ಅಪರಾಧ
23 ಕೋಟಿ ಮೌಲ್ಯದ 61 ಕೆಜಿ ಚಿನ್ನ ವಶ

ದೇಶದಲ್ಲಿ ಮಧ್ಯಮವರ್ಗ ವಿಧಿಯಿಲ್ಲದೆ ತೆರಿಗೆ ಪಾವತಿಸುತ್ತಿದ್ದು, ವಿದೇಶದಿಂದ ಭಾರತಕ್ಕೆ ವಾಪಾಸಾಗುವ ಕೆಲವು ಭಾರತೀಯರು ಭಾರತಕ್ಕೆ ತೆರಿಗೆ ವಂಚಿಸುವ ಪ್ರಯತ್ನವಾಗಿ ಚಿನ್ನ, ಬೆಲೆ ಬಾಳುವ ವಸ್ತುವನ್ನುಕಳ್ಳದಾರಿ ಮೂಲಕ ಸಾಗಿಸುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಮುಂಬೈನ ಛತ್ರಪತಿ ಶಿವಾಜಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 32 ಕೋಟಿ ಮೌಲ್ಯದ 61 ಕೆಜಿ ಚಿನ್ನದ ಬಾರ್ ಗಳನ್ನು ವಶಕ್ಕೆ ಪಡೆದಿದ್ದಾರೆ.ನಾಲ್ವರು ಭಾರತೀಯರು ತಾಂಜೇನಿಯಾದಿಂದ ಭಾರತಕ್ಕೆ ಮರಳಿದ್ದು, ಬರುವಾಗಿ 61 ಕೆಜಿ ಚಿನ್ನದ ನಾಣ್ಯಗಳನ್ನು ಧರಿಸಿರುವ ಬಟ್ಟೆಯ ಒಳಗೆ ಅಂದರೆ ಒಳ ಉಡುಪಿಗೆ ಬೆಲ್ಟ್‌ಗಳನ್ನು ಧರಿಸಿದ್ದು, ಇದರಲ್ಲಿ ಚಿನ್ನವನ್ನು ಇಟ್ಟುಕೊಂಡು ಸಾಗಿಸಲು ಮುಂದಾಗಿದ್ದಾರೆ.
ಅಧಿಕಾರಿಗಳು ಏಳು ಪ್ರಯಾಣಿಕರನ್ನು ಬಂಧಿಸಿದ್ದಾರೆ. ಇವರಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳೆಯರು ಇದ್ದಾರೆ ಎಂದು ತಿಳಿಸಿದ್ದಾರೆ.