
ದಿಲ್ಲಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಮೊದಲ ಮಂಗಳಮುಖಿ ಆಯ್ಕೆಯಾಗಿದ್ದಾರೆ. ಇವರು ಆಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿದಿದ್ದರು.
ಬೋಬಿ ಡಾರ್ಲಿಂಗ್ ಎಂದೇ ಖ್ಯಾತರಾಗಿರುವ ಸುಲ್ತಾನ್‌ಪುರಿಯ ಬೋಬಿ ಕಿನ್ನರ್‌ಎಂಬವರು ಸುಲ್ತಾನ್‌ಪುರಿ ವಾರ್ಡ್‌ನಿಂದ ಗೆಲುವು ಸಾಧಿಸಿದ್ದಾರೆ.
ಇದೇ ಮೊದಲ ಬಾರಿಗೆ ಎಎಪಿ ಮಂಗಳಮುಖಿಯೊಬ್ಬರಿಗೆ ಟಿಕೆಟ್‌ನೀಡಿತ್ತು.ಬೋಬಿ ಕಿನ್ನರ್ 2017ರಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು.
ಸುಲ್ತಾನ್‌ಪುರಿಯಲ್ಲಿ ತಮ್ಮ ಸಾಮಾಜಿಕ ಚಟುವಟಿಕೆಗಳ ಮೂಲಕ ಬೋಬಿ ಹೆಸರು ಪಡೆದಿದ್ದು, ಹಿಂದೂ ಯುವ ಸಮಾಜ ಎಕ್ತಾ ಅವಾಮ್ ಎನ್ನುವ ಉಗ್ರ ನಿಗ್ರಹ ಸಮಿತಿಯ ದಿಲ್ಲಿ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಸುಲ್ತಾನ್‌ಪುರಿಯಲ್ಲೇ ಹುಟ್ಟಿ ಬೆಳೆದಿರುವ 38 ವರ್ಷದ ಬೋಬಿ, 14ನೇ ವಯಸ್ಸಿಗೆ ಮಂಗಳಮುಖಿ ಸಮುದಾಯ ಸೇರಿಕೊಂಡು ಮದುವೆ ಸಮಾರಂಭಗಳಲ್ಲಿ ಡ್ಯಾನ್ಸರ್‌ಆಗಿ ಕೆಲಸ ಮಾಡುತ್ತಿದ್ದರು.
ಬಳಿಕ ಸಾಮಾಜಿಕ ಚಟುವಟಿಕೆಗಳ ಮೂಲಕ ರಾಜಕೀಯ ಪ್ರವೇಶಿಸಿದ ಅವರು ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಕೂಡ ಭಾಗಿಯಾಗಿದ್ದರು.