24 ಗಂಟೆಯಲ್ಲಿ ದೇಶದಾದ್ಯಂತ 9,923 ಮಂದಿಗೆ ಕೊರೋನಾ..!
17 deaths in last 24 hours,India reports 9923 new cases

ದೇಶದಲ್ಲಿ ಏರಿಕೆ ಆಗುತ್ತಿದ್ದ ಕೊರೊನಾ ಕಡಿಮೆ ಕಂಡುಬಂದಿದೆ.ಕಳೆದ 24 ತಾಸಿನಲ್ಲಿ 9,923 ಹೊಸ ಸೋಂಕಿತರು ಪತೆಯಾಗಿದ್ದು, 17 ಮಂದಿ ಕೊನೆಯುಸಿರೆಳೆದಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಸೋಂಕಿತರು ಇಳಿಕೆಯಾದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 79,313 ಕ್ಕೆ ಏರಿದೆ ಎಂದು ಎಚ್ಚರಿಸಿದೆ.
ಸಕ್ರಿಯ ಪ್ರಕರಣಗಳಲ್ಲಿ ಒಟ್ಟು ಸೋಂಕುಗಳಲ್ಲಿ 0.18 ಪ್ರತಿಶತವನ್ನು ಒಳಗೊಂಡಿವೆ. ಚೇತರಿಕೆ ದರವು 98.61 ಪ್ರತಿಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.ರಾಷ್ಟ್ರವ್ಯಾಪಿ ಲಸಿಕೆ ನೀಡಿಕೆ ಅಭಿಯಾನದಡಿ ೀವರೆಗೆ 196.32 ಕೋಟಿ ಡೋಸ್‍ನೀಡಲಾಗಿದೆ.
ದೇಶದಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ,ದಕ್ಷಿಣ ಭಾರತದಲ್ಲಿ ಸೋಂಕಿತರ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಸೊಚಿಸಲಾಗಿದೆ.
ದೇಶದಲ್ಲಿ ಇದುವರೆಗೆ ವರದಿಯಾದ ಒಟ್ಟು 5,24,890 ಸಾವುಗಳಲ್ಲಿ ಮಹಾರಾಷ್ಟ್ರದಿಂದ 1,47,888, ಕೇರಳದಿಂದ 69,889, ಕರ್ನಾಟಕದಿಂದ 40,113, ತಮಿಳುನಾಡಿನಿಂದ 38,026, ದೆಹಲಿಯಿಂದ 26,238, ಉತ್ತರ ಪ್ರದೇಶದಿಂದ 23,527 ಮತ್ತು ಪಶ್ಚಿಮ ಬಂಗಾಳದಿಂದ 21,209. 70 ಮಂದಿ ಸಾವನ್ನಪ್ಪಿದ್ದಾರೆ.