5 ದಿನದಲ್ಲಿ 657 ಕೋಟಿ ರೂ. ಆದಾಯ: ಹೊಸ ವರ್ಷಕ್ಕೆ ಅಬಕಾರಿಗೆ ಬಂಪರ್!

ಹೊಸ ವರ್ಷ ಸ್ವಾಗತಿಸುವ ಸಂಭ್ರಮವನ್ನು ಎಣ್ಣೆ ಹೊಡೆದು ಸ್ವಾಗತಿಸುವ ಯುವ ಸಮುದಾಯದಿಂದ ಅಬಕಾರಿ ಇಲಾಖೆ ಲಾಭದಾಯಕವಾಗಿಯೇ ನಡೆಯುತ್ತಿದ್ದು, ಈ ವರ್ಷ ದಾಖಲೆಯ ಆದಾಯದಿಂದ ಬಂಪರ್ ಹೊಡೆದಿದೆ.
ಹೌದು, ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ವರ್ಷದ ಕೊನೆಯ 5 ದಿನಗಳಲ್ಲಿ 657 ಕೋಟಿ ರೂ. ಆದಾಯ ಬಾಚಿಕೊಂಡಿದೆ.
ಕಳೆದ 5 ದಿನಗಳಲ್ಲಿ ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಲೀಟರ್ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ 657 ಕೋಟಿ ರೂ. ಜೇಬಿಗಿಳಿಸಿದೆ.
ಮದ್ಯ ಮಾರಾಟದ ವಿವರ ಇಲ್ಲಿದೆ.. ಡಿ.27-3.57 ಲಕ್ಷ ಲೀಟರ್ ಮದ್ಯ, 2.41 ಲಕ್ಷ ಬಿಯರ್ ಮಾರಾಟ ಡಿ.28-2.31 ಲಕ್ಷ ಲೀಟರ್ ಮದ್ಯ, 1.67 ಲಕ್ಷ ಬಿಯರ್ ಮಾರಾಟ ಡಿ.29-2.31 ಲಕ್ಷ ಲೀಟರ್ ಮದ್ಯ, 1.93 ಲಕ್ಷ ಬಿಯರ್ ಮಾರಾಟ ಡಿ.30-2.93 ಲಕ್ಷ ಲೀಟರ್ ಮದ್ಯ, 2.59 ಲಕ್ಷ ಬಿಯರ್ ಮಾರಾಟ
ಡಿ.31ರಂದು 3 ಲಕ್ಷ ಲೀಟರ್ ಮದ್ಯ, 2.41 ಲಕ್ಷ ಬಿಯರ್ ಮಾರಾಟ ಡಿ. 31ರಂದು ಒಂದೇ ದಿನ 181 ಕೋಟಿ ಮೌಲ್ಯದ ಮದ್ಯ ಮಾರಾಟ ಡಿ.23ರಿಂದ ಡಿ.31ರವರೆಗೆ 1,262 ಕೋಟಿ ಮೌಲ್ಯದ ಮದ್ಯ ಮಾರಾಟ ಡಿ.23ರಿಂದ 31ರವರೆಗೆ 20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಮಾರಾಟ ಡಿಸೆಂಬರ್ 23ರಿಂದ 31ರವರೆಗೆ 15.04 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
ಬಾರ್, ಪಬ್ ರೆಸ್ಟೋರೆಂಟ್ ಗಳಿಗೆ ದುಪ್ಪಟ್ಟು ಆದಾಯಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ನೂತನ ವರ್ಷವನ್ನು ಆಚರಿಸಲು ಸರಿಯಾಗಿ ಆಚರಿಸಲು ಆಗದೇ ಪರದಾಡಿದ್ದ ಬಾರ್, ಪಬ್, ರೆಸ್ಟೋರೆಂಟ್ ಗಳು ಈ ವರ್ಷ ನಿಗದಿಗಿಂತ ದುಪ್ಪಟ್ಟು ಶುಲ್ಕ ವಿಧಿಸಿದ್ದರೂ ಜನರು ಮುಗಿಬಿದ್ದಿದ್ದರಿಂದ ಭಾರೀ ಆದಾಯ ಗಳಿಸಿವೆ.ಹೊಸವರ್ಷ ಸಂಬಂಧ ಚರ್ಚ್ ಸ್ಟ್ರೀಟ್ಪಬ್ಗಳಿಗೆ ಫುಲ್ ಡಿಮ್ಯಾಂಡ್ ಇತ್ತು.
ಕೊರೊನಾ ನಂತರ ಅದ್ಧೂರಿಯಾಗಿ ಹೊಸ ವರ್ಷಾಚರಣೆ ಆಚರಿಸುತ್ತಿದ್ದು, ಪಬ್ ಮಾಲೀಕರು ಹೊಸ ವರ್ಷದ ಪಾರ್ಟಿಗೆ ಪ್ರತಿ ಬಾರಿಗಿಂತ ಇಂದು ಶೇ.50 ರಷ್ಟು ಬೆಲೆ ಏರಿಕೆ ಮಾಡಿದ್ದರು. ದುಪ್ಪಟ್ಟು ಚಾರ್ಚ್ ನಡುವೆಯೂ ಪಬ್ಗಳು ಹೌಸ್ ಫುಲ್ ಆಗಿದ್ದವು.ಪಾರ್ಟಿ ಪ್ರಿಯರು ದುಪ್ಪಟ್ಟು ಹಣ ಕೊಟ್ಟು ಮುಂಗಡ ಬುಕ್ಕಿಂಗ್ ಮಾಡಿದ್ದರು.
ಪಬ್ಗಳಲ್ಲಿ ಮೋಜು ಮಸ್ತಿ ಮಾಡೋರಿಗೆ ಸ್ಪೆಷಲ್ ಪ್ಯಾಕೇಜ್ ಕೊಡಲಾಗಿತ್ತು. ಪಾರ್ಟಿ ಪ್ರಿಯರನ್ನು ಅಟ್ರ್ಯಾಕ್ಟ್ ಮಾಡಲು ಅನ್ ಲಿಮಿಟೆಡ್ ಆಫರ್ ವ್ಯವಸ್ಥೆ ನೀಡಲಾಗಿತ್ತು. ಕಪಲ್ಸ್, ಫ್ಯಾಮಿಲಿ, ಸಿಂಗಲ್ಸ್ಗಳಿಗೆ ಪ್ರತ್ಯೇಕ ಚಾರ್ಜ್ ಫಿಕ್ಸ್ ಮಾಡಲಾಗಿತ್ತು.