2,000 ಮಂದಿಗೆ 5 ಲಕ್ಷ ನೆರವು ನೀಡಿ ಸ್ವಂತ ಮನೆ ಹೊಂದಿಸಲು BBMP ಪ್ಲಾನ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ಇಲ್ಲದವರಿಗೆ ಗುಡ್ ನ್ಯೂಸ್ ಇದಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಒಂಟಿ ಮನೆ ಯೋಜನೆಯಡಿ ಸೂರು ಹೊಂದಲು ಆಸೆ ಪಡುವವರಿಗೆ ಆರ್ಥಿಕ ಸಹಾಯ ಚಾಚಲಿದೆ.

ಹೌದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಂತ ಮನೆ ಹೊಂದಲು ಆಸೆ ಪಡುವವರಿಗೆ ಗುಡ್ ನ್ಯೂಸ್.. ಯೆಸ್.. ಆರ್ಥಿಕ ಕೊರತೆ ಹಾಗೂ ಕೋವಿಡ್ ಹಿನ್ನೆಲೆ ಮೂಲೆ ಸೇರಿದ್ದ ಒಂಟಿ ಮನೆ ಯೋಜನೆ ಸದ್ಯ ಮತ್ತೆ ಚಾಲ್ತಿಗೆ ಸಿಗುತ್ತಿದೆ. ಇದರಿಂದ ಮತ್ತೆ ಸ್ವಂತ ಮನೆ ಹೊಂದಲು ಸಹಾಯ ಹಸ್ತ ಸಿಗಲಿದೆ. ಬಿಬಿಎಂಪಿ ಕಲ್ಯಾಣ ಯೋಜನೆಯಡಿ 5 ಲಕ್ಷ ರೂಪಾಯಿ ಆರ್ಥಿಕ ಸಹಾಯ ಧನ ನೀಡಲಿದೆ.
ಯೋಜನೆಯ ಫಲಾನುಭವಿಗಳಾಗೋಕೆ ಏನೆಲ್ಲ ಷರತ್ತುಗಳಿದೆ..?
- ಬೆಂಗಳೂರಲ್ಲಿ ಕನಿಷ್ಠ 3 ವರ್ಷ ವಾಸವಿರಬೇಕು.
- ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು.
- ಅರ್ಜಿದಾರರ ಹೆಸರಲ್ಲಿ ನಿವೇಶನ ಇದ್ದು, ದಾಖಲೆ ಸಲ್ಲಿಕೆಯಾಗಬೇಕು.
- ಅರ್ಜಿದಾರರು ಸರ್ಕಾರಿ ದಾಖಲೆ ಹೊಂದಿರಬೇಕು.
- ಗರಿಷ್ಠ 600 ಅಡಿ ಜಾಗ ಅರ್ಜಿದಾರ ಹೊಂದಿದ್ದು, ಬೇರೆ ಸ್ವತ್ತು ಇರಬಾರದು.
- ವಾರ್ಷಿಕ ಆದಾಯ ಎಲ್ಲ ವರ್ಗದವರಿಗೂ 2.5 ಲಕ್ಷ ರೂ. ಹೊಂದಿರಬೇಕು.
- ಪೌರಕಾರ್ಮಿಕರು ಸೂಕ್ತ ನೌಕರಿ ಸಂಬಂಧಿತ ದಾಖಲೆ ಹೊಂದಿರಬೇಕು.
- ವಿಕಲಚೇತನರು ಯುಡಿಐಡಿ ಸಂಖ್ಯೆ ಹೊಂದಿರಬೇಕು.
- ಪಡೆದ ಹಣದಿಂದ ಮನೆ ಕಟ್ಟಿಕೊಳ್ಳಲೇಬೇಕು.
- ಬೇರೆ ಇಲಾಖೆಗಳಿಂದ ಮನೆ ಕಟ್ಟಲು ಆರ್ಥಿಕ ನೆರವು ಪಡೆದಿರಬಾರದು.

ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಗೆ ಮಾತ್ರ ಮಾನ್ಯತೆ ಇದ್ದು, ಪಾಲಿಕೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತಾರೆ. ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ನಡೆಯಲಿದೆ. ಬರೋಬ್ಬರಿ 2 ಸಾವಿರ ಜನರಿಗೆ ಆರ್ಥಿಕ ನೆರವು ಕೊಡುವ ಉದ್ದೇಶವೂ ಇದೆ. ಸದ್ಯ ಸ್ಥಳೀಯಸಂಸ್ಥೆ ಹಾಗೂ ವಿಧಾನಸಭೆ ಎಲೆಕ್ಷನ್ ಸಹ ಸನ್ನಿಹವಾಗುತ್ತಿದ್ದು, ಜನರ ಸೆಳೆಯಲು ಬೇಕಾದ ಎಲ್ಲ ಕಸರತ್ತು ಜೋರಾಗಿಯೇ ಈ ರೀತಿಯ ಯೋಜನೆಗಳ ಮೂಲಕ ನಡೆಯುತ್ತಿದೆ.