ರಾಜ್ಯ

₹42,500 ಕೋಟಿ ಮೌಲ್ಯದ ಐಡಿಬಿಐ ಬ್ಯಾಂಕ್‌ ಮಾರಾಟಕ್ಕೆ ಕೇಂದ್ರ ಸರಕಾರ ಸಿದ್ಧತೆ

ಸರಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್‌ನ ಶೇ. 51ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಸಜ್ಜಾಗಿದೆ. ಇದರೊಂದಿಗೆ ನರೇಂದ್ರ ಮೋದಿ ಸರಕಾರ ಬ್ಯಾಂಕ್‌ಗಳ ಖಾಸಗೀಕರಣ ಪ್ರಕ್ರಿಯೆ ಚುರುಕು ಪಡೆದಿದೆ.ಐಡಿಬಿಐ ಬ್ಯಾಂಕ್‌ನಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಾಗೂ ಕೇಂದ್ರ ಸರಕಾರ ಒಟ್ಟಾಗಿ ಶೇ. 94ರಷ್ಟು ಷೇರುಗಳನ್ನು ಹೊಂದಿವೆ.

ಈಗ ಕೇಂದ್ರ ಸರಕಾರ ಮತ್ತು ಎಲ್‌ಐಸಿಯು ತಮ್ಮ ತಮ್ಮ ಪಾಲಿನ ಹೆಚ್ಚಿನ ಷೇರುಗಳನ್ನು ವಿಕ್ರಯ ಮಾಡಲು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ. ಈ ಷೇರು ಮಾರಾಟದ ನಂತರವೂ ಐಡಿಬಿಐ ಬ್ಯಾಂಕ್‌ನಲ್ಲಿ ಎಲ್‌ಐಸಿ ಹಾಗೂ ಕೇಂದ್ರ ಸರಕಾರ ಒಂದಿಷ್ಟು ಷೇರುಗಳನ್ನು ಉಳಿಸಿಕೊಳ್ಳಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಮೂಲಗಳು ಹೇಳಿವೆ.

ಐಡಿಬಿಐ ಬ್ಯಾಂಕ್‌ನ ಷೇರು ಮಾರಾಟಕ್ಕೆ ಸಂಬಂಧಿಸಿದ ಅಂತಿಮ ತೀರ್ಮಾನವನ್ನು ಕೇಂದ್ರ ಸಚಿವರ ಸಮಿತಿಯು ಕೈಗೊಳ್ಳಲಿದೆ. ಸರ್ಕಾರ ಮತ್ತು ಎಲ್‌ಐಸಿಯು ಔಪಚಾರಿಕವಾಗಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ಖರೀದಿದಾರರ ಆಸಕ್ತಿಯನ್ನು ಅಳೆಯಲು ಪ್ರಯತ್ನಿಸುತ್ತದೆ ಎಂದು ಓರ್ವ ವ್ಯಕ್ತಿ ತಿಳಿಸಿದ್ದಾರೆ.ಕಳೆದ ಒಂದು ವರ್ಷದಲ್ಲಿ ಐಡಿಬಿಐ ಬ್ಯಾಂಕ್‌ನ ಷೇರುಗಳ ಬೆಲೆಯು ಶೇ. 6.3ರಷ್ಟು ಏರಿಕೆಯಾಗಿದೆ.

ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ 42,470 ಕೋಟಿ ರೂ.ಗೆ ಹೆಚ್ಚಳವಾಗಿದೆ.ಕೇಂದ್ರ ಸರಕಾರದಿಂದ ಯಾವ ಬ್ಯಾಂಕ್‌ಗಳ ಮಾರಾಟ?ಈಗಾಗಲೇ ಐಡಿಬಿಐ ಬ್ಯಾಂಕ್‌ನ ಖಾಸಗೀಕರಣಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಮುಂದಿನ ದಿನಗಳಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗಳನ್ನೂ ಖಾಸಗೀರಣಗೊಳಿಸುವ ನಿರೀಕ್ಷೆ ಇದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಕೇಂದ್ರ ಸರಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ಹೊಸ ವಿಧೇಯಕವನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡನೆ ಮಾಡಲಿದೆ ಎಂಬ ಚರ್ಚೆಗಳು ಚಾಲ್ತಿಯಲ್ಲಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹಣಕಾಸು ಸಚಿವಾಲಯ ಮತ್ತು ಐಡಿಬಿಐ ಬ್ಯಾಂಕ್‌ನ ಪ್ರತಿನಿಧಿಗಳು ಮಾಡಲು ನಿರಾಕರಿಸಿದ್ದರೆ, ಎಲ್‌ಐಸಿಯ ಪ್ರತಿನಿಧಿಯು ಮನವಿಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿಲ್ಲ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button