ಅಂತಾರಾಷ್ಟ್ರೀಯ

100 ಮಹಿಳಾ ಉಗ್ರರಿಗೆ ತರಬೇತಿ ನೀಡಿದ್ದ ಆಲಿಸನ್ ಫ್ಲೂಕ್-ಎಕ್ರೆನ್ ಬಗ್ಗೆ ನಿಮಗೆಷ್ಟು ಗೊತ್ತು? 

ನವದೆಹಲಿ: ಅಮೆರಿಕಾದ ಕಾನ್ಸಾಸ್ ರಾಜ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಮಹಿಳಾ ಭಯೋತ್ಪಾದಕರಿಗೆ ತರಬೇತಿ ನೀಡಲು ಸಹಾಯ ಮಾಡಿದ ಆಲಿಸನ್ ಫ್ಲೂಕ್-ಎಕ್ರೆನ್ ಗೆ ಶಿಕ್ಷೆ ವಿಧಿಸಲಾಗಿದೆ.ಈಗ ವಿಚಾರಣೆಯ ಸಮಯದಲ್ಲಿ ಸಿರಿಯಾದಲ್ಲಿ ಐಸಿಸ್ ನ ಮಹಿಳಾ ತಂಡದ 100 ಕ್ಕೂ ಹೆಚ್ಚು ಹೋರಾಟಗಾರರಿಗೆ ತರಬೇತಿ ನೀಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.42 ವರ್ಷದ ಆಲಿಸನ್ ಫ್ಲೂಕ್-ಎಕ್ರೆನ್ 100ಕ್ಕೂ ಹೆಚ್ಚು ಮಹಿಳಾ ಭಯೋತ್ಪಾದಕರಿಗೆ ತರಬೇತಿ ನೀಡಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ.ವೃತ್ತಿಯಲ್ಲಿ ತಾಯಿ ಮತ್ತು ಶಿಕ್ಷಕಿಯಾಗಿರುವ ಆಲಿಸನ್ ಫ್ಲೂಕ್-ಎಕ್ರೆನ್ ಐಸಿಸ್ ಬೆಟಾಲಿಯನ್‌ನ ನಾಯಕಿಯಾಗಿದ್ದರು.ದಾಖಲೆಗಳ ಪ್ರಕಾರ ಅವರು ಜನವರಿ 8, 2011 ರಂದು ಯುಎಸ್ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.ಇದಕ್ಕೂ ಮೊದಲು ಅವರು ಈಜಿಪ್ಟ್ ಮತ್ತು ಲಿಬಿಯಾಗೆ ಪ್ರಯಾಣಿಸಿದ್ದರು.ತದನಂತರ 2014 ರಲ್ಲಿ ಅವರು ಸಿರಿಯಾಕ್ಕೆ ವಾಪಸ್ಸಾಗಿದ್ದರು ಎನ್ನಲಾಗಿದೆ.ಸಿರಿಯಾದಲ್ಲಿ ಸೆರೆಹಿಡಿಯಲ್ಪಟ್ಟ ಆಲಿಸನ್ ಅವರನ್ನು ಜನವರಿಯಲ್ಲಿ ಅಮೇರಿಕಾಕ್ಕೆ ಕರೆತರಲಾಗಿದ್ದು, ಈ ವರ್ಷದ ಅಕ್ಟೋಬರ್ 25 ರಂದು ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ. 2019 ರಲ್ಲಿ ಆಲಿಸನ್ ಫ್ಲೂಕ್-ಎಕ್ರೆನ್ ಅವರ ವಿರುದ್ಧದ ಕ್ರಿಮಿನಲ್ ದೂರಿನಲ್ಲಿ ಅವರು ಯುಎಸ್ನಲ್ಲಿ ದಾಳಿ ನಡೆಸುವ ಬಗ್ಗೆ ಚರ್ಚಿಸಿದ್ದಾರೆ, ಅಷ್ಟೇ ಅಲ್ಲದೆ ಐಎಸ್ಐಎಲ್ ವಿಷಯಗಳನ್ನು ಇಂಗ್ಲಿಷ್ ಗೆ ಅನುವಾದಿಸಿರುವುದಕ್ಕೆ ಹಲವಾರು ಸಾಕ್ಷಿಗಳು ಲಭ್ಯ ಇವೆ ಎನ್ನಲಾಗಿದೆ.ಐಸಿಸ್ ಜೊತೆಗಿನ ಒಡನಾಟದ ಮೊದಲು, ಆಲಿಸನ್ ಫ್ಲೂಕ್-ಎಕ್ರೆನ್ ಕಾನ್ಸಾಸ್‌ನಲ್ಲಿ  ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು, ಅವರು ಸಿರಿಯಾದಲ್ಲಿ ಐಸಿಸ್ ಪರವಾಗಿ ನಂಬಿಕೆಯಿಲ್ಲದವರನ್ನು ಸಾಯುವುದು ಮುಖ್ಯ ಎಂದು ಬಲವಾಗಿ ನಂಬಿದ್ದರು.ಪ್ರಾಸಿಕ್ಯೂಟರ್‌ಗಳ ಪ್ರಕಾರ, 2014 ರ ಮಧ್ಯದಲ್ಲಿ, ಫ್ಲೂಕ್-ಎಕ್ರೆನ್ ಯುಎಸ್ ಶಾಪಿಂಗ್ ಮಾಲ್ ಅಥವಾ ಕಾಲೇಜನ್ನು ಬಾಂಬ್ ಮಾಡುವ ಗುರಿಯನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button