Weather

Death from Rain: ಬೆಂಗಳೂರಲ್ಲಿ ಮಳೆಗೆ ಇಬ್ಬರು ಬಲಿ; ರಾತ್ರಿಯಿಡೀ ಪೈಪ್‌ನಲ್ಲೇ ಇತ್ತು ಕಾರ್ಮಿಕರ ಮೃತದೇಹ!

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ (Bengaluru) ಮಳೆ (Rain) ಅಬ್ಬರ ಮುಂದುವರೆದಿದೆ. ನಿನ್ನೆ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಕಾರ್ಮಿಕರು (Labor) ಮೃತಪಟ್ಟಿದ್ದಾರೆ. ಉಲ್ಲಾಳ (Ullala) ಉಪನಗರದ ಉಪಕಾರ್ ಲೇಔಟ್‌ನಲ್ಲಿ (Upakar Layout) ಪೈಪ್ ಲೈನ್ (Pipeline) ಕಾಮಗಾರಿ ವೇಳೆ ಅವಘಡ ಸಂಭವಿಸಿದೆ.

ಪೈಪ್ ಲೈನ್ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ತುಂಬಿಕೊಂಡು ಇಬ್ಬರು ಕಾರ್ಮಿಕರು ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಮೂವರು ಕಾರ್ಮಿಕರು ಕೆಲಸ ಮಾಡುತ್ತಾ ಇದ್ದರು. ಅದೃಷ್ಟವಶಾತ್ ಓರ್ವ ಅಲ್ಲಿಂದ ಪಾರಾಗಿದ್ದರೆ, ಇಬ್ಬರು ಮೃತಪಟ್ಟಿದ್ದಾರೆ.ಮಳೆ ನೀರಲ್ಲಿ ಮುಳುಗಿ ಇಬ್ಬರು ಕಾರ್ಮಿಕರು ಸಾವುಉಲ್ಲಾಳ ಉಪನಗರದ ಉಪಕಾರ್ ಲೇಔಟ್ ಬಳಿ ಕಾವೇರಿ ನೀರಿನ 5 ಹಂತದ ಪೈಪ್ ಲೈನ್ ಕಾಮಗಾರಿಯಲ್ಲಿ ತೊಡಗಿದ್ದ ಮೂವರು ಕಾರ್ಮಿಕರು. ಈ ವೇಳೆ ಏಕಾಏಕಿ ಮಳೆ ನೀರು ತುಂಬಿಕೊಂಡಿದ್ದೆ. ಓರ್ವ ಕಾರ್ಮಿಕ ಹೇಗೋ ಅಲ್ಲಿಂದ ಪಾರಾಗಿ ಹೊರಕ್ಕೆ ಬಂದಿದ್ದಾನೆ. ಆದರೆ ಇಬ್ಬರು ಅಲ್ಲಿಂದ ಹೊರಕ್ಕೆ ಬರಲಾಗದೇ, ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಮೃತರನ್ನು ಬಿಹಾರ ಮೂಲದ ದೇವ್ ಭರತ್ ಹಾಗೂ ಉತ್ತರ ಪ್ರದೇಶದ ಅಂಕಿತ್ ಕುಮಾರ್ ಅಂತ ಗುರುತಿಸಲಾಗಿದೆ.ರಾತ್ರಿಯಿಡೀ ಪೈಪ್ ಲೈನ್‌ನಲ್ಲೇ ಇತ್ತು ಮೃತದೇಹಕಾವೇರಿ ಐದನೇ ಹಂತದ ಕಾಮಗಾರಿಗಾಗಿ ಬೃಹತ್ ಪೈಪ್ ಗೆ ಒಳಗೆ ಮೂವರು ಕಾರ್ಮಿಕರು ಇಳಿದಿದ್ದರು. ಮಳೆ ಬರ್ತಿದ್ದಂತೆ ಕಾಮಗಾರಿಗೆ ಅಳವಡಿಕೆ ಮಾಡಿದ್ದ ಪೈಪ್ ಗೆ ನೀರು ತುಂಬಿಕೊಂಡಿದೆ. ಹೀಗಾಗಿ ಪೈಪ್ ತುಂಬಿ ಕಾಮಾಗಾರಿಗೆ ಅಗೆಯಲಾಗಿದ್ದ ಹೊಂಡಕ್ಕೂ ನೀರು ತುಂಬಿದೆ. ಮೂವರ ಪೈಕಿ ಓರ್ವ ನೀರು ತುಂಬುತ್ತಿದ್ದಂತೆ ಹೊರಕ್ಕೆ ಬಂದು ಬಚಾವ್ ಆಗಿದ್ದಾನೆ. ಆದರೆ ನೀರಿನ ರಭಸಕ್ಕೆ ಇಬ್ಬರು ಕಾರ್ಮಿಕರು ಪೈಪ್ ಒಳಗೆಯೇ ಹಲವು ದೂರ ಕೊಚ್ಚಿ ಹೋಗಿದ್ದಾರೆ. ಉಸಿರು ಕಟ್ಟಿ ಇಬ್ಬರು ಸತ್ತಿದ್ದು, ರಾತ್ರಿಯಿಡೀ ಮೃತ ದೇಹಗಲು ಅದೇ ಪೈಪ್ ಲೈನ್ ನಲ್ಲಿ ಇತ್ತು.

Related Articles

Leave a Reply

Your email address will not be published. Required fields are marked *

Back to top button