Educationರಾಷ್ಟ್ರಿಯ

10ನೇ ತರಗತಿ ಪರೀಕ್ಷೆಯಲ್ಲಿ ಅಪ್ಪ ಪಾಸ್, ಮಗ ಫೇಲ್..!

Maharashtra Board SSC 10th Results 2022: 43-yr-old man clears exam

ಇದು ಕಧೆಯಲ್ಲಿ ವಾಸ್ತವಾಂಶ, ಕಲಿಕೆಗೆ ವಯಸ್ಸಿಲ್ಲ ಶ್ರದ್ದೆ ಮುಖ್ಯ ಎಂಬುದಕ್ಕೆ ಪುಣೆಯಲ್ಲಿ ಸ್ವಾರಸ್ಯರ ಸಂಗತಿ ನಡೆದಿದೆಪುಣೆಯ ವಾಸವಾಗಿರು 43 ವರ್ಷದ ಭಾಸ್ಕರ್ ಮತ್ತು ಅವರ ಮಗ ಇಬ್ಬರೂ ಈ ವರ್ಷದ 10 ನೇ ತರಗತಿ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದರು, ಆದರೆ ತಂದೆ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮಗ ಫೇಲ್.

ಮಹಾರಾಷ್ಟ್ರ ರಾಜ್ಯ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ನಡೆಸಿದ ವಾರ್ಷಿಕ 10 ನೇ ತರಗತಿಯ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗಿದೆ. ಭಾಸ್ಕರ್ ವಾಘಮಾರೆ ಅವರು 7 ನೇ ತರಗತಿಯ ನಂತರ ಶಿಕ್ಷಣವನ್ನು ತ್ಯಜಿಸಿ ತಮ್ಮ ಮದುವೆ ನಂತರ ಕುಟುಂಬವನ್ನು ಸಾಕಲು ಉದ್ಯೋಗ ಅರಸಿ ಇಲ್ಲಿ ನೆಲೆಸಿದ್ದರು.

ಮಕ್ಕಳಾದ ನಂತರ ಅವರು ಮತ್ತೆ ಅಧ್ಯಯನವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದರು. ತಮ್ಮ ಮಗ ತನ್ನೆತ್ತರಕ್ಕೆ ಬೆಳೆದು 10 ನೇ ತರಗತಿ ಬಂದಾದ ಅವರು ತಮ್ಮ ಆಸೆ ಕುಟುಂಬದವರ ಮಧ್ಯಹೇಳಿಕೊಂಡರು ಮುದಲಿಗೆ ಎಲ್ಲರು ಆಶ್ಚರ್ಯ ಪಟ್ಟರು ಕೊನೆಗೆ ತಮ್ಮ ಮಗನೊಂದಿಗೆ ಈ ವರ್ಷ ಪರೀಕ್ಷೆಗೆ ಬೆರಯಲು ನಿರ್ಧರಿಸಿ ಕಲಿಕೆ ಆರಂಭಿಸಿದರು.

ಸಂಜೆ ವೇಳೆ ಮಗ ಸಾಹಿಲ್‍ನೊಂದಿಗೆ ಕೂತು ಅಧ್ಯಯನ ಮಾಡುವಾಗ ಕೆಲವರು ಪ್ರಶಂಸಿಸಿದರೆ ಹಲವರು ಹಾಸ್ಯ ಮಾಡಿದರು ಕೊನೆಗೆ ಪರೀಕ್ಷೆ ಬರೆದು ಪಾಸ್ ಮಾಡಿ ಎಲ್ಲರನ್ನು ಚಕಿತಗೊಳಿಸಿದ್ದಾರೆ.

ನಾನು ಯಾವಾಗಲೂ ಹೆಚ್ಚು ಅಧ್ಯಯನ ಮಾಡಲು ಬಯಸಿದ್ದಾ, ಆದರೆ ಕುಟುಂಬದ ಜವಾಬ್ದಾರಿಗಳಿಂದ ಮತ್ತು ನಮ್ಮ ಜೀವನೋಪಾಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ನನ್ನ ಮಗನೂ ಈ ವರ್ಷ ಪರೀಕ್ಷೆಗೆ ಹಾಜರಾಗುತ್ತಿದ್ದನು ಮತ್ತು ಇದು ನನಗೆ ಸಹಾಯ ಮಾಡಿದೆ, ಎಂದು ಅವರು ಹೇಳಿದರು.

ಪ್ರತಿದಿನ ಓದುತ್ತಿದ್ದೆ ಮತ್ತು ಕೆಲಸದ ನಂತರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ .ಈಗ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯಲ್ಲಿದ್ದರೂ ಮಗ ಎರಡು ವಿಷಯದಲ್ಲಿ ಫೇಲ್ ಆಗಿದ್ದಕ್ಕೆ ಬೇಸರವಾಗಿದೆ. ನನ್ನ ಮಗನಿಗೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳುಲು ನಾನು ಬೆಂಬಲಿಸುತ್ತೇನೆ ಮತ್ತು ಅವನು ಪಾಸ್ ಆಗುತ್ತಾನೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

ನನಗೆ ಸಂತೋಷವಾಗಿದೆ ತಂದೆ ಬಯಕೆ ಈಡೇರಿದೆ ಆದರೆ, ನಾನು ಪೂರಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತೇನೆ ಖಂಡಿತ ಪಾಸ್ ಮಡುತ್ತೇನೆ ಎಂದು ಸಾಹಿಲ್ ಹೇಳಿದ್ದಾನೆ ಒಟ್ಟರೆ ಫಲಿತಾಂಶವು ಕುಟುಂಬಕ್ಕೆ ಮಿಶ್ರಖುಷಿ ತಂದಿತು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button