NCIB ಜಾಮಿಯ ಮಸೀದಿ ವಿವಾದ: ಹಿಂದೂ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ-ಹೈ ಅಲರ್ಟ್ ಘೋಷಣೆ

NCIB ಮಂಡ್ಯ: ಜಾಮಿಯ ಮಸೀದಿ ವಿವಾದಕ್ಕೆ ನಾಳೆ ಮಹತ್ತರ ಘಟ್ಟ. ಯಾಕಂದ್ರೆ ಹಿಂದೂಪರ ಸಂಘಟನೆಗಳು ನಾಳೆ ಶ್ರೀರಂಗಪಟ್ಟಣ ಚಲೋ ಹಮ್ಮಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು ಪೊಲೀಸರು ಅಲರ್ಟ್ ಆಗಿದ್ದಾರೆ. ಈ ನಡುವೆ ಮಸೀದಿಯೊಳಗೆ ಮಂದಿರವಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಕೆಲ ದೃಶ್ಯಗಳು ಸೋರಿಕೆಯಾಗಿರೋದು ಕುತೂಹಲ ಹೆಚ್ಚಿಸಿದೆ.ಮಂಡ್ಯ ಜಾಮಿಯ ಮಸೀದಿ ವಿವಾದ. ನಾಳೆ ಶ್ರೀರಂಗಪಟ್ಟಣ ಚಲೋಗೆ ಹಿಂದೂಪರ ಸಂಘಟನೆಗಳು ಕರೆ ಕೊಟ್ಟಿರೋ ಬೆನ್ನಲ್ಲೇ ವಿವಾದದ ಕಿಡಿ ಮತ್ತಷ್ಟು ಜೋರಾಗಿ ಧಗಧಗಿಸಿದೆ. ಇದಕ್ಕೂ ಮುನ್ನಾ ದಿನ ಜಾಮಿಯ ಮಸೀದಿಯ ಒಳಗಿನ ದೃಶ್ಯ ಸೋರಿಕೆಯಾಗಿದ್ದು, ದೃಶ್ಯಗಳು ಮತ್ತಷ್ಟು ಸಂಚಲನ ಸೃಷ್ಟಿಸಿವೆ.ಮಸೀದಿಯೊಳಗೆ ದೇಗುಲ ಮಾದರಿಯ ಕುರುಹು ಪತ್ತೆಹೌದು.. ಮಂಡ್ಯ ಜಾಮಿಯ ಮಸೀದಿಯಲ್ಲಿ ದೇಗುಲ ಮಾದರಿಯ ಕುರುಹುಗಳು ಪತ್ತೆಯಾಗಿವೆ. ಒಳಭಾಗದಲ್ಲಿ ದೇಗುಲದ ಕುರುಹುಗಳ ಚಿತ್ರೀಕರಣ ಬಯಲಾಗ್ತಿದ್ದಂತೆ ಜಾಮಿಯ ಮಸೀದಿ ಒಳಗೆ ಮಂದಿರ ಇದೆಯಾ ಅನ್ನೋ ವಾದಕ್ಕೆ ಮತ್ತಷ್ಟು ಪುರಾವೆ ಒದಗಿಸಿದಂತಾಗಿದೆ.ಜಾಮಿಯ ಮಸೀದಿಯೊಳಗೆ ಅಕ್ರಮ ಮದರಸಾ ಆರೋಪಹಿಂದೂ ಸಂಘಟನೆ ಆರೋಪಕ್ಕೆ ಪುಷ್ಠಿ ನೀಡುವಂತೆ ದೃಶ್ಯ ಲಭ್ಯಪುರಾತತ್ವ ಇಲಾಖೆ ಆಸ್ತಿ ಜಾಮಿಯಾ ಮಸೀದಿಯೊಳಗೆ ಹೊರ ರಾಜ್ಯದ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಕ್ರಮ ಮದರಸಾ ನಡೀತಿರೋ ಆರೋಪಕ್ಕೆ ಸಾಕ್ಷಿಯಾಗಿ ಮಸೀದಿಯೊಳಗೆ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿರುವ ದೃಶ್ಯಗಳು ಲಭ್ಯವಾಗಿವೆ.ಮಸೀದಿಯೊಳಗೆ ಮದರಸಾ?ಜಾಮಿಯ ಮಸೀದಿಯೊಳಗೆ ಮದರಸಾ ನಡೆಸುತ್ತಿದ್ದು ಪುರಾತತ್ವ ಇಲಾಖೆ ಸ್ವತ್ತನ್ನೇ ವಾಸಸ್ಥಾನ ಮಾಡಿಕೊಳ್ಳಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಅಕ್ರಮ ವಾಸ್ತವ್ಯವೆಂದು ಹಿಂದೂ ಪರ ಸಂಘಟನೆಗಳ ಆರೋಪ ಬೆನ್ನಲ್ಲೇ ಮಸೀದಿಯೊಳಗೆ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿರೋ ವಿಡಿಯೋ ಸೋರಿಕೆಯಾಗಿವೆ. ಕಾನೂನು ಪ್ರಕಾರ ಪುರಾತತ್ವ ಸ್ಮಾರಕಗಳಲ್ಲಿ ಯಾರೂ ಕೂಡ ವಾಸವಿರುವಂತಿಲ್ಲ.
ಆದ್ರೆ ಮಸೀದಿಯೊಳಗೆ ಮಂಚ, ಹಾಸಿಗೆ, ದಿಂಬು ಸಮೇತ ವಾಸ್ತವ್ಯ ಹೂಡಿರೋ ದೃಶ್ಯ ಸೋರಿಕೆಯಾಗಿವೆ.ನಾಳೆ ಶ್ರೀರಂಗಪಟ್ಟಣ ಚಲೋ ಹಿನ್ನೆಲೆ ಹೈ ಅಲರ್ಟ್ಮ ಮ್ದರಸ ಖಾಲಿ ಮಾಡಿಸಬೇಕು.
ವಿಡಿಯೋ ಸರ್ವೆ ಮಾಡಿಸಬೇಕು. ಹಾಗೂ ಮಸೀದಿಯಲ್ಲಿನ ಆಂಜನೇಯಸ್ವಾಮಿ ಪೂಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ನಾಳೆ ಹಿಂದೂಪರ ಸಂಘಟನೆಗಳು ಶ್ರೀರಂಗಪಟ್ಟಣ ಚಲೋಗೆ ಕರೆ ಕೊಟ್ಟಿವೆ. ಆದ್ರೆ ಜಾಥಾಗೆ ಅವಕಾಶ ನಿರಾಕರಿಸಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಶಾಂತಿ ಸುವ್ಯವಸ್ಥೆಗೆ ತೊಂದರೆ ಆದ್ರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರಿಗೆ ಜಿಲ್ಲಾ ಎಸ್ಪಿ ಎಚ್ಚರಿಸಿದ್ದಾರೆ.ಒಟ್ಟಾರೆ ವಿಡಿಯೋ ಸೋರಿಕೆ ಬೆನ್ನಲ್ಲೇ ಮಂಡ್ಯ ಜಾಮಿಯ ಮಸೀದಿ ವಿವಾದದ ಕಿಡಿ ಮತ್ತಷ್ಟು ಜೋರಾಗಿದೆ.
ಇದರ ನಡುವೆ ನಾಳೆ ಹಿಂದೂ ಸಂಘಟನೆಗಳು ಬೃಹತ್ ಜಾಥಾ ಕೈಗೊಳ್ಳಲು ಮುಂದಾಗಿವೆ. ಹೀಗಾಗಿ ವಾದಕ್ಕೆ ಸೀಮಿತವಾಗಿದ್ದ ವಿವಾದ ಸದ್ಯ ಹೋರಾಟದ ರೂಪ ಪಡೆದುಕೊಂಡಂತಾಗಿದೆ.ವಿಶೇಷ ವರದಿ: ಉದಯ ಕುಮಾರ್, NCIB Times: ಮಂಡ್ಯ