ಆರೋಗ್ಯರಾಜ್ಯ

Brown Rice For Obesity: ಬೊಜ್ಜಿನ ಸಮಸ್ಯೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ? ಈ ರೈಸ್ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ

Brown rice for weight loss: ಸಾಮಾನ್ಯವಾಗಿ ನಾವೆಲ್ಲರೂ ಊಟದಲ್ಲಿ ಅನ್ನವನ್ನು ತಿನ್ನಲು ಇಷ್ಟಪಡುತ್ತೇವೆ. ಅನ್ನ ನಮ್ಮ ಆಹಾರದ ಅವಿಭಾಜ್ಯ ಅಂಗವೂ ಹೌದು. ಆದರೆ ಬಿಳಿ ಅಕ್ಕಿ ಸ್ಥೂಲಕಾಯ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ.

ಹೀಗಿರುವಾಗ ಅನ್ನ ತಿನ್ನುವುದು ತಪ್ಪಬಾರದು ಮತ್ತು ಬೊಜ್ಜು ಕೂಡ ಹೆಚ್ಚಾಗಬಾರದು ಎಂಬ ಪರ್ಯಾಯದ ಹುಡುಕಾಟದಲ್ಲಿ ಜನರಿಸುತ್ತಾರೆ. ಈ ಸಮಸ್ಯೆಗೆ ಒಂದು ಪರಿಪೂರ್ಣ ಉಪಾಯ ಎಂದರೆ ಅದುವೇ ಬ್ರೌನ್ ರೈಸ್ ಅಥವಾ ಕಂದು ಅಕ್ಕಿ. ಇದು ಅನೇಕ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್, ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಫೈಬರ್ ಇದರಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ.

ಕಂದು ಅಕ್ಕಿ ತೂಕವನ್ನು ಹೇಗೆ ಕಡಿಮೆ ಮಾಡುತ್ತದೆ?
ಬ್ರೌನ್ ರೈಸ್, ಬಿಳಿ ಅಕ್ಕಿಗಿಂತ ಮೂರು ಪಟ್ಟು ಹೆಚ್ಚು ನಾರಿನಂಶವನ್ನು ಹೊಂದಿರುತ್ತದೆ. ಫೈಬರ್ ತೂಕ ಇಳಿಕೆಗೆ ತುಂಬಾ ಸಹಾಯಕವಾಗಿದೆ. ಇದು ಬಿಳಿ ಅಕ್ಕಿಗಿಂತ ಕಡಿಮೆ ಪಿಷ್ಟವನ್ನು ಹೊಂದಿರುತ್ತದೆ. ಆದರೆ ಬಿಳಿ ಅಕ್ಕಿ ಕಾರ್ಬೋಹೈಡ್ರೇಟ್ ಭರಿತ ಆಹಾರವಾಗಿದೆ. ಇದೆ ಕಾರಣದಿಂದ ಹೆಚ್ಚು ಬಿಳಿ ಅಕ್ಕಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಬ್ರೌನ್ ರೈಸ್ ಅತಿಯಾಗಿ ತಿನ್ನುವುದರಿಂದ ನೀವು ತೂಕ ಹೆಚ್ಚಳದ ಸಮಸ್ಯೆಯಿಂದ ಪಾರಾಗಬಹುದು.

ಕಂದು ಅಕ್ಕಿ ತೂಕ ಇಳಿಕೆಗೆ ತುಂಬಾ ಒಳ್ಳೆಯದು
ಕಂದು ಅಕ್ಕಿಯ ಸೇವನೆಯಿಂದ ಹೊಟ್ಟೆ ಚೆನ್ನಾಗಿ ತುಂಬುತ್ತದೆ. ಇದರಿಂದಾಗಿ ಪದೇ ಪದೇ ಹಸಿವಿನ ಅನುಭವ ಉಂಟಾಗುತುವಿಲ್ಲ ಮತ್ತು ಅತಿಯಾಗಿ ತಿನ್ನುವುದರಿಂದ ನಾವು ಪಾರಾಗುತ್ತೇವೆ. ಇದಕ್ಕೆ ವಿಪರೀತ ಎಂಬಂತೆ ಬಿಳಿ ಅಕ್ಕಿ ತ್ವರಿತವಾಗಿ ಜೀರ್ಣವಾಗುತ್ತದೆ, ಇದರಿಂದಾಗಿ ಒಬ್ಬ ಪದೇ ಪದೇ ಹಸಿವಿನ ಅನುಭವವಾಗುತ್ತದೆ ಮತ್ತು ಇದೇ ತೂಕ ಏರಿಕೆಗೆ ಕಾರಣ ಕೂಡ ಆಗುತ್ತದೆ. ಹೀಗಾಗಿ ಕಂದು ಅಕ್ಕಿ ತೂಕ ಇಳಿಕೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಕಂದು ಅಕ್ಕಿಯ ಇತರ ಪ್ರಯೋಜನಗಳು
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೂ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದರ ದೈನಂದಿನ ಸೇವನೆಯಿಂದ ಮಲಬದ್ಧತೆಯೂ ನಿವಾರಣೆಯಾಗುತ್ತದೆ. ಇದು ಜೀವಕೋಶಗಳನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಕಂದು ಅಕ್ಕಿಯಲ್ಲಿ ಸೆಲೆನಿಯಮ್ ಮತ್ತು ಮ್ಯಾಂಗನೀಸ್ ಕಂಡುಬರುತ್ತದೆ. ಸೆಲೆನಿಯಮ್ ಥೈರಾಯ್ಡ್ ಹಾರ್ಮೋನುಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಮ್ಯಾಂಗನೀಸ್ ದೇಹವನ್ನು ಶಕ್ತಿಯುತವಾಗಿರಿಸುತ್ತದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button