MLA ಮಗ ಸೇರಿ ಐವರಿಂದ ಕಾರಿನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ!

ಅಪ್ರಾಪ್ತ ಬಾಲಕಿಯ ಮೇಲೆ ಮರ್ಸಿಡಿಸ್ ಕಾರಿನಲ್ಲಿ ಅಪ್ರಾಪ್ತರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನಗರದಲ್ಲಿ ನಡೆದಿದೆ.ಈ ಕೃತ್ಯವೆಸಗಿದವರಲ್ಲಿ ಶಾಸಕರೊಬ್ಬರ ಮಗನೂ ಕೂಡ ಭಾಗಿರುವ ಆರೋಪವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅತ್ಯಾಚಾರವೆಸಗಿರುವ ಐವರು ಆರೋಪಿಗಳು ಅಪ್ರಾಪ್ತರು ಎನ್ನಲಾಗಿದೆ.ಈ ಕುರಿತು ಜೂನ್ 1 ರಂದು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.ಘಟನೆ ಶನಿವಾರ ನಡೆದಿದೆ.
ಆರಂಭದಲ್ಲಿ, ಘಟನೆಯಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿತ್ತು.
17 ವರ್ಷದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಪೊಲೀಸರು ಇದೀಗ ಪ್ರಕರಣವನ್ನು ಬದಲಾಯಿಸಿ ಐಪಿಸಿಯ ಸೆಕ್ಷನ್ 376 (ಗ್ಯಾಂಗ್ ರೇಪ್) ನಲ್ಲಿ ಸೇರಿಸಲಾಗಿದೆ.
ಆರೋಪಿಗಳ ತಕ್ಷಣ ಬಂಧನಕ್ಕೆ ತೆಲಂಗಾಣ ಬಿಜೆಪಿ ಆಗ್ರಹ :ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. “ಈ ಅಪರಾಧದ ಐದು ಅಪರಾಧಿಗಳಲ್ಲಿ ಒಬ್ಬ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ಶಾಸಕರ ಮಗ ಮತ್ತು ಇನ್ನೊಬ್ಬ ಅಲ್ಪಸಂಖ್ಯಾತ ಮುಖಂಡನ ಮಗ” ಎಂದು ತೆಲಂಗಾಣ ಬಿಜೆಪಿ ಹೇಳಿದೆ.ಸಂತ್ರಸ್ತೆಯ ಪೋಷಕರು ಕ್ರಿಮಿನಲ್ ದೂರು ನೀಡಿದರೂ ಹೈದರಾಬಾದ್ ಪೊಲೀಸರು ಇನ್ನೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ.
ಈ ಪ್ರಕರಣದಲ್ಲಿ ಪೊಲೀಸರು ನಿಧಾನಗತಿಯ ಕ್ರಮ ಕೈಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.