ರಾಜ್ಯ

೯೦ ಮೀಟರ್ ತಲುಪಿ ಬೆಂಕಿ ನಂದಿಸುವ ಲ್ಯಾಡರ್ ಸೇರ್ಪಡೆ

ಇಡೀ ದಕ್ಷಿಣ ಭಾರತ ದಲ್ಲಿಯೇ ಪ್ರಥಮ ಎನ್ನಲಾದ, ತುರ್ತು ಅಗ್ನಿ ಅವಘಡ ಸಂಧಂರ್ಭದಲ್ಲಿ ಸುಮಾರು ೯೦ ಮೀಟರ್ ಎತ್ತರದವರೆಗೂ, ತಲುಪಿ, ಬೆಂಕಿಯನ್ನು ನಂದಿಸುವ ಹಾಗೂ ಅಪಾಯದಲ್ಲಿ ಸಿಲುಕಿದ ನಾಗರಿಕರನ್ನು ರಕ್ಷಿಸಲು ಅನುವಾಗುವ, ಏರಿಯಲ್ ಲ್ಯಾಡರ್ ಪ್ಲಾಟ್ ಫಾರ್ಮ್ ಅನ್ನು ರಾಜ್ಯ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಯಾಗಲಿದೆ.

ಏರಿಯಲ್ ಲ್ಯಾಡರ್ ಪ್ಲಾಟ್ ಫಾರ್ಮ್ ನ್ನು ರಾಜ್ಯ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮವನ್ನು ನಾಳೆ ಬೆಳಿಗ್ಗೆ ೧೦ಕ್ಕೆ ವಿಧಾನ ಸೌಧದ ಮುಂಭಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ನಾಳೆ ಉದ್ಘಾಟಿಸಲಿದ್ದಾರೆ.

ಅಗ್ನಿ ಶಾಮಕ ಪಡೆಗೆ, ಅತ್ಯಂತ ಅಗತ್ಯವಾದ, ೯೦ ಮೀಟರ್ ಎತ್ತರಕ್ಕೆ ನಿಲುಕಲು ಸಾಧ್ಯವಾಗುವ, ಏಣಿಯನ್ನು, ರಾಜ್ಯ ಸರಕಾರ ಫಿನ್ಲ್ಯಾಂಡ್ ದೇಶದಿಂದ ಸುಮಾರು ೩೦ ಕೋಟಿ ರೂಪಾಯಿ ವೆಚ್ಚದಲ್ಲಿ ಆಮದು ಮಾಡಿಕೊಂಡು, ಸಾರ್ವಜನಿಕರ ಸೇವೆಗೆ, ಸಮರ್ಪಿಸುತ್ತಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ರವರು, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯನ್ನು, ಬಲಪಡಿಸಲು ಹತ್ತು ಹಲವು ಕ್ರಮಗಳನ್ನು, ತೆಗೆದುಕೊಂಡ ಹಿನ್ನೆಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಸುಮಾರು ಎರಡು ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ, ಅಗ್ನಶಾಮಕದಳದ ಸೇವಾ ಘಟಕಗಳನ್ನು ಹೊಂದಿದ್ದು, ಇಲಾಖೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button