
ಬೆಂಗಳೂರು :13ನೇ ಶತಮಾನದ ಅದ್ಭುತಶಾಲಿ ಸಂತ ಪುರುಷ ಅಂತೋಣಿಯವರ 29 ಅಡಿ ಪ್ರತಿಮೆ ಭಾನುವಾರ 23-10-2022 ರಂದು ಸಂಜೆ 3 ಕ್ಕೆ ತಟ್ಟಗುಪ್ಪೆ ಗ್ರಾಮಕ್ಕೆ ಆಗಮನ.
ದ್ವಿಚಕ್ರ ವಾಹನಗಳ ಮೆರವಣಿಗೆಯಲ್ಲಿ ಸಾಲುಣಿಸೆಯಿಂದ ಕಗ್ಗಲೀಪುರದ ಮೂಲಕ ಮರಿಯಾಪುರಕ್ಕೆ ಸಂತ ಅಂತೋಣಿಯವರ ಪ್ರತಿಮೆಯ ಆಗಮನ.
ಸಮಾಧಿ ಬಯಲಿಂದ ಭಕ್ತ ಸಮೂಹದಿಂದ ತಾಳಮೇಳಗಳೊಂದಿಗೆ ಸ್ವಾಗತ.
ಗ್ರಾಮದ ತೇರು ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಆಂಪಿಥಿಯೇಟರ್ ಮೇಲೆ ಸ್ಥಾಪನೆ. ಈ ಐತಿಹಾಸಿಕ ಹಾಗೂ ರೋಚಕ ಸಮಾರಂಭಕ್ಕೆ ಸಾಕ್ಷಿಯಾಯಿತು.
ಧರ್ಮ ಕೇಂದ್ರದ ಗುರುಗಳು ತಿಳಿಸಿದ ಮೇರೆಗೆ ಮರಿಯಾ ಪುರಕ್ಕೆ ದಿವ್ಯ ವಾದ ಸಂತ ಅಂತೋಣಿ ಯವರ ಪ್ರತಿಮೆ ಬರಲಿದ್ದು ಎಲ್ಲರೂ ಭಾಗವಹಿಸಿದರು.

ಸುಮಾರು 200 ಸಂತ ಅಂತೋಣಿ ಯವರ ಬಾವುಟ ತಯಾರಿಕೆಯಾಗಿದೆ… ನಿಮ್ಮ ವಾಹನಗಳಿಗೆ ಅಳವಡಿಸಿ ಮೆರವಣಿಗೆ ಯಲ್ಲಿ ಸಂತರ ಅನುಗ್ರಹ ಪಡೆಯಿರಿ ಎಂದು ಧರ್ಮಕೇಂದ್ರದ ಗುರುಗಳು ತಿಳಿಸಿದರು.

ಈ ಪ್ರತಿಮೆಯನ್ನು ನಿರ್ಮಿಸಲು ಸಹಕಾರ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧರ್ಮಕೇಂದ್ರದ ಗುರುಗಳು ಆ. ತೋಮಸ್ ಕರ್ನಾಟಕ ಕನ್ನಡ ಕಥೋಲಿಕ ಕ್ರೈಸ್ತರ ಧೀಮಂತ ಯಾಜಕ ಇವರಿಂದ ಧನ್ಯವಾದಗಳನ್ನು ಅರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ಸಾಕಷ್ಟು ಭಕ್ತರು ಭಾಗವಹಿಸಿದ್ದರು ಸಂತ ಅಂಥೋಣಿಯವರ 29 ಅಡಿಯ ಸ್ವರೂಪ ಸ್ಥಾಪನೆಯಾಯಿತು.

ವರದಿ ಆಂಟೋನಿ ಬೇಗೂರು