ರಾಷ್ಟ್ರಿಯ

10 ದಿನಗಳಲ್ಲಿ 1 ಕೋಟಿಗೂ ಅಧಿಕ ರಾಷ್ಟ್ರಧ್ವಜ ಮಾರಾಟ ಮಾಡಿದ ಅಂಚೆ ಇಲಾಖೆ

ಕಳೆದ ಹತ್ತು ದಿನಗಳ ಅವಧಿಯಲ್ಲಿ ಭಾರತೀಯ ಅಂಚೆ ಇಲಾಖೆಯು ಒಂದು ಕೋಟಿಗೂ ಅಧಿಕ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಿದೆ. ತನ್ನ 1.5 ಲಕ್ಷ ಅಂಚೆ ಕಚೇರಿಗಳು ಮತ್ತು ಆನ್‌ಲೈನ್‌ ಮೂಲಕ ತ್ರಿವರ್ಣ ಧ್ವಜಗಳನ್ನು ಮಾರಲಾಗಿದೆ ಎಂದು ಸಂವಹನ ಸಚಿವಾಲಯ ಗುರುವಾರ ಹೇಳಿದೆ.

“ಅಂಚೆ ಇಲಾಖೆಯು (ಡಿಒಪಿ) ದೇಶಾದ್ಯಂತ 1.5 ಲಕ್ಷ ಅಂಚೆ ಕಚೇರಿಗಳ ಜಾಲ ಹೊಂದಿದ್ದು, ದೇಶದ ಪ್ರತಿ ಪ್ರಜೆಗೂ ‘ಮನೆ ಮನೆಗೂ ತ್ರಿವರ್ಣ ಧ್ವಜ’ ಕಾರ್ಯಕ್ರಮವನ್ನು ತಲುಪಿಸುತ್ತಿದೆ.

10 ದಿನಗಳ ಅಲ್ಪ ಅವಧಿಯಲ್ಲಿಯೇ ಇಂಡಿಯಾ ಪೋಸ್ಟ್ 1 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ತನ್ನ ಅಂಚೆ ಕಚೇರಿಗಳು ಮತ್ತು ಆನ್‌ಲೈನ್ ಮೂಲಕ ತನ್ನ ನಾಗರಿಕರಿಗೆ ಮಾರಾಟ ಮಾಡಿದೆ” ಎಂದು ಹೇಳಿಕೆ ತಿಳಿಸಿದೆ.

ಈ ರಾಷ್ಟ್ರಧ್ವಜಗಳನ್ನು ಇಲಾಖೆಯು ತಲಾ 25 ರೂಪಾಯಿಯಂತೆ ಮಾರಾಟ ಮಾಡುತ್ತಿದೆ. “ಆನ್‌ಲೈನ್ ಮಾರಾಟದಲ್ಲಿ, ದೇಶದ ಯಾವುದೇ ವಿಳಾಸಕ್ಕೆ ಮನೆಬಾಗಿಲಿಗೆ ಉಚಿತ ಡೆಲಿವರಿ ಸವಲತ್ತನ್ನು ಇಲಾಖೆ ಒದಗಿಸಿದೆ.

ಇ- ಪೋಸ್ಟ್ ಸೌಲಭ್ಯದ ಮೂಲಕ ಆನ್‌ಲೈನ್‌ನಲ್ಲಿ ನಾಗರಿಕರು 1.75 ಲಕ್ಷಕ್ಕೂ ಅಧಿಕ ಧ್ವಜಗಳನ್ನು ಖರೀದಿ ಮಾಡಿದ್ದಾರೆ. ಅಂಚೆ ಇಲಾಖೆಯು ತ್ರಿವರ್ಣ ಧ್ವಜವನ್ನು ಒಂದಕ್ಕೆ 25 ರೂ.ದಂತೆ ಮಾರಾಟ ಮಾಡುತ್ತಿದೆ” ಎಂದು ಸಚಿವಾಲಯ ಹೇಳಿದೆ.

ದೇಶಾದ್ಯಂತ 4.2 ಲಕ್ಷ ಅಂಚೆ ನೌಕರರು ಅತ್ಯುತ್ಸಾಹದಿಂದ ‘ಮನೆ ಮನೆಯಲ್ಲೂ ತ್ರಿವರ್ಣಧ್ವಜ’ ಸಂದೇಶವನ್ನು ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳು, ಗಡಿ ಪ್ರದೇಶಗಳು, ಎಲ್‌ಡಬ್ಲ್ಯೂಇ ಜಿಲ್ಲೆಗಳು ಮತ್ತು ಪರ್ವತಶ್ರೇಣಿ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಪ್ರಚುರಪಡಿಸಿದ್ದಾರೆ ಎಂದು ತಿಳಿಸಿದೆ.

ಪ್ರಭಾತ್ ಫೇರಿಗಳು, ಬೈಕ್ ಜಾಥಾಗಳು ಮತ್ತು ಗ್ರಾಮ ಸಭೆಗಳ ಮೂಲಕ ಸಮಾಜದ ಪ್ರತಿ ವರ್ಗಕ್ಕೂ ‘ಮನೆ ಮನೆಗೂ ತ್ರಿವರ್ಣ’ ಸಂದೇಶವನ್ನು ಇಂಡಿಯಾ ಪೋಸ್ಟ್ ಮುಟ್ಟಿಸಿದೆ. ಡಿಜಿಟಲ್ ಸ್ವರೂಪದಲ್ಲಿ ಸಂಪರ್ಕಿತರಾಗಿರುವ ನಾಗರಿಕರ ನಡುವೆ ಯೋಜನೆಯ ಸಂದೇಶವನ್ನು ಹರಡಲು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಂತ ಸಾಮಾಜಿಕ ಮಾಧ್ಯಮ ಸಾಧನಗಳನ್ನು ಕೂಡ ವ್ಯಾಪಕವಾಗಿ ಬಳಸಿಕೊಳ್ಳಲಾಗಿದೆ” ಎಂದು ಹೇಳಿದೆ.

2022ರ ಆಗಸ್ಟ್ 15ರವರೆಗೂ ಅಂಚೆ ಕಚೇರಿಗಳಲ್ಲಿ ರಾಷ್ಟ್ರ ಧ್ವಜ ಮಾರಾಟ ನಡೆಯುತ್ತದೆ. ನಾಗರಿಕರು ತಮ್ಮ ಸಮೀಪದ ಅಂಚೆ ಕಚೇರಿಗೆ ತೆರಳಿ ಅಥವಾ ಇ-ಪೋಸ್ಟ್ ಕಚೇರಿಗೆ (epostoffice.gov.in) ಭೇಟಿ ನೀಡುವ ಮೂಲಕ ರಾಷ್ಟ್ರ ಧ್ವಜ ಖರೀದಿಸಿ, ‘ಮನೆ ಮನೆಗೂ ತ್ರಿವರ್ಣ’ ಆಂದೋಲನದ ಭಾಗವಾಗಬಹುದಾಗಿದೆ.

ಪ್ರಜೆಗಳು ಧ್ವಜದ ಜತೆ ಸೆಲ್ಫಿ ತೆಗೆದುಕೊಂಡು ಅದನ್ನು www.harghartiranga.com ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬಹುದು. ಈ ಮೂಲಕ ನವ ಭಾರತದ ಅತ್ಯಂತ ದೊಡ್ಡ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button