೨೧ಸಾವಿರ ಮಂದಿಗೆ ಸೋಂಕು

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುತ್ತಿದೆ. ಇದು ಸಹಜವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮತ್ತೆ ೨೦ ಸಾವಿರ ಗಡಿ ದಾಟಿದ್ದು ಹೊಸದಾಗಿ ೨೧,೪೧೧ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೨೦,೭೬೨ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ಜೊತೆಗೆ ೬೭ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೧,೫೦ ಲಕ್ಷ ಗಡಿ ದಾಟಿದೆ.
ಸದ್ಯ ಈ ಸಂಖ್ಯೆ ೧,೫೦,೧೦೦ ಮಂದಿಯಲ್ಲಿ ಇದೆ ಎಂದು ಸಚಿವಾಲಯ ತಿಳಿಸಿದೆ.ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ದಿನದ ಪಾಸಿಟಿವಿಟಿ ಪ್ರಮಾಣ ಶೇ. ೪.೪೬ ರಷ್ಟು ಹೆಚ್ಚಾಗಿದೆ. ವಾರದ ಸರಾಸರಿ ಪ್ರಮಾಣ ಶೇ.೪ಕ್ಕಿಂತ ಅಧಿಕವಾಗಿದೆ.ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಒಟ್ಟು ಸೋಂಕಿನ ಸಂಖ್ಯೆ ೪,೩೭ ಕೋಟಿಗೆ ಏರಿಕೆಯಾಗಿದ್ದು, ಇಲ್ಲಿಯ ತನಕ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ೪,೩೧,೯೨,೩೯೭ಕ್ಕೆ ಹೆಚ್ಚಾಗಿದೆ.
ಜೊತೆಗೆ ಇದೇ ಅವಧಿಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ೫,೨೫,೯೯೭ಕ್ಕೆ ಹೆಚ್ಚಳವಾಗಿದೆ.ಕಳೆದ ೨೪ ಗಂಟೆಗಳವಧಿಯಲ್ಲಿ ಹೊಸದಾಗಿ ೩೪,೯೩,೨೦೯ ಡೋಸ್ ಲಸಿಕೆ ನೀಡಲಾಗಿದ್ದು ಇಲ್ಲಿಯ ತನಕ ಒಟ್ಟಾರೆ ೨೦೧,೬೮,೧೪,೭೭೧ ಡೋಸ್ ಲಸಿಕೆ ನೀಡಲಾಗಿದೆ.