3 ವಾರದಲ್ಲೇ ‘ಬಾಹುಬಲಿ-2’ ದಾಖಲೆ ಸರಿಗಟ್ಟಿದ ‘ಕಾಂತಾರ’

ಕನ್ನಡದಲ್ಲಿ ಮಾತ್ರ ಬಿಡುಗಡೆ ಆದರೂ ನಂತರ ಜಗತ್ತಿನೆಲ್ಲೆಡೆ ಹಬ್ಬಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಕಾಂತಾರ ಚಿತ್ರ ಇದೀಗ ಬಾಹುಬಾಲಿ ದಾಖಲೆ ಮುರಿದ ಸಾಧನೆ ಮಾಡಿದೆ.
ರಿಷಭ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿದ ಕಾಂತಾರ ಚಿತ್ರ ಐದನೇ ವಾರದ ಪ್ರದರ್ಶನ ಕಾಣುತ್ತಿದ್ದು, ಬಾಹುಬಲಿ 2ರ ಬಾಕ್ಸ್ ಆಫೀಸ್ ಗಳಿಕೆಯ ದಾಖಲೆಯನ್ನು ಕನ್ನಡದ ಕಾಂತಾರ ಸಿನೆಮಾ ಸರಿಗಟ್ಟಿದೆ.
ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನೆಮಾ ಪ್ರದರ್ಶನದ ಐದನೇ ವಾರದಲ್ಲಿ 40 ಕೋಟಿ ರೂ. ಗಳಿಸಿತ್ತು. ಇದೀಗ ಕಾಂತಾರ ಸಿನೆಮಾ ತನ್ನ ಐದನೇ ವಾರದ ಪ್ರದರ್ಶನದಲ್ಲಿ 65 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ.ಹಿಂದಿ ಸೇರಿದಂತೆ ದೇಶದ ಇತರ ಪ್ರಾದೇಶಿಕ ಭಾಷೆಗಳಲ್ಲಿ ಸಿನೆಮಾ ಡಬ್ ಮಾಡಲಾಗಿದ್ದು, ಪ್ರಪಂಚದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ.
ಇನ್ನೊಂದೆಡೆ, ಕಾಂತಾರ ಸಿನಿಮಾದ ನಾಯಕ ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಾಯಕ ನಟಿ ಸಪ್ತಮಿ ಗೌಡ ಸೇರಿದಂತೆ ಚಿತ್ರ ತಂಡ ದಿಲ್ಲಿಯ ಇಂಡಿಯಾ ಗೇಟ್‌ಗೆ ಶನಿವಾರ ಭೇಟಿ ನೀಡಿ, ತಮ್ಮ ಸಿನೆಮಾ ಪ್ರಮೋಷನ್ ಕೈಗೊಂಡಿತು.