Uncategorized
121 ಮಸೀದಿ ಮತ್ತು ಮಂದಿರಗಳಲ್ಲಿ ಲೌಡ್‍ಸ್ಪೀಕರ್ ಬಳಕೆಗೆ ಅನುಮತಿ

ಮಸೀದಿ ಮತ್ತು ಮಂದಿರಗಳಲ್ಲಿ ಲೌಡ್‍ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಪೈಕಿ 121 ಅರ್ಜಿಗಳಿಗೆ ಅನುಮತಿ ನೀಡಿರುವುದಾಗಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದುವರೆಗೂ ಲೌಡ್‍ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಸುಮಾರು 959 ಅರ್ಜಿಗಳು ಬಂದಿವೆ. ಅದರಲ್ಲಿ 121 ಅರ್ಜಿಗಳಿಗೆ ಅನುಮತಿ ನೀಡಿದ್ದು, ಉಳಿದಂತೆ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು.
ಎಸಿಪಿ, ಬಿಬಿಎಂಪಿ ಎಗ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳಿಂದ ಉಳಿದ ಅರ್ಜಿಗಳ ವಿಚಾರಣೆ ನಡೆಸಿ ವಿಲೇವಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈದ್ಗಾ ಮೈದಾನದಲ್ಲಿ ಸಭೆ ಸಮಾರಂಭ ನಡೆಸಲು ನೀಡುವ ಅನುಮತಿ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಇದುವರೆಗು ಯಾರೂ ಅನುಮತಿ ಕೋರಿ ಅರ್ಜಿ ಕೊಟ್ಟಿಲ್ಲ. ಅರ್ಜಿ ಕೊಟ್ಟರೆ ಕಾನೂನು ರೀತಿ ಏನೆಲ್ಲಾ ಕ್ರಮ ವಹಿಸಬೇಕೊ ಅದನ್ನು ಮಾಡಲಾಗುವುದು ಎಂದರು.