
ಇಂದಿನಿಂದ ಹತ್ತು ದಿನಗಳಲ್ಲಿ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಸಂಪೂರ್ಣ ಮುಚ್ಚಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಡೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಮಳೆಯಿಂದಾಗಿ ಮಧ್ಯೆ ತೊಡಕಾಗಿತ್ತು. ಆದರೂ ೫೫೦೦ ರಸ್ತೆಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇನ್ನು ಹತ್ತು ದಿನಗಳಲ್ಲಿ ಸಂಪೂರ್ಣ ಗುಂಡಿ ಮುಚ್ಚಲಾಗುವುದು.
ಪೈಥಾನ್ ಯಂತ್ರದ ಮೂಲಕ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ ಎಂದ ಅವರು, ಶಾಲಾ ಕಾಲೇಜುಗಳಲ್ಲಿ ಲಸಿಕೆ ನೀಡುವ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ಹೂಳು ತೆಗೆಯುವ ವಿಚಾರದಲ್ಲಿ ಅಲ್ಪಾವಧಿ ಟೆಂಡರ್ ನೀಡಲಾಗಿದೆ.
ಇನ್ನೊಂದು ತಿಂಗಳಲ್ಲಿ ಪ್ರಮುಖ ಪ್ರದೇಶಗಳಲ್ಲಿ ಹೂಳು ತೆಗೆಯಲಾಗುವುದು.
ಲೈನಡ್ ಏರಿಯಾದಲ್ಲಿ ಅಭಿವೃದ್ದಿ ಕಾರ್ಯ ನಡೆಯುತ್ತಿದ್ದು ಗುತ್ತಿಗೆದಾರರಿಂದಲೇ ಹೂಳು ತೆಗೆಸಲಾಗುವುದು ಎಂದು ಹೇಳಿದರು.
ಕಾಳಿದಾಸ ಲೇಔಟ್‌ನಲ್ಲಿ ರಾಜಕಾಲುವೆ ಅನಾಹುತ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ಕೊಟ್ಟಿದ್ದು ಇಂದು ಸಂಜೆಯೊಳಗೆ ವರದಿ ನೀಡುವ ಸಾಧ್ಯತೆಯಿದೆ.
ಓರ್ವರನ್ನು ಹೊರತುಪಡಿಸಿ ಉಳಿದವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದರು.
ಗಾಯಾಳುಗಳ ಅಕೌಂಟ್ ಗುತ್ತಿಗೆದಾರರಿಂದ ಹಣ ನೀಡುವ ಕೆಲಸ ಆಗಲಿದೆ.
ಗುತ್ತಿಗೆದಾರರಿಗೆ ಒಂದು ಲಕ್ಷ ದಂಡ ವಿಧಿಸಲು ಸೂಚನೆ ನೀಡಲಾಗಿದೆ.
ವಾರ್ಡ್ ಇಂಜಿನಿಯರ್‌ಗೆ ನೋಟೀಸ್ ನೀಡುವ ಕೆಲಸವೂ ಆಗಲಿದೆ ಎಂದು ಆಯುಕ್ತರು ನುಡಿದರು.
ವರದಿ ಬಂದನಂತರ ಅಗತ್ಯಬಿದ್ದರೆ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದ ಅವರು, ಬಿಬಿಎಂಪಿಯಲ್ಲಿ ವಿಜಿಲೆನ್ಸ್ ಸೆಲ್ ಇದೆ, ಇದು ೨೦೦೬ ರಲ್ಲಿ ಸೆಲ್ ಆರಂಭ ಮಾಡಲಾಗಿದೆ ಎಂದರು.ಒಟ್ಟಾರೆ ಕಾಮಗಾರಿಯ ಶೇ.
೧೦ ರಷ್ಟು ಕಾಮಗಾರಿ ಪರಿಶೀಲನೆ ಮಾಡಬೇಕಿದೆ.
ಆದರೆ ವಿಜಿಲೆನ್ಸ್ ಸೆಲ್ ಆ ಕೆಲಸ ಮಾಡುತ್ತಿರಲಿಲ್ಲ ಎಂದರು.