
ಪ್ರಿಯಕರನ ಜತೆ ಸೇರಿ ತಾಳಿ ಕಟ್ಟಿದ ಗಂಡನ ಕೊಲೆಗೆ ಸಂಚು ರೂಪಿಸಿದ ಮಹಿಳೆ ಹಾಗೂ ಕೊಲೆಗೈದ ಪ್ರಿಯಕರನನ್ನು ಕಳ್ಳಂಬೆಳ್ಳ ಪೊಲೀಸರು ಎಡೆಮುರಿ ಕಟ್ಟಿದ್ದಾರೆ.ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕರೇಜವನಹಳ್ಳಿ ಗ್ರಾಮದಲ್ಲಿ ರಾಜು (34)ಸುಟ್ಟ ಶವ ಮಂಗಳವಾರ ಪತ್ತೆಯಾಗಿತ್ತು, ಪ್ರಕರಣ ಬಗ್ಗೆ ತನಿಖೆ ಕೈಗೊಂಡ ಪೊಲೀಸರು 24ಗಂಟೆಯೊಳಗೆ ಆರೋಪಿಗಳಾದ ರಾಕೇಶ್ (19) ಹಾಗೂ ಮೀನಾಕ್ಷಿ ( 25) ಅವರನ್ನು ಬಂಧಿಸಿದ್ದಾರೆ.8 ವರ್ಷಗಳ ಹಿಂದೆ ಮೀನಾಕ್ಷಿ ಎಂಬಾಕೆಯನ್ನು ರಾಜು ಮದುವೆಯಾಗಿದ್ದ. ದಂಪತಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಇದೆ. ರೇಜವನಹಳ್ಳಿ ಗ್ರಾಮದ ರಾಕೇಶ್ ತುಮಕೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಮದುವೆ ಕಾರ್ಯಕ್ರಮವೊಂದರಲ್ಲಿ ಪರಿಚಯವಾದ ಮೀನಾಕ್ಷಿ ಮೊಬೈಲ್ ನಂಬರ್ ಪಡೆದು ಸ್ನೇಹ ಸಂಬಂಧ ಬೆಳೆಸಿದ್ದ.ದರ್ಜಿ ಕೆಲಸ ಮಾಡುತ್ತಿದ್ದ ಮೀನಾಕ್ಷಿ ಬಳಿಗೆ ಬಟ್ಟೆ ಹೊಲಿಸುವ ನೆಪದಲ್ಲಿ ರಾಕೇಶ್ ಆಗಾಗ ಮೀನಾಕ್ಷಿ ಮನೆಗೆ ಎಂಟ್ರಿ ಕೊಡುತ್ತಿದ್ದ. ಈ ನಡುವೆ ಇವರಿಬ್ಬರ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಇದೇ ರೀತಿ ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಲವ್ವಿ ಡವ್ವಿ ಮುಂದುವರಿದಿತ್ತು ಎನ್ನಲಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ರಾಜು ವಾಪಸ್ ಊರಿಗೆ ಬಂದು ಸೇರಿಕೊಂಡಿದ್ದ.ರಾಜು ಊರಿಗೆ ಬಂದ ನಂತರ ಮೀನಾಕ್ಷಿ, ರಾಕೇಶ್ ಸಲ್ಲಾಪಕ್ಕೆ ತೊಂದರೆಯಾಗಿದ್ದು, ರಾಜು ಆಗಾಗ ಕುಡಿದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನಂತೆ. ಈ ಎಲ್ಲ ವಿಚಾರವನ್ನು ಮೀನಾಕ್ಷಿ, ತನ್ನ ಪ್ರೀಯಕರ ರಾಕೇಶ್ ಜತೆ ಹೇಳಿಕೊಂಡಿದ್ದಳು. ಏನಾದರೂ ಮಾಡಿ ನನ್ನ ಗಂಡನನ್ನ ಮುಗಿಸಿಬಿಡು ಅಂತಾ ಪ್ರಿಯಕರನಿಗೆ ಹೇಳಿದ್ದಾಳೆ.ಇಬ್ಬರು ಸೇರಿ ಗಂಡನ ಕೊಲೆಗೆ ಪ್ಲಾನ್ ಮಾಡಿ ರಾಜು ಅವರ ಮನೆ ಬಳಿಯ ತೋಟದಲ್ಲಿ ರಾಕೇಶ್ ಹಾಗೂ ರಾಜು ಇಬ್ಬರು ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ರಾಜುಗೆ ಮಧ್ಯರಾತ್ರಿಯವರೆಗೆ ಕಂಠಪೂರ್ತಿ ಬಿಯರ್ ಕುಡಿಸಿದ್ದಾನೆ. ಬಳಿಕ ರಾಜು ತಲೆ ಮೇಲೆ ಕಲ್ಲು ಎತ್ತಿಹಾಕಿ ರಾಕೇಶ್ ಕೊಲೆ ಮಾಡಿದ್ದಾನೆ.ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ರಾಜು ಬೈಕ್ನಲ್ಲಿದ್ದ ಪೆಟ್ರೋಲ್ ತೆಗೆದು, ರಾಜುಗೆ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ವೇಳೆ ಮನೆಯ ಹಿಂಭಾಗದ ತೋಟದಲ್ಲಿ ಬೆಂಕಿ ಉರಿಯುತ್ತಿರುವುದನ್ನು ನೋಡಿ ರಾಜು ತಂದೆ ಬಂದು ಬೆಂಕಿ ನಂದಿಸಿದ್ದಾರೆ. ಬಳಿಕ ಪೊಲೀಸ್ ಕಂಟ್ರೊಲ್ ರೂಂಗೆ ಕಾಲ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಕಳ್ಳಂಬೆಳ್ಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಇತ್ತ ಪತಿಯನ್ನ ಕೊಲೆ ಮಾಡಿಸಿ ಮೀನಾಕ್ಷಿ ತನಗೇನು ಗೊತ್ತಿಲ್ಲ ಎಂಬಂತೆ ನಾಟಕವಾಡುತ್ತ, ದೂರು ಕೊಟ್ರೆ ಸಿಕ್ಕಿಬಿಳ್ತಿನಿ ಅನ್ನೋ ಭಯದಲ್ಲಿ ಪೊಲೀಸರಿಗೆ ದೂರು ಕೊಡಲು ಹಿಂದೇಟು ಹಾಕಿದ್ದಾಳೆ. ಕುಡಿದು ಆತನೇ ಬೆಂಕಿ ಹಚ್ಚಿಕೊಂಡಿದ್ದಾನೆ ಕಣ್ಣೀರಿಡುತ್ತ ದೂರು ನೀಡಲು ಹಿಂದೇಟು ಹಾಕಿದ್ದಾಳೆ, ಕೊಲೆ ಮಾಡಿದ ರಾಕೇಶ್ ಸಹ ರಾಜು ಅಂತ್ಯಕ್ರಿಯೆ ಆಗೋವರೆಗೂ ರಾಕೇಶ್, ರಾಜು ಮನೆಯಲ್ಲೇ ಓಡಾಡಿಕೊಂಡಿದ್ದಾನೆ.ಪೊಲೀಸರಿಗೆ ದೂರು ಕೊಡುವುದು ಬೇಡ. ಸತ್ತ ನನ್ನ ಗಂಡ ವಾಪಸ್ ಬರಲ್ಲ ಅಂತೆಲ್ಲ ಗೋಳಾಡಿದ್ದು, ರಾಜು ತಂದೆ ನೀಡಿದ ದೂರಿನ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ರಾಕೇಶ್ ಹಾಗೂ ಮೀನಾಕ್ಷಿಯ ಕಳ್ಳಾಟ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಕಳ್ಳಂಬೆಳ್ಳ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಅಮ್ಮನ ಪ್ರೇಮ ಸಲ್ಲಾಪಕ್ಕೆ ತಂದೆಯನ್ನು ಕಳೆದುಕೊಂಡ ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ.
