KSRTC ಆಸ್ಪತ್ರೆ ಖಾಸಗೀಯವರಿಗೆ ಮಾರಾಟ! ಎಂ.ಪಿ ತೇಜಸ್ವಿ ಸೂರ್ಯ ಮೇಲೆ ನೌಕರರ ಕೆಂಗಣ್ಣು

ಅದು ಸಾವಿರಾರು ನೌಕರರ ಪಾಲಿನ ಸಂಜೀವಿನಿ, ದಶಕಗಳಿಂದ ಇಲ್ಲಿ ಚಿಕಿತ್ಸೆ ಪಡೆದು ಕೊಳ್ತಿದ್ರು ಅದ್ಯಾಕೋ ಗೊತ್ತಿಲ್ಲ ಈ ಆಸ್ಪತ್ರೆಯ ಮೇಲೆ ರಾಜ್ಯದ ಪವರ್ ಫುಲ್ ಎಂ.ಪಿ ಸಾಹೇಬರೊಬ್ಬರ ಕಣ್ಣು ಬಿದ್ದಿರೋ ಹಾಗಿದೆ.
ಖಾಸಗಿ ಅವರಿಗೆ ಗುತ್ತಿಗೆ ನೀಡಲು ಗಪ್-ಚುಪ್ ಆಗಿ ಎಲ್ಲಾ ಸಿದ್ದತೆ ನಡೆಯುತ್ತಿರೋ ಆರೋಪ ಕೇಳಿ ಬಂದಿದೆ.ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿ ಕಳೆದ 25 ವರ್ಷಗಳ ಹಿಂದೆ ಕೆಎಸ್ಆರ್ಟಿಸಿ ಆಸ್ಪತ್ರೆ ನಿರ್ಮಾಣ ಮಾಡಿತ್ತು.
ಇಲ್ಲಿ ಸಾವಿರಾರು ನೌಕರರು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ರು. ಇದನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಬೇಕು ಎಂದು ಸಾವಿರಾರು ಸಾರಿಗೆ ನೌಕರರು ಸರ್ಕಾರಕ್ಕೆ ಮನವಿ ಮಾಡ್ತಾನೆ ಇದ್ದಾರೆ.
ಆಸ್ಪತ್ರೆಯ ಹಿಂದೆ ಮತ್ತು ಮುಂದೆ ವಿಸ್ತಾರವಾದ ಜಾಗವಿದೆ. ಮದ್ಯ ವ್ಯಸನದ ಡ್ರೈವರ್ ಗಳಿಗೆ ಇಲ್ಲಿ ಡಿ ಅಡಿಕ್ಷನ್ ಕ್ಯಾಂಪ್ ಕೂಡ ಮಾಡಲಾಗ್ತಿತ್ತು. 30 ವರ್ಷಗಳ ಕಾಲ ಗುತ್ತಿಗೆಗೆ ಪ್ಲ್ಯಾನ್ಆದರೆ ಸಂಸದ ತೇಜಸ್ವಿ ಸೂರ್ಯ ವಾಸವಿ ಅನ್ನೋ ಖಾಸಗಿ ಸಂಸ್ಥೆಗೆ ಇದನ್ನು 30 ವರ್ಷಗಳ ಕಾಲ ಗುತ್ತಿಗೆ ನೀಡುವಂತೆ ಸಿಎಂ ಬೊಮ್ಮಾಯಿ, ಸಾರಿಗೆ ಸಚಿವರು ಮತ್ತು ಕೆಎಸ್ಆರ್ಟಿಸಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಅನ್ನೋ ಆರೋಪ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ ಸುಬ್ಬರಾವ್ ಈ ಬಗ್ಗೆ ಗಂಭೀರ ಆರೋಪ ಮಾಡ್ತಿದ್ದಾರೆ.
ನೌಕರರ ಸಂಘಟನೆಯಿಂದ ಪ್ರತಿಭಟನೆಯ ಎಚ್ಚರಿಕೆಈ ಕೆಎಸ್ಆರ್ಟಿಸಿ ಆಸ್ಪತ್ರೆಯಲ್ಲಿ ಖಾಸಗಿ ಅವರು ಡಯಾಲಿಸಿಸ್ ಸೆಂಟರ್ ಓಪನ್ ಮಾಡಿದ್ರೆ ನೌಕರರು ಹಣ ಕೊಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕಾದ ಅನಿವಾರ್ಯ ಎದುರಾಗುತ್ತೆ. ಹಲವಾರು ದಶಕಗಳಿಂದ ನೌಕರರಿಗೆ ಚಿಕಿತ್ಸೆ ನೀಡ್ತಿದ್ದ ಈ ಆಸ್ಪತ್ರೆ ಇದೀಗ ಖಾಸಗೀಯವರ ಪಾಲು ಮಾಡಲು ಮುಂದಾಗಿರುವ ಸಂಸದ ತೇಜಸ್ವಿ ಸೂರ್ಯ ನಡೆ ಸರಿ ಇಲ್ಲ ಎಂದು ನೌಕರರು ಅಸಮಧಾನ ಹೊರ ಹಾಕಿದ್ದಾರೆ. ಕೂಡಲೇ ಸಂಸದ ತೇಜಸ್ವಿ ಸೂರ್ಯ ಈ ನಿರ್ಧಾರವನ್ನು ಕೈ ಬಿಡಬೇಕು.
ಇಲ್ಲದೇ ಹೋದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರಿಗೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.