ಜೀವನಶೈಲಿಸಂಸ್ಕೃತಿ

Astrology Tips: ಕಾಗೆಗಳಿಗೆ ಆಹಾರ ನೀಡುವುದರಿಂದ ಈ ಗ್ರಹ ದೋಷ ದೂರವಾಗುತ್ತೆ

Benefits of crow feeding: ಭಾರತದಲ್ಲಿ ಅನೇಕ ಸಂಪ್ರದಾಯಗಳು, ಆಚರಣೆಗಳು ತಮ್ಮದೇ ಆದ ಪವಿತ್ರ ಅರ್ಥಗಳನ್ನು ಹೊಂದಿವೆ. ಹಿಂದೂ ಸಂಸ್ಕೃತಿಯಲ್ಲಿ, ಪ್ರಕೃತಿಯಲ್ಲಿರುವ ಪ್ರತಿಯೊಂದಕ್ಕೂ ಹೆಚ್ಚಿನ ಮಹತ್ವವಿದೆ. ಪಕ್ಷಿಗಳು, ಮರಗಳು, ಪ್ರಾಣಿಗಳು, ನೀರು, ಗಾಳಿ ಎಲ್ಲವನ್ನೂ ದೇವರ ಸಮಾನವಾಗಿ ಕಾಣಲಾಗುತ್ತದೆ.

ವೇದಗಳು ಮತ್ತು ಶಾಸ್ತ್ರಗಳು ಹೇಳುವಂತೆ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಜಾತಕದಲ್ಲಿ ಗ್ರಹಗಳ ದುಷ್ಪರಿಣಾಮಗಳನ್ನು ತಪ್ಪಿಸಬಹುದು. ಅಲ್ಲದೇ ಉತ್ತಮ ಕರ್ಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಹಿಂದೂ ಪುರಾಣಗಳ ಪ್ರಕಾರ, ಪ್ರಾಣಿಗಳು ಮತ್ತು ಪಕ್ಷಿಗಳು ಕೆಲವು ದೇವರು ಮತ್ತು ದೇವತೆಗಳ ವಾಹನಗಳಾಗಿವೆ. ಆದ್ದರಿಂದ, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರವನ್ನು ನೀಡುವುದು ಪ್ರಯೋಜನಕಾರಿ ಎಂದು ನಂಬಲಾಗಿದೆ. ಅಲ್ಲದೇ ಇದು ನಮ್ಮ ಪಾಪಗಳಿಂದ ನಮ್ಮನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಕಾಗೆ ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಪಕ್ಷಿಯಾಗಿದೆ. ಹಿಂದೂ ಪುರಾಣಗಳಲ್ಲಿ ಕಾಗೆಗಳಿಗೆ ವಿಶೇಷ ಮಹತ್ವವಿದೆ. ಇದು ಶನಿಯ ವಾಹನ ಎಂದು ನಂಬಲಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ಕಾಗೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅನೇಕ ಹಿಂದೂಗಳು ಶನಿ ಗ್ರಹದ ಬಗ್ಗೆ ಭಯಪಡುತ್ತಾರೆ. ಏಕೆಂದರೆ ಇದು ಜಾತಕದಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಶನಿ ಬಾಧೆಯಿಂದ ಕಷ್ಟ ಮತ್ತು ದುಃಖವನ್ನು ಬರುತ್ತದೆ. ನಮ್ಮ ಪೂರ್ವಜರು ಕಾಗೆಗಳ ರೂಪದಲ್ಲಿ ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ, ಕಾಗೆಗಳಿಗೆ ಆಹಾರವನ್ನು ನೀಡುವುದು ನಮ್ಮ ಅಗಲಿದ ಪೂರ್ವಜರಿಗೆ ಆಹಾರ ನೀಡಿದಂತೆ ಎನ್ನಲಾಗುತ್ತದೆ. ಕಾಗೆಗಳು ಪಿತೃ ಲೋಕಕ್ಕೆ ಸಂದೇಶವಾಹಕರಾಗಿಯೂ ಕಾರ್ಯನಿರ್ವಹಿಸುತ್ತವೆ ಎಂಬ ನಂಬಿಕೆಯಿದೆ.

ಶನಿ ಗ್ರಹವು ನಮ್ಮ ಜೀವನದಲ್ಲಿ ವಿಶಿಷ್ಟವಾದ ಕಾರ್ಯವನ್ನು ಹೊಂದಿದೆ. ಇದು ಸ್ಥಿರತೆ ಮತ್ತು ಗಮನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ, ನಾವು ಯಾವುದೇ ಒಂದು ಕಾರ್ಯದಲ್ಲಿ ವಿಳಂಬಗಳು ಮತ್ತು ಅಡೆತಡೆಗಳನ್ನು ಎದುರಿಸುತ್ತಿದ್ದರೂ ಎಲ್ಲವನ್ನೂ ಎದುರಿಸಿ ಮುನ್ನುಗ್ಗಲು ನಮ್ಮ ಶಕ್ತಿಗೆ ಮೀರಿದ ನೋವನ್ನು ಸಹಿಸಿಕೊಳ್ಳಲು ಶನಿದೇವ ಸಹಾಯ ಮಾಡುತ್ತಾನೆ ಎಂಬ ನಂಬಿಕೆಯಿದೆ.

ಕಾಗೆಗೆ ಆಹಾರ ಕೊಡುವುದರಿಂದಾಗುವ ಪ್ರಯೋಜನಗಳು:

ಶನಿ ಅಸ್ತಮ ಸಮಯದಲ್ಲಿ ಉಂಟಾಗುವ ದೋಷಗಳ ನಿವಾರಣೆಗೆ ಕಾಗೆಗೆ ಆಹಾರ ನೀಡಬೇಕು
ಶನಿಯು ಚಂದ್ರನೊಂದಿಗೆ ಇದ್ದಾಗ ಉಂಟಾಗುವ ದುಷ್ಪರಿಣಾಮಗಳನ್ನು ನಿವಾರಿಸಲು ಇದು ಸಹಕಾರಿಯಾಗಿದೆ
ಮೇಷ, ಸಿಂಹ ಅಥವಾ ಕರ್ಕಾಟಕ ರಾಶಿಯಲ್ಲಿ ಶನಿಯಿದ್ದಾಗ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಕಾಗೆಗೆ ಆಹಾರ ನೀಡಬಹುದು.
ಪ್ರಸ್ತುತ ದಶಾ ಅಥವಾ ಭುಕ್ತಿ ಅವಧಿಗಳನ್ನು ಸರಾಗಗೊಳಿಸಲು ಕಾಗೆ ಆಹಾರ ಕೊಡುವುದು ಸಹಕಾರಿಯಾಗಿದೆ
ರಾಹು, ಕೇತು ಅಥವಾ ಮಂಗಳನೊಂದಿಗೆ ಶನಿ ಇರುವುದರಿಂದ ಬಾಧಿತವಾಗಿರುತ್ತದೆ. ಈ ಅವಧಿಯಲ್ಲಿ ಕಾಗೆಗಳಿಗೆ ಆಹಾರ ನೀಡಿದರೆ ಉತ್ತಮ ಎಂಬ ನಂಬಿಕೆಯಿದೆ
ಶನಿಯು ಲಗ್ನದಲ್ಲಿದ್ದರೆ ಅಂಥವರೂ ಕಾಗೆಗಳಿಗೆ ಆಹಾರ ನೀಡಿ ಪರಿಹಾರ ಪಡೆಯಬಹುದು
ವೈದಿಕ ಪಂಚಾಂಗ ಮತ್ತು ಜ್ಯೋತಿಷ್ಯದ ಪ್ರಕಾರ ಮರಣದ ನಂತರ ವ್ಯಕ್ತಿಗೆ ಶ್ರಾದ್ಧ ಕಾರ್ಯಗಳನ್ನು ಮಾಡುತ್ತಾರೆ. ಈ ಸಮಯದಲ್ಲಿಯೂ ಸಹ ಕಾಗೆಗಳಿಗೆ ಆಹಾರ ನೀಡಲಾಗುತ್ತದೆ. ಸತ್ತ ವ್ಯಕ್ತಿಗೆ ವರ್ಷಕ್ಕೊಮ್ಮೆ ಮಾಡುವ ತಿಥಿಯ ಭಾಗವಾಗಿ ಕಾಗೆಗಳಿಗೆ ಆಹಾರವನ್ನು ನೀಡಲಾಗುತ್ತದೆ. ಈ ವೇಳೆ ಒಮ್ಮೆ ಕಾಗೆಯು ಎಲೆಯಿಂದ ತಿನ್ನಲು ಪ್ರಾರಂಭಿಸಿದರೆ, ಸತ್ತ ವ್ಯಕ್ತಿ ಕಾಗೆಯ ರೂಪದಲ್ಲಿ ಬಂದು ಈಟ್ಟ ಆಹಾರವನ್ನು ತಿಂದಿದ್ದಾರೆ ಎಂದು ಭಾವಿಸಲಾಗುತ್ತದೆ. ಇದು ಪೂರ್ವಜರ ಆತ್ಮವು ಈಗ ಶಾಂತವಾಗಿದೆ ಎಂದು ಸೂಚಿಸುತ್ತದೆ. ಅಮವಾಸ್ಯೆಯ ದಿನಗಳಲ್ಲಿ ಕಾಗೆಗಳಿಗೆ ಆಹಾರವನ್ನು ನೀಡಲಾಗುತ್ತದೆ, ಏಕೆಂದರೆ ಸತ್ತ ಪೂರ್ವಜರು ಅಂತಹ ದಿನಗಳಲ್ಲಿ ನಮ್ಮನ್ನು ಭೇಟಿ ಮಾಡುತ್ತಾರೆ ಎಂಬ ನಂಬಿಕೆಯಿದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button