
ವ್ಯಕ್ತಿಯೊಬ್ಬನ ಮೇಲೆ ಕಲ್ಲು ಪದೇಪದೆ ಎತ್ತಿ ಹಾಕಿ ಮೂವರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿ ಕೊಲೆಗೈದ ಭೀಕರ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶನಿವಾರ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಬಾದಾಮಿ ಮೂಲದ 26 ವರ್ಷದ ಬಾಳಕಪ್ಪ ಜಮಖಂಡಿ ಎಂಬುವವರನ್ನು ಕೊಲೆ ಮಾಡಲಾಗಿದೆ.
ಬೆಂಗಳೂರಿನ ಕೆ ಪಿ ಅಗ್ರಹಾರ ಐದನೇ ಕ್ರಾಸ್ನಲ್ಲಿ ಬರೋಬ್ಬರಿ ಆರು ಮಂದಿ ಸೇರಿ ಸುಮಾರು 20 ಬಾರಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದವರು ಕೂಡ ಬಾದಾಮಿ ಮೂಲದವರು ಎಂದು ಶಂಕಿಸಲಾಗಿದೆ.
ಮೊದಲಿಗೆ ಮಹಿಳೆಯೊಬ್ಬರು ಬಾಳಪ್ಪ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದರು. ಬಳಿಕ ಕೆಲವರು ಬಾಳಪ್ಪ ಜಮಖಂಡಿಯನ್ನು ಹಿಡಿದುಟ್ಟುಕೊಂಡರೆ ಉಳಿದವರು ತಲೆ ಮೇಲೆ ಪದೇಪದೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.
ಸದ್ಯ ಕೊಲೆ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳ ಕಾರ್ಯಾಚರಣೆ ಆರಂಭಿಸಿದ್ದಾರೆ.ಮೊಬೈಲ್ ಸುಳಿವಿನ ಮೇರೆಗೆ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ.
ಶನಿವಾರ ರಾತ್ರಿ ಕೆ. ಪಿ ಅಗ್ರಹಾರಕ್ಕೆ ಬಂದಿದ್ದ ಬಾಳಪ್ಪ ಜಮಖಂಡಿ, ಮೊಬೈಲ್ ಚಾರ್ಜ್ಗೆ ಹಾಕಿ ಕರೀತಾ ಇದ್ದಾರೆ ಹೋಗಿ ಬರ್ತಿನಿ ಅಂತ ಹೋದಾಗ ಹತ್ಯೆಯಾಗಿದ್ದಾನೆ.ಐದನೇ ಕ್ರಾಸ್ ಮೆಡಿಕಲ್ ಸ್ಟೋರ್ ಬಳಿ ಇದ್ದಾಗ ಅಲ್ಲಿಗೆ 6 ಜನ ಬಂದಿದ್ದಾರೆ.
ಈ ಮೂವರು ಮಹಿಳೆಯರು ಮೂವರು ಪುರುಷರು ಬಾಳಪ್ಪ ಜಮಖಂಡಿ ಜೊತೆ ಗಲಾಟೆ ಮಾಡಿ ಬಳಿಕ ಬಳಿಕ ಬಾಳಪ್ಪನ ಹಿಡಿದುಕೊಂಡು ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾರೆ.