ಅಪರಾಧ

Missed call ಆಂಟಿಯಿಂದ ಬರ್ಬರ ಹತ್ಯೆಯಾದ ಯುವಕ! ಯಾಕೆ ಗೊತ್ತಾ..!

ವಾರದ ಹಿಂದೆಯಷ್ಟೇ ಕಲಬುರಗಿ ನಗರದ ಹೊರವಲಯಲ್ಲಿ ಭೀಕರವಾಗಿ ಕೊಲೆಯಾದ ದಯಾನಂದ್ ಲಾಡಂತಿ ಎಂಬ 26 ವರ್ಷದ ಯುವಕನ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ ಹೌದು ಇನ್ನು ಈ ಯುವಕ ದುಬೈನಲ್ಲಿ ಕೆಲಸಮಾಡುತ್ತಿದ್ದು ನಾಲಕಐದು ದಿಂನದ ಹಿಂದಷ್ಟೇ ಊರಿಗೆ ಪಾಸ್ ಪೂರ್ಟ್‌ ಕೆಲಸಕ್ಕೆಂದು ಬಂದಿದ್ದರು.ಮತ್ತೆ ದುಬೈಗೆ ಹೋಗಲು ಸಿದ್ಧತೆ ನಡೆಸಿದ್ದರು. ಇನ್ನು ಈತನಿಗೆ ಊರಿನಲ್ಲಿ ಯಾರೋಂದಿಗೂ ದ್ವೇಶ ಇರಲಿಲ್ಲಾ ಯಾಕೆಂದರೆ ಈತ ಊರಿನಲ್ಲಿ ಹೆಚ್ಚಾಗಿಯೂ ಇರುತ್ತಿರಲಿಲ್ಲ ಆದರೆ ಈತನ ಸಾವಿನ ಹಿಂದಿನ ಕಥೆ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ ಹೌದು ಈತನ ಸಾವಿನ ಹಿಂದೆ ಇದ್ದು ವಿವಾಹಿತ ಲೇಡಿ ಈಕೆಏ ಈತನನ್ನು ಕೊಲೆ ಮಾಡಿದಿದ್ದಾಳೆ ಪೊಲೀಸರ ತನಿಖೆ ಮೇರೆಗೆ ಕಚಿತವಾಗಿದೆ.ಕಲಬುರಗಿ ನಗರದ ಬಸವೇಶ್ವರ ಕಾಲೋನಿಯ ನಿವಾಸಿಯಾಗಿರುವ ಅಂಬಿಕಾ ಎಂಬಾಕೆ, ಯಾದಗಿರಿ ಜಿಲ್ಲೆಯ ಕೊಡೆಕಲ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಪ್ರಾಥಮಿಕ ಸುರಕ್ಷಾ ಅಧಿಕಾರಿ ಎಂದು ಕೆಲಸ ಮಾಡುತ್ತಿದ್ದಳು ಈಕೆ. ಒಬ್ಬಳು ಮಗಳ ತಾಯಿ ಕೂಡ. ಈ ಅಂಬಿಕಾ, ಇಪ್ಪತ್ತು ದಿನದ ಹಿಂದಷ್ಟೇ ದಯಾನಂದ್‌ನ ನಂಬರ್ ಪಡೆದು, ಮಿಸ್ ಕಾಲ್ಕೊಟ್ಟು ನಂತರ ಸ್ನೇಹ ಬೆಳೆಸಿದ್ದಾಳೆ.ಜೂನ್ 24ರಂದು ದಯಾನಂದ್‌ಗೆ ಕಲಬುರಗಿಗೆ ಬರುವಂತೆ ಹೇಳಿದ್ದಳು. ಕಲಬುರಗಿಗೆ ಬಂದಿದ್ದ ದಯಾನಂದ್‌ನನ್ನು ತನ್ನ ಸ್ಕೂಟಿ ಮೇಲೆ, ವಾಜಪೇಯಿ ಬಡಾವಣೆ ಬಳಿ ಕರೆದುಕೊಂಡು ಹೋಗಿದ್ದಳು. ಅಲ್ಲಿ ಆಟೋದಲ್ಲಿ ಬಂದಿದ್ದ ಕಲಬುರಗಿ ನಗರದ ಶಹಬಜಾರ್ ನಿವಾಸಿಗಳಾದ ಕೃಷ್ಣಾ, ನೀಲಕಂಠ, ಸುರೇಶ್, ಸಂತೋಷ್ ಅನ್ನೋರ ಮುಂದೆ ದಯಾನಂದ್ ನನ್ನು ನಿಲ್ಲಿಸಿದ್ದಳು. ಅಂಬಿಕಾಳ ಸ್ವತಃ ಮುಂದೆ ನಿಂತು, ದಯಾನಂದ್‌ನನ್ನು ಕೊಲೆ ಮಾಡಿಸಿರುವುದಾಗಿ ಆರೋಪವಿದೆ. ಇನ್ನು ಈಕೆ ದಯಾನಂದ್ ನನ್ನು ಕೊಲೆಮಾಡಲು ಮೂರು ಲಕ್ಷಕ್ಕೆ ಸೂಪಾರಿ ಪಡೆದಿದ್ದಾಳಂತೆ. ಕೊಲೆ ಮಾಡಿ ಅದರ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡಿದ ಬಳಿಕ ಮಿಲಿಟರಿಯಲ್ಲಿರುವ ಸುನೀಲ್‌ಗೆ ಕಳಿಸಿದ್ದಾಳೆ. ಕೊಲೆಯ ಲೈವ್ ವಿಡಿಯೋ ಮಾಡಿ ತಾನು ಬಚಾವ್ ಆಗೋದಕ್ಕೆ ಪ್ಲಾನ್ ಮಾಡಿದ್ದಳು.ಇನ್ನು ಈ ವೀಡಿಯೋದ ಹಿಂದೆ ಹೋದ ಪೊಲೀಸರು ಸಾವಿಗೆ ಕಾರಣರಾದವರನ್ನ ಅರೆಸ್ಟ್ ಮಾಡಿದ್ದಾರೆ.ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ.

Related Articles

Leave a Reply

Your email address will not be published. Required fields are marked *

Back to top button