Uncategorized
BREAKING NEWS: ಕಾಮನ್ ವೆಲ್ತ್ ಗೇಮ್ಸ್: ಪುರುಷರ 109 ಕೆಜಿ ವೇಟ್ಲಿಫ್ಟಿಂಗ್ನಲ್ಲಿ ಭಾರತದ ಲವ್ಪ್ರೀತ್ ಸಿಂಗ್ ಗೆ ಕಂಚು | CWG 2022

ನವದೆಹಲಿ: ಪುರುಷರ ವೇಟ್ ಲಿಫ್ಟಿಂಗ್ 109 ಕೆಜಿ ವಿಭಾಗದಲ್ಲಿ ಭಾರತದ ಲವ್ ಪ್ರೀತ್ ಸಿಂಗ್ ( Lovepreet Singh ) 355 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ 6ನೇ ದಿನವಾದಂತ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಲವ್ ಪ್ರೀತ್ ಸಿಂಗ್ ಗೆ ಕಂಚಿನ ಪದಕ ಪಡೆದಿದ್ದಾರೆ. ಅವರು, ಆಸ್ಟ್ರೇಲಿಯಾದ ರಾಬರ್ಟ್ಸ್-ಯಂಗ್ 211 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು, ಲವ್ಪ್ರೀತ್ ಮೂರನೇ ಸ್ಥಾನದಲ್ಲಿದ್ದಾರೆ. ಪುರುಷರ 109 ಕೆಜಿ ಫೈನಲ್ನಲ್ಲಿ ಲವ್ಪ್ರೀತ್ ಸಿಂಗ್ ಒಟ್ಟು 355 ಕೆಜಿ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.