೨೬/೧೧ ಮಾದರಿ ದಾಳಿಗೆ ಉಗ್ರರ ಸಂಚು

ಮುಂಬಯಿನ ತಾಜ್ ಹೋಟೆಲ್ ಮೇಲೆ ೨೦೦೮ ರಲ್ಲಿ ನಡೆದ ೨೬/೧೧ ದಾಳಿ ಮಾದರಿಯಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ನಡೆಸುವ ಬಗ್ಗೆ ಪಾಕಿಸ್ತಾನದಿಂದ ಬೆದರಿಕೆ ಸಂದೇಶ ರವಾನೆಯಾಗಿರುವ ಹಿನ್ನೆಲೆಯಲ್ಲಿ ಹೈ ಆಲರ್ಟ್ ಘೋಷಿಸಲಾಗಿದೆ.ದೇಶದಲ್ಲಿ ೬ ಉಗ್ರರು ಬೀಡು ಬಿಟ್ಟು ೨೬/೧೧ ದಾಳಿ ಮಾದರಿಯಲ್ಲಿ ಮತ್ತೊಂದು ಉಗ್ರ ಭೀಕರ ದಾಳಿ ನಡೆಸಲು ಭಯೋತ್ಪಾದಕರು ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದ್ದು ಎಲ್ಲೆಡೆ ಹೈ ಅಲರ್ಟ್ ಘೋಷಿಸಿ ಕಟ್ಟೆಚ್ಚರ ವಹಿಸಲಾಗಿದೆ.
ನಗರ ಸಂಚಾರ ನಿಯಂತ್ರಣ ಕೊಠಡಿಗೆ ಇಂತಹ ಆತಂಕಕಾರಿ ಸಂದೇಶ ಬಂದಿದೆ.ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಎರಡು ದಿನಗಳ ಹಿಂದೆಯಷ್ಟೇ ರಾಯಗಢದಿಂದ ನಿಗೂಢ ಶಸ್ತ್ರಾಸ್ತ್ರ ತುಂಬಿದ್ದ ದೋಣಿಯನ್ನು ವಶಪಡಿಸಿಕೊಂಡ ಬೆನ್ನಲ್ಲೇ ಆತಂಕಕಾರಿ ಸಂದೇಶ ಬಂದಿರುವುದು ಆತಂಕಕ್ಕೆ ಎಡೆಯಾಗಿದೆ.
ಶಸ್ತ್ರಾಸ್ತ್ರ ತುಂಬಿದ ದೋಣಿ ಜಪ್ತಿಮಾಡಿದ ಎರಡು ದಿನಗಳ ನಂತರ, ಮುಂಬೈ ಪೊಲೀಸರಿಗೆ ಇಂದು ಬೆದರಿಕೆ ಸಂದೇಶ ಬಂದಿದ್ದು, ೨೬/೧೧ ರೀತಿಯ ಭಯೋತ್ಪಾದಕ ದಾಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಪಾಕಿಸ್ತಾನ ಮೂಲದ ಫೋನ್ ಸಂಖ್ಯೆಯಿಂದ ಟ್ರಾಫಿಕ್ ಕಂಟ್ರೋಲ್ ಲೈನ್‌ನಲ್ಲಿ ವಾಟ್ಸಾಪ್ ಮೂಲಕ ಸಂದೇಶವನ್ನು ಕಳುಹಿಸಲಾಗಿದೆ.
ಆರು ಜನರಿಂದ ಭಯೋತ್ಪಾದನಾ ಕಾರ್ಯಾಚರಣೆ ನಡೆಸಲಾಗುವುದು ಎಂದು ಸಂದೇಶದಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಮುಂಬೈ ಪೊಲೀಸರು ಬೆದರಿಕೆ ಸಂದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಇತರ ಗುಪ್ತಚರ ಮತ್ತು ಕೇಂದ್ರೀಯ ಏಜೆನ್ಸಿಗಳನ್ನು ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆಮುಂಬಯಿಯ ಮೇಲೆ ಮತ್ತೆ ೨೬/೧೧ ರಂತಹ ಭಯೋತ್ಪಾದಕ ದಾಳಿ ನಡೆಸಲು ೬ ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂದು ಸಂದೇಶದಲ್ಲಿ ಬರೆಯಲಾಗಿದೆ.
ತಕ್ಷಣವೇ ಎಚ್ಚೆತ್ತಿರುವ ಪೊಲೀಸರು ಎಲ್ಲೆಡೆ ಬಿಗಿ ಭದ್ರತೆ ಹೆಚ್ಚಿಸಿದ್ದಾರೆ.ಅನುಮಾನಾಸ್ಪದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು ನಗರಕ್ಕೆ ಬಂದು ಹೋಗುವ ವಾಹನಗಳು ಅನುಮಾನಾಸ್ಪದ ವಸ್ತುಗಳ ತಪಾಸಣೆ ನಡೆಸಲಾಗುತ್ತಿದೆ.
ಮುಂಬಯಿಯಲ್ಲಿ ‘೨೬/೧೧’ ರೀತಿಯ ದಾಳಿ ನಡೆಸುವುದಾಗಿ ಮುಂಬೈನ ಟ್ರಾಫಿಕ್ ಪೊಲೀಸ್ ಸಹಾಯವಾಣಿಯ ವಾಟ್ಸ್‌ಆಪ್ ಸಂಖ್ಯೆಗೆ ಹಲವು ಸಂದೇಶಗಳು ಬಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶದ ಹೊರಗಿನಿಂದ ಈ ಸಂದೇಶಗಳು ಬಂದಿವೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದ್ದು ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಅವರು ಹೇಳಿದರು.ಸೆಂಟ್ರಲ್ ಮುಂಬೈನ ವರ್ಲಿಯಲ್ಲಿರುವ ಕಂಟ್ರೋಲ್ ರೂಮ್‌ನಿಂದ ನಿರ್ವಹಿಸಲಾಗುವ ಮುಂಬೈ ಪೊಲೀಸರ ಟ್ರಾಫಿಕ್ ಸಹಾಯವಾಣಿಯ ವಾಟ್ಸ್‌ಆಪ್ ಸಂಖ್ಯೆಗೆ ಆ.
೧೮ರ ರಾತ್ರಿ ೧೧ ಗಂಟೆ ಸುಮಾರಿನಲ್ಲಿ ಸಂದೇಶಗಳು ಬಂದಿವೆ’ ಎಂದು ಅಧಿಕಾರಿಯು ತಿಳಿಸಿದ್ದಾರೆ.ಕಳೆದ ೨೦೦೮ ನವೆಂಬರ್ ೨೬ರಂದು ಮುಂಬೈನಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು.ಪಾಕಿಸ್ತಾನದ ೧೦ ಶಸ್ತ್ರಸಜ್ಜಿತ ಭಯೋತ್ಪಾದಕರು ಮುಂಬೈನಲ್ಲಿ ದಾಳಿ ನಡೆಸಿದ್ದರು.
ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿದ ಈ ದಾಳಿಯಲ್ಲಿ ೧೬೬ ಜನರು ಸಾವನ್ನಪ್ಪಿದರು ಮತ್ತು ೩೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.ತನಿಖೆಗೆ ಆಗ್ರಹ:ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರು ಬೆದರಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ವಿಸ್ತೃತ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.
ರಾಜ್ಯದ ರಾಯಗಢ ಜಿಲ್ಲೆಯ ಹರಿಹರೇಶ್ವರ ಕಡಲತೀರದಲ್ಲಿ ಎಕೆ ೪೭, ರೈಫಲ್‌ಗಳು, ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ಹೊತ್ತ ದೋಣಿಯೊಂದು ಕಳೆದ ಆ.೧೮ ಪತ್ತೆಯಾದಾಗ ಭದ್ರತಾ ಭೀತಿಯ ನಂತರ ಈ ಬೆಳವಣಿಗೆ ನಡೆದಿದೆ. ದೋಣಿಯ ಚೇತರಿಕೆಯ ನಂತರ, ಮಹಾರಾಷ್ಟ್ರ ಪೊಲೀಸರಿಗೆ ಜಾಗರೂಕರಾಗಿರಲು ತಿಳಿಸಲಾಗಿದೆ.ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಕಾರ, ದೋಣಿ ಆಸ್ಟ್ರೇಲಿಯಾದ ಪ್ರಜೆಗೆ ಸೇರಿದೆ.
“ಸಮುದ್ರದಲ್ಲಿ ಬೋಟ್ ಇಂಜಿನ್ ಒಡೆದು, ಕೊರಿಯನ್ ಬೋಟ್ ಮೂಲಕ ಜನರನ್ನು ರಕ್ಷಿಸಲಾಗಿದೆ. ಇದೀಗ ಹರಿಹರೇಶ್ವರ ಬೀಚ್ ತಲುಪಿದೆ.
ಮುಂಬರುವ ಹಬ್ಬ ಹರಿದಿನಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಮತ್ತು ಆಡಳಿತ ಮಂಡಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ” ಎಂದು ಅವರು ಹೇಳಿದರು.