ರಾಜ್ಯ

20 ನೇ ವಯಸ್ಸಿನಲ್ಲಿ ಅಂತರ್ಜಾತಿ ವಿವಾಹ ಮಾಡಿಸಿ 10 ವರ್ಷ ಫ್ಯಾಮಿಲಿಯಿಂದ ದೂರಾದೆ: ಜಗ್ಗೇಶ್

ನಟ ಜಗ್ಗೇಶ್, ಅದಿತಿ ಪ್ರಭುದೇವ ನಟನೆಯ ‘ತೋತಾಪುರಿ’ ಸಿನಿಮಾ ( Totapuri Movie ) ತಂಡ ಸುದ್ದಿಗೋಷ್ಠಿಯೊಂದನ್ನು ಆಯೋಜಿಸಿತ್ತು. ಈ ಚಿತ್ರದಲ್ಲಿ ಸಾಕಷ್ಟು ಡಬಲ್ ಮೀನಿಂಗ್ ಮಾತುಗಳಿವೆ ಎಂಬ ಆರೋಪ ಇತ್ತು. ಈ ಬಗ್ಗೆ ನಟ ಜಗ್ಗೇಶ್ ಮಾತನಾಡಿದ್ದು, ಜಾತಿ ವ್ಯವಸ್ಥೆಯ ಕುರಿತು ಮಾತನಾಡಿದ್ದಾರೆ.

ವಿಜಯ ಪ್ರಸಾದ್‌ ಮತ್ತು ಜಗ್ಗೇಶ್‌ ಕಾಂಬಿನೇಶನ್‌ನ ಈ ಸಿನಿಮಾದಲ್ಲಿ ಭಾವೈಕ್ಯತೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.ನಟ ಜಗ್ಗೇಶ್ ಹೇಳಿದ್ದಿಷ್ಟು..ನಾನು ಕಾಲೇಜ್‌ವೊಂದರ ಪಕ್ಕದಲ್ಲಿ ಇರೋದು, ಆ ಮಕ್ಕಳು ಮಾತನಾಡುವುದು ಗೊತ್ತಿದೆ. ಇಂದು ಆಪ್‌ ಮೂಲಕ ನಾವು ನೇರವಾಗಿ ಎಲ್ಲವನ್ನು ನೋಡುತ್ತಿದ್ದೇವೆ, ಆದರೆ ಡೈಲಾಗ್ ಮಾತನಾಡಿದರೆ ಬೋಧನೆ ಶುರುವಾಗುತ್ತದೆ.

ನಾನು ಯಾವುದೋ ಕಾಲದಲ್ಲಿ ಈ ತರ ಪಂಚಿಂಗ್ ಡೈಲಾಗ್ ಹೊಡೆದಿದ್ದೇನೆ. ವಿಜಯ್ ಪ್ರಸಾದ್ ಅವರು ಈ ತರ ಸ್ಕ್ರಿಪ್ಟ್ ಮಾಡೋದು ಜನರ ಗಮನಸೆಳೆಯಲು ಅಷ್ಟೇ. ನೇರವಾಗಿ ಹೇಳಿದರೆ ಯಾರೂ ಕೇಳಿಸಿಕೊಳ್ಳಲ್ಲ, ಆದರೆ ಟ್ವಿಸ್ಟ್ ಮಾಡಿ ಹೇಳಿದರೆ ಅದನ್ನು ಗ್ರಹಿಸುತ್ತಾರೆ.20ನೇ ವಯಸ್ಸಿನಲ್ಲಿ ನಾನು ಅಂತರ್ಜಾತಿ ವಿವಾಹ ಮಾಡಿಸಿದ್ದೆ, ಆಗ ನನ್ನ ಕುಟುಂಬದವರು 10 ವರ್ಷಗಳ ಕಾಲ ನನ್ನನ್ನು ದೂರ ಇಟ್ಟಿದ್ದರು. ನಾನು ಜಾತಿ ಅಂದರೆ ಮುಖಕ್ಕೆ ಹೊಡೆಯುತ್ತೇನೆ.

ಎಲ್ಲರೂ ಒಂದೇ ಎಂದು ನಾನು ಭಾವಿಸುತ್ತೇನೆ. ನಾನು ಸೂಪರ್ ಸ್ಟಾರ್ ನಟ, ಡೈರೆಕ್ಟರ್ ಮಗನೂ ಅಲ್ಲ, ನನ್ನ ಹಿಂದೆ ದೊಡ್ಡ ಪ್ರೊಡಕ್ಷನ್ ಹೌಸ್ ಕೂಡ ಇಲ್ಲ. ಯಾರೇ ನನ್ನನ್ನು ದ್ವೇಷ ಮಾಡಿದರೂ ಕೂಡ, ಅವನು ನನಗೆ ಅರ್ಥ ಆಗಲಿಲ್ಲ, ಒಳ್ಳೆಯದಾಗಲಿ ಎಂದು ಹೇಳುವ ಸಂಸ್ಕೃತಿ ನನ್ನದು. ಸಿನಿಮಾದಲ್ಲಿ ಕಾಮಿಡಿ ಮಾಡುವ ನಾನು ನಿಜ ಜೀವನದಲ್ಲಿ ಕ್ರಾಂತಿ ಇರುವ ವ್ಯಕ್ತಿ.

ಈ ಪ್ರಪಂಚದಲ್ಲಿ ಜಾತಿ ಇರಬಾರದು ಎಂಬ ಪ್ರಾಮಾಣಿಕ ಕಿಡಿ ಇತ್ತು. ಹಾಗಾಗಿ ಅಂತರ್ಜಾತಿ ವಿವಾಹ ಮಾಡಿಸಿದ್ದೆ. ನನ್ನ ಮಗ ಕೂಡ ಬೇರೆ ದೇಶದವರನ್ನು ಮದುವೆಯಾಗಿ ಚೆನ್ನಾಗಿದ್ದಾನೆ. ಆ ಬಗ್ಗೆ ನನಗೆ ಖುಷಿಯಿದೆ.ನನ್ನಿಂದ ನಟನೆ ಎಲ್ಲವನ್ನು ಕಿತ್ತುಕೊಂಡರೂ ತೊಂದರೆ ಇಲ್ಲ, ಆದರೆ ರಾಯರು ದೂರವಾದರೆ ನನ್ನ ಸಾವಾಗಲಿ.

ನಾನು ಶೂದ್ರನಾದರೂ ನನ್ನನ್ನು ಬೃಂದಾವನದ ಮುಂದೆ ಕೂರಸ್ತಾರೆ, ಅಲ್ಲಿ ವಿಷ್ಣುಸಹಸ್ರನಾಮ ಓದಿ ನನ್ನ ಎಲ್ಲ ಪೂಜೆ ಮುಗಿಸಿ ಬರುತ್ತೇನೆ. ಅದು ನಮ್ಮ ಮಠಸಲ್ಮಾನ್ ಖಾನ್ ಅವರು ಪ್ರತಿವರ್ಷ ಗಣಪತಿ ಪೂಜೆ ಮಾಡ್ತಾರೆ, ಅವರಿಗೆ ಮನಸ್ಸು ವಿಶಾಲವಾಗಿದೆ.

ಈ ಧರ್ಮದವರು ಆ ಧರ್ಮದವರಿಗೆ ಬೈತಾರೆ, ಆ ಧರ್ಮದವರು ಈ ಧರ್ಮದವರಿಗೆ ಬೈತಾರೆ.25 ಲಕ್ಷ ಕೊಟ್ಟರೆ ನಮ್ಮ ಸಿನಿಮಾಗಳ ರಿವ್ಯೂ ಮಾಡುವ ಆಪ್‌ ಇದೆ. ನಮ್ಮ ನಿರ್ಮಾಪಕರನ್ನು ಆ ಆಪ್‌ನವರು ಮೀಟ್ ಮಾಡಿದ್ದಾರೆ. ಆದರೆ ಅದಕ್ಕೆಲ್ಲ ನಾವು ಉತ್ತೇಜನ ಕೊಡುವುದಿಲ್ಲ.

ಜನರು ನಮ್ಮ ಸಿನಿಮಾವನ್ನು ಮೆಚ್ಚಿದರೆ ಸಾಕು. ಡೋಂಗಿ ಮಾಡದೆ ದುಡ್ಡು ಕೊಟ್ಟು ನಮ್ಮ ಸಿನಿಮಾವನ್ನು ನೋಡುತ್ತಾರೆ ಎಂದು ನಾನು ಇದೆಲ್ಲ ಬೇಡ ಅಂತ ಹೇಳಿದೆ. ನಮ್ಮ ಸಿನಿಮಾ ಗಜಗಾಂಭೀರ್ಯದಿಂದ ಥಿಯೇಟರ್‌ನಲ್ಲಿ ನಡೆಯುತ್ತಿದೆ.

ವಾಮಮಾರ್ಗಗಳ ನೂರು ಆಟ ಗೊತ್ತು ನನಗೆ, ಆದರೆ ನಾನು ಅದನ್ನೆಲ್ಲ ಮಾಡಲು ಹೋಗೋದಿಲ್ಲ. ಜನರು ಇವತ್ತು ತಮಿಳು ಸಿನಿಮಾ ಕನ್ನಡಕ್ಕಿಂತ ಹೆಚ್ಚು ಕಲೆಕ್ಷನ್ ಮಾಡುತ್ತಿದೆ. ಯಾಕೆಂದರೆ ಅಲ್ಲಿ ರಜನಿಕಾಂತ್ ಇದ್ದಾರೆ.

ತುಂಬ ಚೆನ್ನಾಗಿ ಅವರು ಪ್ರಚಾರ ಮಾಡಿದ್ದಾರೆ. ಕನ್ನಡದವರಿಗೆ ನಾಚಿಕೆ ಆಗಬೇಕು. ಪರಸ್ಪರ ಪ್ರೀತಿಸಿದಾಗ ಮಾತ್ರ ನಮ್ಮ ಚಿತ್ರರಂಗ ಬೆಳೆಯುತ್ತದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button