Breaking news: ಪೆಂಟಗನ್‌ನಲ್ಲಿ ʻವಿ-22 ಓಸ್ಪ್ರೆ ವಿಮಾನʼ ಪತನ… ನಾಲ್ವರು ಸಾವನ್ನಪ್ಪಿರುವ ಶಂಕೆ ವ್ಯಕ್ತ

ವಾಷಿಂಗ್ಟನ್ (ಯುನೈಟೆಡ್ ಸ್ಟೇಟ್ಸ್): ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಬುಧವಾರ ವಿ-22 ಓಸ್ಪ್ರೇ ವಿಮಾನವು ಪತನಗೊಂಡಿದೆ ಎಂದು ಮೆರೈನ್ ಕಾರ್ಪ್ಸ್ ವಕ್ತಾರರು ತಿಳಿಸಿದ್ದಾರೆ.
ಅಪಘಾತದಿಂದಾಗಿ ಸಂಭವಿಸಿರುವ ಯಾವುದೇ ಸಾವು-ನೋವುಗಳನ್ನು ಅವರು ಖಚಿತಪಡಿಸಲು ಸಾಧ್ಯವಿಲ್ಲ ಎಂದು ವಕ್ತಾರರು ಎಂದಿದ್ದಾರೆ.
ಆದಾಗ್ಯೂ, ಸ್ಥಳೀಯ ಮಾಧ್ಯಮಗಳ ಪ್ರಕಾರ, ಮೆರೈನ್ ಕಾರ್ಪ್ಸ್ ವಿಮಾನದಲ್ಲಿದ್ದ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
‘ಕ್ಯಾಲಿಫೋರ್ನಿಯಾದ ಗ್ಲಾಮಿಸ್‌ನಲ್ಲಿ V-22 (ಓಸ್ಪ್ರೆ) ಅಪಘಾತ ಸಂಭವಿಸಿದೆ ಎಂದು ನಾನು ದೃಢೀಕರಿಸಬಲ್ಲೆ. ವಿಮಾನದಲ್ಲಿ ಯಾವುದೇ ರೀತಿಯ ಪರಮಾಣು ವಸ್ತುವು ಇರಲಿಲ್ಲ. ನಮಗೆ ಯಾವುದೇ ಹೆಚ್ಚುವರಿ ಮಾಹಿತಿ ಇಲ್ಲ’ ಎಂದು ವಕ್ತಾರರು ಬುಧವಾರ ಹೇಳಿಕೆ ನೀಡಿದ್ದಾರೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಮೂಲದ 3 ನೇ ಮೆರೈನ್ ಏರ್‌ಕ್ರಾಫ್ಟ್ ವಿಂಗ್‌ಗೆ ಸೇರಿದ ವಿಮಾನವು ಮೆಕ್ಸಿಕನ್ ಗಡಿಯ ಉತ್ತರಕ್ಕೆ 30 ಮೈಲಿ ದೂರದಲ್ಲಿ ಹೆದ್ದಾರಿ 78 ಮತ್ತು ಗ್ಲಾಮಿಸ್ ಪಟ್ಟಣದ ಬಳಿ ಅಪಘಾತಕ್ಕೀಡಾಗಿದೆ ಎಂದು ನೇವಲ್ ಏರ್ ಫೆಸಿಲಿಟಿ ಎಲ್ ಸೆಂಟ್ರೋ ತನ್ನ ಫೇಸ್‌ಬುಕ್ ಪುಟದಲ್ಲಿ ದೃಢಪಡಿಸಿದೆ ಎಂದು ವರದಿ ತಿಳಿಸಿವೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.