FCI ನಲ್ಲಿ 4700 ಹುದ್ದೆಗಳಿಗೆ ಅರ್ಜಿ, ತಿಂಗಳಿಗೆ ₹64,000 ವರೆಗೆ ಸಂಬಳ!

ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) 4700 ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ.
ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಯುವ ಜನತೆಗೆ ಇದು ನಿಜವಾಗಿಯೂ ಇದು ಒಳ್ಳೆಯ ಅವಕಾಶವಾಗಿದೆ.ಎಫ್‌ಸಿಐ ಹೊರಡಿಸಿದ ಸೂಚನೆಯ ಪ್ರಕಾರ, II, III ಮತ್ತು IV ಹುದ್ದೆಗಳಲ್ಲಿ ಒಟ್ಟು 4710 ಉದ್ಯೋಗಗಳು ಲಭ್ಯವಿದೆ.
ಆದರೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆನ್‌ಲೈನ್ ಅಪ್ಲಿಕೇಶನ್‌ಗಾಗಿ ಲಿಂಕ್ ಅನ್ನು ಸಕ್ರಿಯಗೊಳಿಸಿದ ನಂತರ, ಆಸಕ್ತ ಅಭ್ಯರ್ಥಿಗಳು ಎಫ್‌ಸಿಐ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
FCI ನೇಮಕಾತಿ 2022 ಹುದ್ದೆಯ ವಿವರಗಳುವರ್ಗ II – 35 ಪೋಸ್ಟ್‌ಗಳುವರ್ಗ III – 2521 ಪೋಸ್ಟ್‌ಗಳುವರ್ಗ IV (ಕಾವಲುಗಾರ) – 2154 ಪೋಸ್ಟ್‌ಗಳುಅಗತ್ಯ ಶೈಕ್ಷಣಿಕ ಅರ್ಹತೆಅಭ್ಯರ್ಥಿಗಳು 8ನೇ/10ನೇ ತೇರ್ಗಡೆ/ಪದವೀಧರರಾಗಿರಬೇಕು.
ಆಯ್ಕೆ ಮಾನದಂಡಲಿಖಿತ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.ಅರ್ಜಿ ಸಲ್ಲಿಸಲು : https://fci.gov.in/