೨ ತಿಂಗಳಲ್ಲಿ ಪೌರಕಾರ್ಮಿಕರು ಕಾಯಂ : ಕಾರಜೋಳ

ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಪೌರಕಾರ್ಮಿರನ್ನು ಎರಡು ತಿಂಗಳಲ್ಲಿ ಸರ್ಕಾರಿ ನೌಕರರನ್ನಾಗಿ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆಶ್ವಾನೆ ನೀಡಿದ್ದಾರೆ.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಮತ್ತು ಜಿಲ್ಲಾಡಳಿತ ಸಹಯೋಗದಲ್ಲಿ ಕೆಎಸ್‌ಓಯು ಘಟಿಕೋತ್ಸವ ಭವನದಲ್ಲಿ ಏರ್ಪಡಿಸಿದ್ದ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಜಾಗೃತಿ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು ೭೫ ವರ್ಷ ತುಂಬಿದ್ದರೂ ದೀನದಲಿತರ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮಲ ಹೊರುವ ಪದ್ಧತಿ ನಿಷೇಧಿಸಿದ ನಂತರ ಪೌರಕಾರ್ಮಿಕರ ಸಮಸ್ಯೆಗೆ ಬಗೆಹರಿದಿಲ್ಲ.
ನಮ್ಮ ಮಕ್ಕಳಿಗೂ ಶಿಕ್ಷಣ ಸಿಗಬೇಕು. ಮಲ ಹೊರುವ ಪದ್ಧತಿಯನ್ನು ಸಂಪೂuವಾಗಿ ನಿಷೇಧಿಸಬೇಕು. ಸರ್ಕಾರಿ ನೌಕರರಿಂದ ಪರಿಗಣಿಸುವಂತೆ ಕರ್ಮಚಾರಿಗಳು ಬೇಡಿಕೆಯಿಟ್ಟಿರೂ ಪ್ರಯೋಜನವಾಗಿಲ್ಲ ಎಂದರು.
ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಮನವಿ ಮೇರೆಗೆ ಸಫಾಯಿ ಕರ್ಮಚಾರಿ ಆಯೋಗ ಸ್ಥಾಪಿಸಿದರು. ಆದರೂ ಅವರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅನೇಕ ಸರ್ಕಾರಗಳು ಬಂದು ಹೋಗಿವೆ.
ಬಿಜೆಪಿ ಸರ್ಕಾರ ಪೌರಕಾರ್ಮಿಕರ ಸಮಸ್ಯೆಗೆ ಕ್ರಮ ಕೈಗೊಂಡಿದೆ. ಅಲ್ಲಿಯವರೆಗೆ ಸಂಕಷ್ಟದ ಪರಿಹಾರದ ರೂಪದಲ್ಲಿ ತಲಾ ೨ ಸಾವಿರ ನೀಡುತ್ತಿದೆ. ಆದರೆ ಅವರ ಕೆಲಸವನ್ನು ಕಾಯಂಗೊಳಿಸುವರೆಗೆ ತಮಗೆ ಸಮಾಧಾನವಿಲ್ಲ ಎಂದು ಹೇಳಿದರು.
ಕಾಯಂಗೊಳಿಸಲು ಎದುರಾಗಿರುವ ಕಾನೂನು ತೊಡಕು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಿರುವ ನೇಮಕಾತಿ ಪ್ರಕಾರ ಶೇ. ೮೨ ರಷ್ಟು ಹುದ್ದೆಗಳನ್ನು ಭೇರೆ ಸಮಾಜದವರಿಗೆ ಕೊಡಬೇಕು.
ಆದರೆ ಶೇ. ೧೦೦ ರಷ್ಟು ನಮ್ಮ ಸಮಾಜದವರೆ ಬರಬೇಕು ಎಂಬ ಆಶಯವಾಗಿದೆ. ಈ ಕುರಿತು ವಿಶೇಷ ನೇಮಕಾತಿ ನಿಯಮ ರೂಪಿಸಲು ಸಮಿತಿ ರಚಿಸಲಾಗಿದೆ.
ತಕ್ಷಣ ವರದಿ ಪಡೆದು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.