ಜೀವನಶೈಲಿ

43 ವರ್ಷಗಳಲ್ಲಿ 53 ಮದುವೆಯಾದ 63ರ ವೃದ್ಧ!

ಸೌದಿ ಅರೇಬಿಯಾದ 63 ವರ್ಷದ ವೃದ್ಧನೊಬ್ಬ 53 ವಿಭಿನ್ನ ಮಹಿಳೆಯರನ್ನು ವಿವಾಹವಾಗಿದ್ದಾಗಿ ಬಹಿರಂಗಪಡಿಸಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ‘ಶತಮಾನದ ಬಹುಪತ್ನಿತ್ವವಾದಿ’ ಎಂದು ಅಡ್ಡಹೆಸರು ಹೊಂದಿರುವ ಅಬು ಅಬ್ದುಲ್ಲಾ ಅವರು ಹಲವಾರು ಬಾರಿ ವಿವಾಹವಾಗಿದ್ದಾರೆ.

ಈ ಮದುವೆಗಳು ವೈಯಕ್ತಿಕ ಸಂತೋಷಕ್ಕಾಗಿ ಅಲ್ಲ, ಶಾಂತಿ ಮತ್ತು ಸ್ಥಿರತೆಯನ್ನು ಹುಡುಕುವ ಭರವಸೆಯಲ್ಲಿ ಎಂದು ತನ್ನ ಈ ಮಹಾಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.ನಾನು ದೀರ್ಘಾವಧಿಯಲ್ಲಿ 53 ಮಹಿಳೆಯರನ್ನು ಮದುವೆಯಾಗಿದ್ದೇನೆ. ಮೊದಲನೆಯದು ನಾನು 20 ವರ್ಷ ವಯಸ್ಸಿನವನಾಗಿದ್ದಾಗ ಆದ ಮದುವೆ. ಅವಳು ನನಗಿಂತ ಆರು ವರ್ಷ ದೊಡ್ಡವಳು” ಎಂದು ಅಬ್ದುಲ್ಲಾ ಸೌದಿ ಒಡೆತನದ ದೂರದರ್ಶನ MBC ಗೆ ತಿಳಿಸಿದ್ದಾರೆ.

ಅಬು ಅಬ್ದುಲ್ಲಾ ತನ್ನ ಮೊದಲ ಹೆಂಡತಿ ಮತ್ತು ಮಕ್ಕಳ ಜೊತೆ ಉತ್ತಮವಾಗು ಜೀವನ ನಡೆಸುತ್ತಿದ್ದರು. ಆದರೆ ನಂತರ ಅವರ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಂಡವು. ಹೀಗಾಗಿ ಅವರು ಮತ್ತೆ ಮದುವೆಯಾಗಲು ನಿರ್ಧರಿಸಿದರು. ಅವರು 23 ವರ್ಷದವರಾಗಿದ್ದಾಗ, ಇನ್ನೊಬ್ಬ ಮಹಿಳೆಯನ್ನು ವಿವಾಹವಾದರು.

ಆದಾಗ್ಯೂ, ತನ್ನ ಮೊದಲ ಮತ್ತು ಎರಡನೇ ಮದುವೆಯಲ್ಲಿ ಸಮಸ್ಯೆಗಳು ಕಾಣಿಸಿಕೊಂಡವು. ಹೀಗಾಗಿ ತನ್ನ ನೆಮ್ಮದಿ ಹುಡುಕಲು ಮದುವೆಯಾಗುತ್ತಲೇ ಇದ್ದರು.ಸದ್ಯ ಇಲ್ಲಿವರೆಗೆ ಈ ವ್ಯಕ್ತಿ 53 ಮಹಿಳೆಯರನ್ನು ವಿವಾಹವಾಗಿದ್ದಾರೆ. ಅಷ್ಟೆ ಅಲ್ಲದೆ, ತನ್ನ ಮೊದಲ ಇಬ್ಬರು ಹೆಂಡತಿಯರಿಗೆ ಇವರು ವಿಚ್ಛೇದನ ನೀಡಿದ್ದಾರೆ ಗಲ್ಫ್ ನ್ಯೂಸ್ ವರದಿ ಮಾಡಿದೆ.ಅಬು ಅಬ್ದುಲ್ಲಾ ಮಾಡಿಕೊಂಡ ಎಲ್ಲಾ ಮದುವೆಗಳು ವಿಫಲಗೊಳ್ಳುತ್ತಲೇ ಇದ್ದವು.

ಹಲವಾರು ಮದುವೆಗಳಿಗೆ ಸರಳ ಕಾರಣವೆಂದರೆ ಅವರನ್ನು ಸಂತೋಷಪಡಿಸುವ ಮಹಿಳೆಯ ಹುಡುಕಾಟ.ಅವರ ಹೆಂಡತಿಯರಲ್ಲಿ ಅನೇಕರು ಸೌದಿ ಅರೇಬಿಯಾ ಮೂಲದವರು. ಕೆಲವು ತಿಂಗಳುಗಳ ಕಾಲ ಕೆಲಸದ ಪ್ರವಾಸದಲ್ಲಿ ಒಬ್ಬ ವಿದೇಶಿ ಮಹಿಳೆಯನ್ನು ವಿವಾಹವಾದರು. “ನಾನು ಮೂರರಿಂದ ನಾಲ್ಕು ತಿಂಗಳು ಇರುತ್ತಿದ್ದೆ.

ಹಾಗಾಗಿ ದುಷ್ಕೃತ್ಯದಿಂದ ನನ್ನನ್ನು ರಕ್ಷಿಸಿಕೊಳ್ಳಲು ನಾನು ಮದುವೆಯಾಗಿದ್ದೇನೆ”ಎಂದು ಅವರು ಹೇಳಿದರು. “ಪ್ರಪಂಚದ ಪ್ರತಿಯೊಬ್ಬ ಪುರುಷನು ಒಬ್ಬ ಮಹಿಳೆಯನ್ನು ಹೊಂದಲು ಮತ್ತು ಅವಳೊಂದಿಗೆ ಶಾಶ್ವತವಾಗಿ ಉಳಿಯಲು ಬಯಸುತ್ತಾನೆ” ಅಬ್ದುಲ್ಲಾ ಹೇಳಿದರು. ತಮ್ಮ ಬಹು ವಿವಾಹಗಳಲ್ಲಿ ವೈಯಕ್ತಿಕ ಸಂತೋಷವನ್ನು ನೋಡಲಿಲ್ಲ .ಸ್ಥಿರತೆ ಮತ್ತು ಮಾನಸಿಕ ನೆಮ್ಮದಿಗಾಗಿ ಈ ವಿವಾಹವಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button