Uncategorized
BIG NEWS: ಬೆಳಗಾವಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಗ್ರೇನೆಡ್ ಪತ್ತೆ, ಮಕ್ಕಳು ಏನ್ ಮಾಡ್ತಾ ಇದ್ರು ಗೊತ್ತಾ.?

ಬೆಳಗಾವಿ: ಜಿಲ್ಲೆಯ ಗಡಿ ಭಾಗದಲ್ಲಿನ ಅಥಣಿಯಲ್ಲಿರುವಂತ ಕುಡನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಗ್ರೇನೆಡ್ ಪತ್ತೆಯಾಗಿದೆ. ಇದು ಬಾಂಬ್ ಎಂಬುದು ಸಹ ಅರಿಯದಂತ ವಿದ್ಯಾರ್ಥಿಗಳು ಮಾತ್ರ, ಅದರಲ್ಲೇ ಆಟ ಆಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಇದನ್ನು ಕಂಡಂತ ಶಿಕ್ಷಕರು ಅದು ಬಾಂಬ್ ಎಂಬುದಾಗಿ ತಿಳಿದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗಳು, ಅಥಣಿಯ ಜತ್ತ ತಾಲೂಕಿನ ಕುಡನೂರು ಗ್ರಾಮದ ಮರಾಠಿ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹ್ಯಾಂಡ್ ಗ್ರೇನೆಡ್ ಅನ್ನು ಪೊಲೀಸರು ವಶಕ್ಕೆ ಪಡೆದು, ಇಡೀ ಗ್ರಾಮವನ್ನೇ ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ ಮತ್ತೆಲ್ಲೂ ಸ್ಪೋಟಕ ವಸ್ತುಗಳ ಪತ್ತೆಯಾಗಿಲ್ಲ.