ಬೆಂಗಳೂರು

24 ವಾರ್ಡ್‌ಗಳ ಹೆಸರು ಬದಲಾಯಿಸಿದ ಬಿಬಿಎಂಪಿ

ನಟ ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಇರುವ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಕಾವೇರಿ ನಗರ ವಾರ್ಡ್‌ಗೆ ಪುನೀತ್ ರಾಜ್‌ಕುಮಾರ್ ಅವರು ಹೆಸರು ಸೇರಿದಂತೆ ಒಟ್ಟು ೨೪ ವಾರ್ಡ್ ಗಳಿಗೆ ಹೊಸ ಹೆಸರನ್ನು ನಾಮಕರಣ ಮಾಡಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಡ್‌ವಾರು ಕ್ಷೇತ್ರ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಹಲವು ಬದಲಾವಣೆ ಮಾಡಿದೆ.

ಪ್ರಮುಖವಾಗಿ ದೊಡ್ಡ ಬಿದರಕಲ್ಲು- ಹಂದ್ರಹಳ್ಳಿ, ಕೆಂಗೇರಿ- ಕೆಂಗೇರಿ ಉಪನಗರ, ಹೆಮ್ಮಿಗೆಪುರ-ತಲಘಟ್ಟಪುರ, ಛತ್ರಪತಿ ಶಿವಾಜಿ- ಕನ್ನೇಶ್ವರ ರಾಮ, ಚಾಣಕ್ಯ- ವೀರಮದಕರಿ ಕನ್ನೇಶ್ವರ ರಾಮ-ಚಾಣಕ್ಯ, ವೀರಮದಕರಿ-ಛತ್ರಪತಿ ಶಿವಾಜಿ.

ಪುನೀತ್ ರಾಜ್‌ಕುಮಾರ್- ಕಾವೇರಿ ನಗರ,ಮನೋರಾಯನಪಾಳ್ಯ-ಚೋಳನಗರ, ದೇವರಜೀವನಹಳ್ಳಿ-ಮೋದಿ ಗಾರ್ಡನ್, ರಾಮಮೂರ್ತಿ ನಗರ-ಕೌದೆಕೆನಹಳ್ಳಿ, ವಿಜಿನಾಪುರ-ವಿಜ್ಞಾನಪುರ, ಮೇಡಹಳ್ಳಿ- ತಂಬುಚಟ್ಟಿಪಾಳ್ಯ.

ಎಚ್‌ಎಎಲ್ -ವಿಮಾನನಿಲ್ದಾಣ, ನಾಗವಾರ- ಗೋವಿಂದನಪುರ, ನಾಗರಬಾವಿ-ಕಲ್ಯಾಣ ನಗರ, ಚಂದ್ರಲೇಔಟ್-ನಾಗರಬಾವಿ-ಅಗರ ವನ್ನಾರ್‌ಪೇಟೆ, ನೀಲಸಂದ್ರ- ಆಸ್ಟಿನ್‌ಟೌನ್, ವನ್ನಾರ್‌ಪೇಟೆ-ನೀಲಸಂದ್ರ, ಯಲಚೇನಹಳ್ಳಿ-ಕನಕನಗರ, ಕೋಣನಕುಂಟೆ-ಯಲಚೇನಹಳ್ಳಿ,

ಎಚ್‌ಎಸ್‌ಆರ್ -ಸಿಂಗಸಂದ್ರ ಎಚ್‌ಎಸ್‌ಆರ್ ಲೇಔಟ್, ಪುಟ್ಟೇನಹಳ್ಳಿ, ಸಾರಕ್ಕಿ ಕೆರೆ-ಸಾರಕ್ಕಿ ಕೆರೆ.೨೦೧೧ರ ಜನಗಣತಿಯ ಆಧಾರದ ಮೇರೆಗೆ ವಾರ್ಡ್ ಮರು ವಿಂಗಡಣೆ ಮಾಡಲಾಗಿದೆ.

ವರದಿಯಲ್ಲಿ ಈವರೆಗೆ ಇದ್ದ ೧೯೮ ವಾರ್ಡ್‌ಗಳ ಸಂಖ್ಯೆಯನ್ನು ೨೪೩ಕ್ಕೆ ಹೆಚ್ಚಿಸಿದ್ದು, ಪ್ರತಿ ವಾರ್ಡ್‌ಗಳ ಸಂಖ್ಯೆ ಮತ್ತು ವಾರ್ಡ್‌ಗಳ ಹೆಸರು ಹಾಗೂ ಪ್ರತಿ ವಾರ್ಡ್‌ಗಳ ವ್ಯಾಪ್ತಿಯ ಗಡಿಗಳ ಚಕ್ಕಬಂದಿಯ ವಿವರಗಳನ್ನು ನೀಡಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮೇಪುರ ಗ್ರಾಮ, ಕಾಂಚಿರಾಮ್ ನಗರ (ಅಂಬೇಡ್ಕರ್ ನಗರ) ಎಂಬ ಗ್ರಾಮಗಳು ಬಿಬಿಎಂಪಿಗೆ ಸೇರ್ಪಡೆಯಾಗಲಿವೆ.

ಇದರಿಂದ ೬ ಸಾವಿರ ಜನಸಂಖ್ಯೆ ಹೆಚ್ಚಲಿದೆ. ಉಳಿದಂತೆ ಹಳೆಯ ೧೯೮ ವಾರ್ಡ್ ಗಡಿಯೊಳಗೆ ಬಿಬಿಎಂಪಿ ವಾರ್ಡ್ ಮರುವಿಂಗಡಿಸಿ ೨೪೩ಕ್ಕೆ ಹೆಚ್ಚಿಸಲಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button