Uncategorized

CRIS Recruitment 2022: ರೈಲ್ವೆ ಮಾಹಿತಿ ಕೇಂದ್ರದಲ್ಲಿ ಉದ್ಯೋಗಾವಕಾಶ: ವೇತನ 67 ಸಾವಿರ ರೂ.

CRIS Recruitment 2022: ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳು ಈ ಕೆಳಗಿನಂತಿವೆ.
CRIS Recruitment 2022: ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ನವದೆಹಲಿ ಮೂಲದ ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) ಸಹಾಯಕ ಸಾಫ್ಟ್‌ವೇರ್ ಇಂಜಿನಿಯರ್, ಸಹಾಯಕ ಡೇಟಾ ವಿಶ್ಲೇಷಕ (ಸಹಾಯಕ ಸಾಫ್ಟ್‌ವೇರ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳು ಈ ಕೆಳಗಿನಂತಿವೆ.

CRIS Recruitment 2022: ಹುದ್ದೆಗಳ ವಿವರಗಳು:
ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ: 150

ಹುದ್ದೆಗಳ ಹೆಸರು: ಸಹಾಯಕ ಸಾಫ್ಟ್‌ವೇರ್ ಎಂಜಿನಿಯರ್ (144), ಸಹಾಯಕ ಡೇಟಾ ವಿಶ್ಲೇಷಕ (6) ಹುದ್ದೆಗಳು

ವಿಭಾಗಗಳು: ಕಂಪ್ಯೂಟರ್ ಸೈನ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಸ್ಟಾಟಿಕ್ಸ್.

ವಯೋಮಿತಿ: ಅಭ್ಯರ್ಥಿಗಳು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು.

ವೇತನ ಶ್ರೇಣಿ: ತಿಂಗಳಿಗೆ ರೂ.35,400 ರಿಂದ ರೂ.67,700 ವರೆಗೆ ವೇತನ ಸಿಗಲಿದೆ.

ವಿದ್ಯಾರ್ಹತೆಗಳು: ಹುದ್ದೆಗೆ ಅನುಗುಣವಾಗಿ ಸಂಬಂಧಿತ ವಿಶೇಷತೆಯಲ್ಲಿ ಬಿಇ/ಬಿಟೆಕ್/ಎಂಇ/ಎಂಟೆಕ್ ಉತ್ತೀರ್ಣರಾಗಿರಬೇಕು. ಗೇಟ್ 2022 ಸ್ಕೋರ್ ಕೂಡ ಪರಿಗಣಿಸಲಾಗುತ್ತದೆ.

ಆಯ್ಕೆ ವಿಧಾನ: GATE 2022 ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 24, 2022.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button