ಕ್ರೀಡೆ

India Hockey: ಕಡುಬಡತನದಲ್ಲಿ ಅರಳಿದ ಪ್ರತಿಭೆ; ರಾಷ್ಟ್ರೀಯ ಹಾಕಿ ತಂಡಕ್ಕೆ ಹಾಸನದ ಶೇಷೇಗೌಡ ಆಯ್ಕೆ

ಕಡುಬಡತನದಲ್ಲಿ ಅರಳಿದ ಪ್ರತಿಭೆ. ರಾಷ್ಟ್ರೀಯ ಹಾಕಿ ತಂಡಕ್ಕೆ ಹಾಸನದ ಶೇಷೇಗೌಡ ಆಯ್ಕೆ. ಸದ್ಯ ಭಾರತೀಯ ರೈಲ್ವೆ ವಿಭಾಗದಲ್ಲಿ ಚೆಕಿಂಗ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಶೇಷೇಗೌಡ. ಶೇಷೇಗೌಡ ಸಹೋದರಿ ಕೋಮಲ ಕೂಡ ಹಾಕಿ ಆಟಗಾರ್ತಿಯಾಗಿದ್ದು ಶ್ರೀಸಾಯಿಯಲ್ಲಿ ಹಾಕಿ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದ ಅನೇಕ ಪ್ರತಿಭೆಗಳು (Talents) ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತಮ್ಮೂರಿಗೆ, ಜಿಲ್ಲೆಗೆ, ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತಂದಿದ್ದಾರೆ. ಇದರಲ್ಲಿ ಹಾಸನ (Hassan) ಜಿಲ್ಲೆಯ ಹಲವರು ಕ್ರೀಡಾಪಟಿಗಳಿದ್ದಾರೆ. ಹಾಸನ ಜಿಲ್ಲೆಯಿಂದ ಅನೇಕ ಕ್ರೀಡಾಪಟುಗಳು (Athletes) ರಾಷ್ಟ್ರೀಯ ಅಂತರಾಷ್ಟ್ರೀಯ ತಂಡಗಳಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನ (Good Performance) ನೀಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕೊಡಗು ಜಿಲ್ಲೆಯ ಕೂಡ್ಲಿಗೆಯ ಕ್ರೀಡಾ ವಸತಿ ನಿಲಯದಲ್ಲಿ ಕೋಚಿಂಗ್ ಪಡೆದ ಅವರು 2011 ರಲ್ಲಿ ಹದಿನೇಳು ವರ್ಷದೊಳಗಿನ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಶೇಷೇಗೌಡ ಈ ಹಿಂದೆ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದವರ ಪೈಕಿ ಹಾಸನದ ಯುವ ಆಟಗಾರ ರಾಷ್ಟ್ರೀಯ ತಂಡಕ್ಕೆ ಪ್ರವೇಶ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದರು. ಕಡುಬಡತನದಲ್ಲಿ ಅರಳಿದ ಪ್ರತಿಭೆಕ್ರಿಕೆಟ್‌ನಲ್ಲಿ ಜಾವಗಲ್ ಶ್ರೀನಾಥ್, ಪ್ಯಾರಾ ಒಲಂಪಿಕ್ಸ್‌ನಲ್ಲಿ ಗಿರೀಶ್ ಸೇರಿದಂತೆ ಹತ್ತಾರು ಮಂದಿ ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ದಾರೆ. ಈಗ ಅದೇ ಸಾಲಿಗೆ ಮತ್ತೊಬ್ಬ ಹಾಕಿ ಆಟಗಾರ ಸೇರ್ಪಡೆಗೊಂಡಿದ್ದಾರೆ. ಹಾಸನದ ಬೀರನಹಳ್ಳಿಕೆರೆ ಬಡಾವಣೆಯ ಮಹೇಶ್-ಕಮಲ ಪುತ್ರ ಶೇಷೇಗೌಡ ರಾಷ್ಟ್ರೀಯ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾರೆ.ಬಾಲ್ಯದಿಂದಲೂ ಕ್ರೀಡೆಯಲ್ಲೇ ಆಸಕ್ತಿಕಡು ಬಡತನದಲ್ಲಿ ಹುಟ್ಟಿದ ಶೇಷೇಗೌಡ ನಾಲ್ಕರಿಂದ ಏಳನೇ ತರಗತಿಯವರೆಗೆ ಹಾಸನದಲ್ಲಿ, ಎಂಟರಿಂದ ಹತ್ತನೆ ತರಗತಿಯವರೆಗೆ ಕೊಡಗು ಜಿಲ್ಲೆಯ ಕ್ರೀಡಾ ವಸತಿ ನಿಲಯದಲ್ಲಿ, ಬೆಂಗಳೂರಿನಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಶೇಷೇಗೌಡ ತಂದೆ ಮಹೇಶ್ ಗಾರೆ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರೆ. ತಾಯಿ ಕಮಲಮ್ಮ ಗೃಹಿಣಿ. ಶೇಷೇಗೌಡಗೆ ಬಾಲ್ಯದಿಂದಲೂ ಓದಿಗಿಂತ ಹೆಚ್ಚು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರುಕೊಡಗಿನಲ್ಲಿ ಕೋಚಿಂಗ್​ ಪಡೆದ ಶೇಷಗಿರಿಶೇಷೇಗೌಡ ಅವರು, ಶಾಲಾ, ಕಾಲೇಜು ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾಗಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ. ನಂತರ ಅವರು ಆಯ್ಕೆಮಾಡಿಕೊಂಡಿದ್ದು ಹಾಕಿ. ಕೊಡಗು ಜಿಲ್ಲೆಯ ಕೂಡ್ಲಿಗೆಯ ಕ್ರೀಡಾ ವಸತಿ ನಿಲಯದಲ್ಲಿ ಕೋಚಿಂಗ್ ಪಡೆದ ಅವರು 2011 ರಲ್ಲಿ ಹದಿನೇಳು ವರ್ಷದೊಳಗಿನ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button