ರಾಜ್ಯ

DRDOನಿಂದ ನಿಖರ ಗುರಿ ಹೊಂದಿದ ಕ್ಷಿಪಣಿ ನಿರೋಧಕ ವ್ಯವಸ್ಥೆ ಯಶಸ್ವಿ ಪರೀಕ್ಷೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ ಹಾಗೂ ಭಾರತೀಯ ಸೇನೆ ಜಂಟಿಯಾಗಿ ಇಂದು ಕ್ಷಿಪಣಿಗಳ ತುರ್ತು ಪ್ರತಿಕ್ರಿಯ ವ್ಯವಸ್ಥೆಯನ್ನು ಯಶಸ್ವಿ ಪರೀಕ್ಷೆಗೊಳಪಡಿಸಿದೆ.

ಒಡಿಶಾಸದ ಕರಾವಳಿಯ ಚಂಡಿಪುರ ಭಾಗದಲ್ಲಿ 6 ವಿಮಾನಗಳ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ.ಇದು ಅತ್ಯಂತ ವೇಗವಾದ ಮತ್ತು ನಿಖರ ಗುರಿ ಹೊಂದಿದ ಕ್ಷಿಪಣಿ ನಿರೋಧಕ ವ್ಯವಸ್ಥೆಯಾಗಿದ್ದು, ಎಲ್ಲ ರೀತಿಯ ಸವಾಲುಗಳನ್ನು ನಿಭಾಯಿಸುವ ಸಾಮಥ್ರ್ಯ ಹೊಂದಿದೆ.ದೂರಗಾಮಿ ನಿಖರತೆ, ಹತ್ತಿರದ ಗುರಿ ಮತ್ತು ಎತ್ತರದ ಪ್ರದೇಶದಲ್ಲೂ ಈ ವ್ಯವಸ್ಥೆ ಕೆಲಸ ಮಾಡಲಿದೆ.

ಕಡಿಮೆ ತೀವ್ರತೆಯ ರಾಡರ್ ತರಂಗಾಂತರಗಳನ್ನು ಆಧರಿಸಿ ಇದು ಗುರಿಯನ್ನು ಭೇದಿಸಬಲ್ಲದ್ದಾಗಿದೆ. ಹಗಲು ರಾತ್ರಿ ವೇಳೆಯಲ್ಲೂ ಸಮರ್ಥವಾಗಿ ಕೆಲಸ ನಿರ್ವಹಿಸಬಲ್ಲದು.ಸೂಜಿಮೊನೆಯಷ್ಟು ನಿಖರತೆಯನ್ನು ಪರೀಕ್ಷಾ ವೇಳೆಯಲ್ಲಿ ಈ ವ್ಯವಸ್ಥೆ ಸಾಬೀತುಪಡಿಸಿದೆ.

ಡಿಆರ್‍ಡಿಒದ ದೇಶೀ ತಂತ್ರಜ್ಞಾನ ಆಧರಿಸಿ ಇದನ್ನು ರೂಪಿಸಲಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button