ಮನ್ನಣೆ ಸಿಗುವುದು. ಭಿನ್ನಮತ ನಿವಾರಣೆಗೂ ಇದು ಸಹಕಾರಿ.
ಮಕರ
ನಿಮ್ಮ ಶಕ್ತಿಯನ್ನು ವ್ಯರ್ಥ ಕಾರ್ಯಗಳಿಗೆ ವ್ಯಯಿಸಬೇಡಿ. ಇತರರ ಮಾತು ಕೇಳಿ ನಿಷ್ಪಲ ಕಾರ್ಯಕ್ಕೆ ಹೊರಡದಿರಿ. ಫಲ ನೀಡುವ ಕೆಲಸವನ್ನಷ್ಟೆ ಮಾಡಿರಿ.
ಕುಂಭ
ಎಲ್ಲವನ್ನೂ ಅತಿರೇಕದಿಂದ ಮಾಡಲು ಹೋಗದಿರಿ. ಯಾವುದೇ ಕೆಲಸಕ್ಕೆ ಮಿತಿ ಎಂಬುದಿದೆ. ಕುಟುಂಬಸ್ಥರಿಗೆ ಹೆಚ್ಚು ಸಮಯ ಮೀಸಲಿಡಿ.
ಮೀನ
ಅನಾರೋಗ್ಯ ಕಾಡಬಹುದು. ಹಾಗಾಗಿ ಪ್ರಮುಖ ಕಾರ್ಯಗಳು ವಿಳಂಬವಾದೀತು. ಆರ್ಥಿಕ ವಿಚಾರದಲ್ಲಿ ನಿಮಗೆ ಪೂರಕ ಬೆಳವಣಿಗೆ.